ಶಿವಮೊಗ್ಗ: ಕೊರೊನಾ ಇನ್ನೆರಡು ವರ್ಷಗಳಲ್ಲಿ ಅಂತ್ಯವಾಗಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.
ತಾಲೂಕು ಕುಂಚೇನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ರೋಗ ರುಜಿನಗಳು ಇನ್ನೂ 8-10 ವರ್ಷ ಇರಲಿದೆ ಎಂದು ಹೇಳಿದ್ದೆ. ಆದರೆ, ಈಗ ಔಷಧಗಳು ಬರುವುದನ್ನು ನೋಡಿದ್ರೆ 2-3 ವರ್ಷಗಳಲ್ಲಿ ಕೊರೊನಾ ಅಂತ್ಯವಾಗಲಿದೆ ಎಂದರು.
ಕುಂಭ ರಾಶಿಯಲ್ಲಿ ಗುರು ಪ್ರವೇಶ ಆಗಿರುವುದರಿಂದ ಉತ್ತಮ ಮಳೆಯಾಗುತ್ತದೆ. ಕೆರೆ - ಕಟ್ಟೆಗಳು ತುಂಬುತ್ತವೆ. ಕೆಲವು ಕಡೆಗಳಲ್ಲಿ ವಿನಾಶ ಆಗುತ್ತದೆ. ಧನಸ್ಸು ರಾಶಿಯಲ್ಲಿ ಗುರು ಬಂದರೆ ಜಗವೆಲ್ಲ ತಳಮಳವಾಗುತ್ತದೆ. ಯುದ್ದ, ಹೋರಾಟ, ಜಗಳ ನಡೆಯುತ್ತದೆ. ಈ ಸಂವತ್ಸರದ ಕಾರ್ತಿಕ ಮಾಸದವರೆಗೆ ಇದು ಇರುತ್ತದೆ. ಆದರೆ ಭಯಪಡುವ ಅವಶ್ಯಕತೆ ಇಲ್ಲ ಎಂದರು.
ಸೂತ್ರಧಾರಿ ಪಟ್ಟ ಅಳಿಯುತ್ತದೆ. ಸೂತ್ರಧಾರಿ ಸರ್ಕಾರವನ್ನು ನಡೆಸುತ್ತದೆ ಎಂದು ಹೇಳಿದ್ದೆ ಅದರಂತೆ ಮುಖ್ಯಮಂತ್ರಿ ಪಟ್ಟ ಹೋಯ್ತು. ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದಾರೆ. ಜಾಣ ವ್ಯಕ್ತಿ, ವಿವೇಕ ಇದೆ. ಆದರೆ ಹಿಂದಿರುವ ಸೂತ್ರಧಾರಿ ಸರ್ಕಾರ ನಡೆಸುತ್ತಾರೆ, ತೊಂದರೆ ಏನಿಲ್ಲ ಎಂದರು.
ಓದಿ: ವೀರಭದ್ರೇಶ್ವರ ಪ್ರಶಸ್ತಿಗೆ ಬಿಎಸ್‌ವೈ ಆಯ್ಕೆ: ಸಿಎಂ ಬೊಮ್ಮಾಯಿಂದ ಪ್ರಶಸ್ತಿ ಪ್ರದಾನ