ETV Bharat / state

ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ : ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ಆರೋಪ

ವಿರೋಧ ಪಕ್ಷವೊಂದು ಆರೋಪ ಮಾಡಬೇಕಾದ ವಿಷಯವನ್ನು ಶಾಸಕರೇ ಹೇಳಿದ್ದರಿಂದ ನಾವು ಕೂಡ ಅದನ್ನು ಸ್ವಾಗತಿಸಿದ್ದೆವು. ಆದರೆ, ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವರು ಯಾವ ಕ್ರಮವನ್ನೂ ಕೈಗೊಳ್ಳದೇ ತಟಸ್ಥರಾಗಿದ್ದಾರೆ ಎಂದರು. ಈಶ್ವರಪ್ಪನವರ ಈ ತಟಸ್ಥ ನೀತಿಯನ್ನು ನೋಡಿದರೆ, ಕೇವಲ ಗುತ್ತಿಗೆದಾರರನ್ನು ಹೆದರಿಸಲು ಈ ರೀತಿ ಮಾತನಾಡಿದ್ದಾರೆಯೇ ಎಂಬ ಅನುಮಾನಗಳ ಜೊತೆಗೆ ಈ ಅವ್ಯವಹಾರದಲ್ಲೂ ಕೂಡ ಒಳಒಪ್ಪಂದವಾಗಿದೆ ಎಂಬ ಗುಮಾನಿಗಳು ಬರುತ್ತವೆ..

EX MLA PRASANNA KUMAR
EX MLA PRASANNA KUMAR
author img

By

Published : Jun 26, 2021, 8:47 PM IST

ಶಿವಮೊಗ್ಗ : ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಶಾಸಕ ಕೆ ಬಿ ಪ್ರಸನ್ನಕುಮಾರ್ ಆರೋಪಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರಂತರ ಜ್ಯೋತಿ ಯೋಜನೆ 2019ರ ಮಾರ್ಚ್​ಗೆ ಮುಗಿಯಬೇಕಿತ್ತು. ಆದರೆ, ಸರ್ಕಾರದ ವಿಳಂಬ ನೀತಿಯಿಂದ ಅದು ಇನ್ನೂ ಮುಗಿದಿಲ್ಲ. ಇದರ ಜೊತೆಗೆ ಈ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೂಡ ಬಹಿರಂಗವಾಗಿಯೇ ಕೇಳಿ ಬರುತ್ತಿವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಒಂದೆರಡು ತಿಂಗಳ ಹಿಂದೆ ನಡೆದ ಸಭೆಯಲ್ಲಿಯೇ ಸುಮಾರು 5 ಕೋಟಿ ರೂ. ಭಾರಿ ಭ್ರಷ್ಟಾಚಾರವಾಗಿದೆ. ಮೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಈ ಅವ್ಯವಹಾರ ನಡೆಸಿದ್ದಾರೆ. ಇದನ್ನು ನಾನು ಸಹಿಸುವುದಿಲ್ಲ. ಸರಿಯಾದ ಕ್ರಮ ತೆಗೆದುಕೊಳ್ಳುವೆ ಎಂದು ಹೇಳಿಕೆ ನೀಡಿದ್ದರು.

ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಆರೋಪ

ವಿರೋಧ ಪಕ್ಷವೊಂದು ಆರೋಪ ಮಾಡಬೇಕಾದ ವಿಷಯವನ್ನು ಶಾಸಕರೇ ಹೇಳಿದ್ದರಿಂದ ನಾವು ಕೂಡ ಅದನ್ನು ಸ್ವಾಗತಿಸಿದ್ದೆವು. ಆದರೆ, ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವರು ಯಾವ ಕ್ರಮವನ್ನೂ ಕೈಗೊಳ್ಳದೇ ತಟಸ್ಥರಾಗಿದ್ದಾರೆ ಎಂದರು. ಈಶ್ವರಪ್ಪನವರ ಈ ತಟಸ್ಥ ನೀತಿಯನ್ನು ನೋಡಿದರೆ, ಕೇವಲ ಗುತ್ತಿಗೆದಾರರನ್ನು ಹೆದರಿಸಲು ಈ ರೀತಿ ಮಾತನಾಡಿದ್ದಾರೆಯೇ ಎಂಬ ಅನುಮಾನಗಳ ಜೊತೆಗೆ ಈ ಅವ್ಯವಹಾರದಲ್ಲೂ ಕೂಡ ಒಳಒಪ್ಪಂದವಾಗಿದೆ ಎಂಬ ಗುಮಾನಿಗಳು ಬರುತ್ತವೆ.

ಆದ್ದರಿಂದ ಸಚಿವರು ಕೂಡಲೇ ಈ ಯೋಜನೆಯಲ್ಲಿ ಆಗಿರುವ ಅವ್ಯವಹಾರವನ್ನು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕು. ಹಾಗೂ ಹೆಚ್ಚುವರಿ ಹಣ ಖರ್ಚು ಮಾಡಿದ್ದರೆ ಅದನ್ನು ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದರು. ಇದಲ್ಲದೇ, ಈ ಯೋಜನೆ ಹಳ್ಳಿಗರನ್ನು ತಲುಪಿಲ್ಲ. ಮೆಸ್ಕಾಂನ ಸುಮಾರು 10ಕ್ಕೂ ಹೆಚ್ಚು ಇಂಜಿನಿಯರ್​ಗಳು ಈ ಬಗ್ಗೆ ಮಾಹಿತಿ ಕೂಡ ನೀಡಿದ್ದಾರೆ. ಫೀಡರ್‌ಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ನಿಜ. ಕೂಡಲೇ ಇದರ ಸಂಪೂರ್ಣ ತನಿಖೆಯಾಗಲಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.