ಶಿವಮೊಗ್ಗ: ಜಿಲ್ಲಾಡಳಿತದ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಮೇಯರ್ ಸುವರ್ಣ ಶಂಕರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕೊರೊನಾ ಲಾಕ್ಡೌನ್ನಿಂದಾಗಿ ಸರ್ಕಾರಿ ಜಯಂತಿಗಳನ್ನು ಸರಳವಾಗಿ ಆಚರಣೆ ಮಾಡಲು ಸರ್ಕಾರದ ಆದೇಶವಿದೆ. ಹೀಗಾಗಿ ಭಗೀರಥರ ಭಾವಚಿತ್ರವನ್ನಿಟ್ಟು ಅದಕ್ಕೆ ವಿಶೇಷ ಪೂಜೆ ಸಲ್ಲಿಸಿ ನೆರೆದಿದ್ದ ಗಣ್ಯರೆಲ್ಲರು ಪುಷ್ಪ ನಮನ ಸಲ್ಲಿಸಿದರು. ನಂತರ ನೆರೆದಿದ್ದ ಗಣ್ಯರು ಭಗೀರಥರ ಪ್ರಯತ್ನ, ತನ್ನ ಪೂರ್ವಜರಿಗೆ ಮುಕ್ತಿ ನೀಡಲು ನೂರಾರು ವರ್ಷಗಳ ಕಾಲ ತಪಸ್ಸು ನಡೆಸಿ, ಕೈಲಾಸದಿಂದ ಗಂಗೆಯನ್ನು ಕರೆ ತಂದು ಪೂರ್ವಜರಿಗೆ ಮುಕ್ತಿ ನೀಡಿದ ಅಪ್ರತಿಮ ಸಾಧನೆಯನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಉಪಮೇಯರ್ ಸುರೇಖಾ ಮುರುಳೀಧರ್, ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಸತ್ಯನಾರಾಯಣ್, ಎನ್. ಮಂಜುನಾಥ್, ವೆಂಕಟೇಶ್ ಸೇರಿ ಇತರರು ಹಾಜರಿದ್ದರು.