ETV Bharat / state

ಲಾಕ್​ಡೌನ್​ ಎಫೆಕ್ಟ್​​: ಬಸ್​ ನಿಲ್ಲಿಸಲು ಜಾಗವಿಲ್ಲದೆ ಪರದಾಡುತ್ತಿರುವ ಮಾಲೀಕರು - ಲಾಕ್​ಡೌನ್​ ಎಫೆಕ್ಟ್​​ ಇನ್​ ಶಿವಮೊಗ್ಗ

ಲಾಕ್​ಡೌನ್​ ಜಾರಿಯಾದಾಗಿನಿಂದ ಸಾರಿಗೆ ಇಲಾಖೆ ಬಂದ್​ ಆಗಿದ್ದು, ಪರಿಣಾಮ ಬಸ್​ಗಳು ನಿಲ್ದಾಣಗಳಲ್ಲೇ ನಿಂತಿವೆ. ಸರ್ಕಾರಿ ಬಸ್​ಗಳಿಗೆ ನಿಲ್ದಾಣದ​ ವ್ಯವಸ್ಥೆ ಇದೆ. ಆದರೆ ಖಾಸಗಿ ಬಸ್​​ಗಳಿಗೆ ಯಾವುದೆ ಟರ್ಮಿನಲ್​​ ಸೌಲಭ್ಯವಿಲ್ಲದ ಕಾರಣ ಬಿಸಿಲಿನಲ್ಲೇ ನಿಂತು ಹಾಳಾಗುತ್ತಿವೆ.

there is no place to stand private buses at shimoga
ಬಸ್​ ನಿಲ್ಲಿಸಲು ಜಾಗವಿಲ್ಲದೆ ಪರದಾಡುತ್ತಿರುವ ಮಾಲೀಕರು
author img

By

Published : Apr 28, 2020, 8:19 PM IST

Updated : Apr 28, 2020, 10:15 PM IST

ಶಿವಮೊಗ್ಗ: ಕೊರೊನಾ ಲಾಕ್​ಡೌನ್​ನಿಂದ ಬಸ್​​ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಖಾಸಗಿ ಬಸ್​ ಮಾಲೀಕರು ತಮ್ಮ ಬಸ್​ಗಳನ್ನು ನಿಲ್ಲಿಸಲು ನಿಲ್ದಾಣದ​ ವ್ಯವಸ್ಥೆಯಿಲ್ಲದೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.

ಬಸ್​ ನಿಲ್ಲಿಸಲು ಜಾಗವಿಲ್ಲದೆ ಪರದಾಡುತ್ತಿರುವ ಮಾಲೀಕರು

ಲಾಕ್​ಡೌನ್​ ಜಾರಿಯಾದಗಿನಿಂದ ಸಾರಿಗೆ ಇಲಾಖೆ ಬಂದ್​ ಆಗಿದ್ದು, ಪರಿಣಾಮ ಬಸ್​ಗಳು ನಿಲ್ದಾಣಗಳಲ್ಲೇ ನಿಂತಿವೆ. ಸರ್ಕಾರಿ ಬಸ್​ಗಳಿಗೆ ನಿಲ್ದಾಣದ​ ವ್ಯವಸ್ಥೆಯಿದೆ. ಆದರೆ ಖಾಸಗಿ ಬಸ್​​ಗಳಿಗೆ ಯಾವುದೇ ಟರ್ಮಿನಲ್​​ ಸೌಲಭ್ಯವಿಲ್ಲದ ಕಾರಣ ಬಿಸಿಲಿನಲ್ಲೇ ನಿಂತು ಹಾಳಾಗುತ್ತಿವೆ.

