ETV Bharat / state

ಶಿವಮೊಗ್ಗ: ದೀಪಾವಳಿ ಸಂಭ್ರಮದ ನಡುವೆ ಗಗನಕ್ಕೇರಿದ ಪಟಾಕಿ ದರ

ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲೆಡೆ ಪಟಾಕಿ ಖರೀದಿ ಜೋರಾಗೇ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಪಟಾಕಿ ಖರೀದಿ ಭರ್ಜರಿಯಾಗಿ ನಡೆಯುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇಂದಿನ ಪಟಾಕಿ ದರ ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ.

author img

By

Published : Oct 23, 2022, 7:28 PM IST

Etv crackers-purchasing-at-shivamogga
ಶಿವಮೊಗ್ಗ: ದೀಪಾವಳಿ ಸಂಭ್ರಮದ ನಡುವೆ ಗಗನಕ್ಕೇರಿದ ಪಟಾಕಿ ದರ

ಶಿವಮೊಗ್ಗ: ಬೆಳಕಿನ ಹಬ್ಬ ದೀಪಾವಳಿಯ ಪ್ರಮುಖ ಆಕರ್ಷಣೆಯಾದ ಪಟಾಕಿಗಳ ಮಾರಾಟ ಜಿಲ್ಲೆಯಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಸಿಡಿಮದ್ಧುಗಳ ದರ ಗಗನಕ್ಕೇರಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ಪಟಾಕಿ ದರದಲ್ಲಿ ತುಂಬಾ ಹೆಚ್ಚಳವಾಗಿದೆ.

ಪಟಾಕಿ ದರ ಹೆಚ್ಚಳ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಕೆಲ ಪಟಾಕಿಗಳ ಬೆಲೆಗಳಲ್ಲಿ ಶೇ.40 ರಿಂದ 50 ರಷ್ಟು ದರ ಹೆಚ್ಚಳವಾಗಿದ್ದು, ಗ್ರಾಹಕರು ಅಳೆದುತೂಗಿ ಪಟಾಕಿ ಖರೀದಿಸುವಂತಹ ಸ್ಥಿತಿಯಲ್ಲಿದ್ದಾರೆ.

ನಗರದ ನೆಹರು ಮೈದಾನದಲ್ಲಿ ಪಟಾಕಿ ಮಾರಾಟದ ಸ್ಟಾಲ್​ಗಳನ್ನು ತೆರೆಯಲಾಗಿದ್ದು, ವಿವಿಧ ನಮೂನೆಯ ಪಟಾಕಿಗಳನ್ನು ಮಾರಾಟಕ್ಕಿಡಲಾಗಿದೆ. ಇಲ್ಲಿನ ಬಹುತೇಕ ಸ್ಟಾಲ್​ಗಳ ಎದುರು ಜನಜಂಗುಳಿ ಕಂಡುಬರುತ್ತಿದೆ. ಬೆಲೆ ಹೆಚ್ಚಳದ ನಡುವೆಯೂ ಪಟಾಕಿ ಖರೀದಿ ಜೋರಾಗಿದೆ.

ಇದನ್ನೂ ಓದಿ : ಗಡಿಯಲ್ಲಿ ದೀಪ ಬೆಳಗಿಸಿ, ಪಟಾಕಿ ಸಿಡಿಸಿ ದೀಪಾವಳಿ ಸಂಭ್ರಮಿಸಿದ ಭಾರತೀಯ ಯೋಧರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.