ETV Bharat / state

ಸಿಎಂ ತವರು ಜಿಲ್ಲೆಗೆ ಬಂದ ಕೊವ್ಯಾಕ್ಸಿನ್, ಪೂಜೆ ಮಾಡಿ ಸ್ವಾಗತಿಸಿದ ಜಿಲ್ಲಾಡಳಿತ.. - ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಜಿಲ್ಲೆಯಲ್ಲಿ 9 ಕಡೆ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ನಾಳೆ ಶಿವಮೊಗ್ಗದ ಸಿಮ್ಸ್ ಆಸ್ಪತ್ರೆ, ತುಂಗಾ ನಗರದ ಪ್ರಾಥಮಿಕ‌ ಆರೋಗ್ಯ ಕೇಂದ್ರ, ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಹಾಕಲಾಗುತ್ತದೆ. ಪ್ರತಿ ಲಸಿಕಾ ಬೂತ್ ನಲ್ಲೂ 100 ಜನರಿಗೆ ಲಸಿಕೆ ಹಾಕಲಾಗುವುದು.

corona-vaccine-coming-to-shimogga-district
ಸಿಎಂ ತವರು ಜಿಲ್ಲೆಗೆ ಬಂದ ಕೊವ್ಯಾಕ್ಸಿನ್
author img

By

Published : Jan 15, 2021, 3:19 PM IST

ಶಿವಮೊಗ್ಗ: ಸಿಎಂ ತವರು ಜಿಲ್ಲೆಗೆ ಇಂದು ಕೊರೊನಾ ವ್ಯಾಕ್ಸಿನ್ ಆಗಮನವಾಗಿದ್ದು, ಚಿತ್ರದುರ್ಗದಿಂದ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಆಗಮಿಸಿತು.

ಸಿಎಂ ತವರು ಜಿಲ್ಲೆಗೆ ಬಂದ ಕೊವ್ಯಾಕ್ಸಿನ್

ಶಿವಮೊಗ್ಗದ ಸಿಮ್ಸ್ ಮೆಗ್ಗಾನ್ ಅಸ್ಪತ್ರೆಯ ಆವರಣದಲ್ಲಿ ಇರುವ ಜಿಲ್ಲಾ ಔಷಧ ಉಗ್ರಾಣಕ್ಕೆ ವ್ಯಾಕ್ಸಿನ್ ಆಗಮನವಾಯಿತು. ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ವ್ಯಾಕ್ಸಿನ್ ಬಾಕ್ಸ್ ಗೆ ಪೂಜೆ ಸಲ್ಲಿಸಿ ಬರ ಮಾಡಿಕೊಂಡರು. ನಂತರ ಔಷಧ ಉಗ್ರಾಣದಲ್ಲಿ ಇರುವ ಕೋಲ್ಡ್ ಸ್ಟೋರೇಜ್​ನಲ್ಲಿ ವ್ಯಾಕ್ಸಿನ್ ಅನ್ನು ಇಡಲಾಯಿತು. ವ್ಯಾಕ್ಸಿನ್ ಜೊತೆ ಸಿರಿಂಜ್​ಗಳನ್ನು ಸಹ ಕಳುಹಿಸಲಾಗಿದೆ.

ಓದಿ: ಸಿಡಿ ವಿಚಾರ, ಸಂಪುಟ ವಿಸ್ತರಣೆ ಅಸಮಾಧಾನ ಕುರಿತು ಮಾತನಾಡಬೇಡಿ: ಶಾಸಕರು, ಸಚಿವರಿಗೆ ಬಿಜೆಪಿ ಸೂಚನೆ!

ಶಿವಮೊಗ್ಗ ಜಿಲ್ಲೆಗೆ ಎರಡು ಹಂತದ ಲಸಿಕೆಯಾದ 45 ಸಾವಿರ ಕೊರೊನಾ ವ್ಯಾಕ್ಸಿನ್ ಬಂದಿದೆ. ಮೊದಲ ಹಂತದಲ್ಲಿ 23 ಸಾವಿರ ಜನ ವ್ಯಾಕ್ಸಿನ್ ಹಾಕಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 9 ಕಡೆ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.

ನಾಳೆ ಶಿವಮೊಗ್ಗದ ಸಿಮ್ಸ್ ಆಸ್ಪತ್ರೆ, ತುಂಗಾ ನಗರದ ಪ್ರಾಥಮಿಕ‌ ಆರೋಗ್ಯ ಕೇಂದ್ರ, ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ನಾಳೆ ಲಸಿಕೆಯನ್ನು ಹಾಕಲಾಗುತ್ತದೆ. ಪ್ರತಿ ಲಸಿಕಾ ಬೂತ್ ನಲ್ಲೂ 100 ಜನರಿಗೆ ಲಸಿಕೆ ಹಾಕಲಾಗುವುದು ಎಂದರು.

ನಾಳೆ ಬೆಳಗ್ಗೆ 10:30 ರಿಂದ ಲಸಿಕೆ ಹಾಕಲಾಗುವುದು. ಇದಕ್ಕಾಗಿ ಆಯಾ ತಾಲೂಕಿನ ಆರೋಗ್ಯಾಧಿಕಾರಿಗಳಿಗೆ ಲಸಿಕೆ ತಲುಪಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಎರಡನೇ ಹಂತದ ಲಸಿಕೆ ನೀಡುವಾಗ ಇದೇ ರೀತಿ ವಿತರಣೆ ಮಾಡಲಾಗುವುದು. ಪ್ರತಿ ದಿನ ನೂರು ಜನರಂತೆ ವಿಂಗಡಣೆ ಮಾಡಲಾಗಿದ್ದು, ಲಸಿಕೆ ಪಡೆಯುವ ಆರೋಗ್ಯ ಸಿಬ್ಬಂದಿಗೆ ತಮ್ಮ ಲಸಿಕಾ ಅವಧಿ ಯಾವುದೆಂದು ಮೆಸೇಜ್ ಮೂಲಕ ತಿಳಿಸಲಾಗಿದೆ.

ಅವರು ಆ ಆವಧಿಗೆ ಬಂದು ಲಸಿಕೆ ಪಡೆಯಬಹುದಾಗಿದೆ. ಅವರಿಗೆ ನೀಡಿದ ಸಮಯಕ್ಕೆ ಬರಲಾಗದಿದ್ದರೆ, ಮರು ದಿನ ಲಸಿಕೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.