ಶಿವಮೊಗ್ಗ: ನಕಲಿ ಔಷಧಿ ಖರೀದಿಸಿದ ಐವರನ್ನು ಸಾಗರ ತಾಲೂಕಿನ ಗೌತಮಪುರ ಗ್ರಾಮ ಪಂಚಾಯಿತಿ ಅಧಿಕಾರಿ ವಾಣಿಶ್ರೀ ಬಂಧಿಸಿದ್ದಾರೆ.

ಲಾಕ್ಡೌನ್ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಶಿವಮೊಗ್ಗ ಜಿಲ್ಲೆ ಸಾಗರಕ್ಕೆ ಇನೋವಾ ಕಾರಿನಲ್ಲಿ ಬಂದಿದ್ದಾರೆ.
ಗ್ರಾಮದ ರಕ್ಷಿತ್ ಎಂಬಾತನಿಂದ ಔಷಧಿ ಖರೀದಿಗೆ ಬಂದಿದ್ದರು ಎನ್ನಲಾಗಿದೆ. ಸದ್ಯ ರಕ್ಷಿತ್ ಪರಾರಿಯಾಗಿದ್ದಾನೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಅತುಲ್ ರಾಯ್ಕರ್, ಧೀರಜ್, ಜಿತೇಂದ್ರ ಚೌಹಾಣ್, ಭಾಗ್ಯಶ್ರೀ ಹಾಗೂ ಆರತಿ ಎಂಬುವರನ್ನು ಸಾಗರ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಲಾಗಿದೆ.
ದೇಶದಲ್ಲಿ ಲಾಕ್ಡೌನ್ ಇದ್ದರೂ ಇವರು ಮಹಾರಾಷ್ಟ್ರದ ಪುಣೆಯಿಂದ ಇಲ್ಲಿಗೆ ಹೇಗೆ ಬಂದರು? ಪೊಲೀಸ್ ಇಲಾಖೆ ಇನ್ನಷ್ಟೇ ಪತ್ತೆ ಹಚ್ಚಬೇಕಿದೆ.