ಶಿವಮೊಗ್ಗ: ಕೊರೊನಾ ಲಾಕ್ಡೌನ್ ಸಡಿಲಿಕೆಯಿಂದಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಇದರ ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನ ಸಹ ಓಪನ್ ಮಾಡಲಾಗಿದೆ. ಮೊದಲಿಗೆ ಹೋಲಿಸಿದ್ರೆ, ಇತ್ತೀಚೆಗೆ ಕುಡಿದು ವಾಹನ ಚಲಾಯಿಸುವವರ ಸಂಖ್ಯೆ ಶೇಕಡಾವಾರು ಕಡಿಮೆಯಾಗಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಿದ್ದ ಪೊಲೀಸ್ ಇಲಾಖೆ, ಈ ವರ್ಷ ಕೇವಲ 154 ಕೇಸ್ಗಳನ್ನ ದಾಖಲಿಸಿದೆ. ಇದರಿಂದಾಗಿ 5.56 ಲಕ್ಷ ರೂ. ದಂಡ ವಸೂಲಿ ಮಾಡಿದೆ.
ಮಷಿನ್ ಪರೀಕ್ಷೆಗೆ ಬ್ರೇಕ್..!
ಸೀನುವುದು, ಕೆಮ್ಮುವುದರಿಂದಲೂ ಕೋವಿಡ್ ಹರಡುವುದರಿಂದ ಈ ಅವಧಿಯಲ್ಲಿ ಮಷಿನ್‌ನಲ್ಲಿ ಡ್ರಂಕ್ ಅಂಡ್ ಡ್ರೈವ್ ಪರೀಕ್ಷೆ ನಡೆಸೋದನ್ನು ನಿಲ್ಲಿಸಲಾಗಿದೆ. ಬದಲಾಗಿ ವೈದ್ಯಕೀಯ ಪರೀಕ್ಷೆ ನಡೆಸಿ ದಂಡ ವಿಧಿಸಲಾಗುತ್ತಿದೆ ಅಂತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತಕುಮಾರ್ ತಿಳಿಸಿದ್ದಾರೆ. ಇದೇ ವೇಳೆ ಮಷಿನ್ ಪರೀಕ್ಷೆ ಇಲ್ಲ ಎಂದು ಜನತೆ ನಿರ್ಲಕ್ಷ್ಯ ತೋರಿದ್ರೆ, ಖಂಡಿತ ದಂಡ ಹಾಕಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಪೊಲೀಸರು ಕೋವಿಡ್ ಭೀತಿಯಿಂದ ಮಷಿನ್‌ನಲ್ಲಿ ಡ್ರಂಕ್ ಅಂಡ್ ಡ್ರೈವ್ ಪರೀಕ್ಷೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ.