ಶಿವಮೊಗ್ಗ: ಜಿಲ್ಲೆಯಲ್ಲಿ ಗುರುವಾರ ಬರೋಬ್ಬರಿ 755 ಜನರಿಗೆ ಕೊರೊನಾ ಸೋಂಕು ತಗುಲಿದೆ.
ನಿನ್ನೆ 3 ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 374ಕ್ಕೆ ತಲುಪಿದೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 398, ಕೋವಿಡ್ ಕೇರ್ ಸೆಂಟರ್ನಲ್ಲಿ 16, ಖಾಸಗಿ ಆಸ್ಪತ್ರೆಯಲ್ಲಿ 305, ಆಯುರ್ವೇದ ಆಸ್ಪತ್ರೆಯಲ್ಲಿ 91 ಹಾಗೂ ಹೋಮ್ ಐಸೋಲೇಷನ್ನಲ್ಲಿ 1,629 ಸೋಂಕಿತರು ಸೇರಿ ಒಟ್ಟು 2,439 ಮಂದಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಝೋನ್ಗಳ ಸಂಖ್ಯೆ 7,242ಕ್ಕೆ ಏರಿಕೆಯಾಗಿದೆ. ಇದರಲ್ಲಿ 6,769 ಝೋನ್ಗಳು ವಿಸ್ತರಣೆಯಾಗಿವೆ.
ತಾಲೂಕುವಾರು ಸೋಂಕಿತರ ಸಂಖ್ಯೆ:
ಶಿವಮೊಗ್ಗ 221, ಭದ್ರಾವತಿ 103, ಶಿಕಾರಿಪುರ 67, ತೀರ್ಥಹಳ್ಳಿ 108, ಸೊರಬ 87, ಸಾಗರ 117, ಹೊಸನಗರ 33 ಹಾಗೂ ಹೊರ ಜಿಲ್ಲೆಯಿಂದ 19 ಜನರಿಗೆ ಕೋವಿಡ್ ದೃಢಪಟ್ಟಿದೆ. ನಿನ್ನೆ 2,679 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 2,516 ಜನರ ವರದಿ ಬಂದಿದೆ.
ಇದನ್ನೂ ಓದಿ: ರಾಜ್ಯಪಾಲ ಹುದ್ದೆ ಆಸೆಗೆ ನಿವೃತ್ತ ನ್ಯಾಯಮೂರ್ತಿ ಲಂಚ ನೀಡಿರುವುದು ದುರದೃಷ್ಟಕರ: ಹೈಕೋರ್ಟ್