ಸುಮಾರು ಒಂದು ತಿಂಗಳಿಂದ ಯಾವುದೇ ಬಸ್​ಗಳು ರಸ್ತೆಗಿಳಿದಿಲ್ಲ. ಇದರಿಂದ ಬಸ್​​ ಮಾಲೀಕರು ಪರದಾಡುತ್ತಿದ್ದಾರೆ. ಇದರ ನಡುವೆ ಕಳ್ಳರಿಂದ ತಮ್ಮ ಬಸ್​​ಗಳನ್ನು ರಕ್ಷಣೆ ಮಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಬಸ್​​ಗಳು ಬಿಸಿಲಲ್ಲಿ ನಿಂತಿರುವ ಪರಿಣಾಮ ಟೈಯರ್​ಗಳು ಹಾಳಾಗುತ್ತಿವೆ. ಇಂಜಿನ್​ಗಳು ತುಕ್ಕು ಹಿಡಿಯುತ್ತಿವೆ. ಬಸ್​ಗಳ ಪೇಂಯಿಂಟ್​ ಕೂಡ ಹೋಗುತ್ತಿದ್ದು, ಲಾಕ್​​ಡೌನ್ ಮುಗಿದ ಮೇಲೆ ಬಸ್​ಗಳು ರಸ್ತೆಗಿಳಿಯುವುದು‌ ಡೌಟ್ ಅಂತಾನೆ ಹೇಳಬಹುದು.

ಸಂಕಷ್ಟದಲ್ಲಿ ಕಾರ್ಮಿಕರು:

ಜಿಲ್ಲೆಯಲ್ಲಿ ಸಾವಿರಾರು ಖಾಸಗಿ ಬಸ್​ಗಳಿದ್ದು, ಡ್ರೈವರ್, ಕ್ಲೀನರ್, ಏಜೆಂಟ್, ಕಂಡಕ್ಟರ್ ಸೇರಿದಂತೆ ಸಾವಿರಾರು ಜನರು ಈ ಕಾಯಕವನ್ನು ಅವಲಂಬಿಸಿದ್ದಾರೆ. ಆದರೆ ಲಾಕ್​ಡೌನ್​ನಿಂದ ಕೆಲಸವಿಲ್ಲದೆ, ಸಂಬಳವಿಲ್ಲದೆ ಇವರೆಲ್ಲರ ಬದುಕು ಕಷ್ಟದಲ್ಲಿ ಸಿಲುಕಿದೆ.

ತೆರಿಗೆಯಲ್ಲಿ‌ ವಿನಾಯಿತಿ ನೀಡಿ:

ಬ್ಯಾಂಕ್ ಹಾಗೂ ಖಾಸಗಿ ಸಂಸ್ಥೆಗಳಿಂದ ಸಾಲ ಪಡೆದು ಬಸ್‌ಗಳನ್ನು ಖರೀದಿಸಲಾಗಿದೆ. ಈಗ ಸರ್ಕಾರ ಮೂರು ತಿಂಗಳು ಸಾಲದ ಕಂತನ್ನು ಕಟ್ಟುವುದು ಬೇಡ ಅಂತಲೇ ಹೇಳಿದೆ. ಆದರೆ ಮುಂದಿನ ದಿನಗಳಲ್ಲಾದ್ರೂ‌ ಆ ಸಾಲವನ್ನು ಮಾಲೀಕರು ಭರಿಸಬೇಕಾಗುತ್ತದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಸ್ ಮಾಲೀಕರ ನೆರವಿಗೆ ಬರಬೇಕಿದೆ ಎಂದು ಮನವಿ ಮಾಡಿದ್ದಾರೆ.

ಸಾರಿಗೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ನೌಕರರಿಗೆ ಬಸ್​​​​​​​​​ ಮಾಲೀಕರು ತಮ್ಮ ಕೈಲಾದಷ್ಟು ಸಂಬಳ ನೀಡಿದ್ದು, ಮುಂದೆ ಅವರಿಗೆ ಸಂಬಳ ನೀಡುವುದು ಹೇಗೆ ಎಂಬ ಚಿಂತೆ ಎದುರಾಗಿದೆ. ಸರ್ಕಾರ ತಮ್ಮ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.

Last Updated : Apr 28, 2020, 10:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.