ETV Bharat / state

ಕೊರೊನಾ ಹಿನ್ನೆಲೆ ಪ್ರಸಿದ್ಧ ಶ್ರೀ ಸಿಗಂದೂರಿನ ಮೂಲ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ

ದೇವಾಲಯದಲ್ಲಿ ಸಂಕ್ರಾಂತಿ ಅಂಗವಾಗಿ ಚಂಡಿಕಾ ಹೋಮ ನಡೆಸಲಾಯಿತು. ಮಧ್ಯಾಹ್ನ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರು ದೇವಸ್ಥಾನಕ್ಕೆ ಬಂದು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಪ್ರತಿವರ್ಷ ಸಿಗಂದೂರು ಸಂಕ್ರಾಂತಿ ಜಾತ್ರೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರವೇ ಹರಿದು ಬರುತಿತ್ತು..

Corona Background Special worship at the Chowdeshwari Temple in Sigandur
ಮೂಲ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ
author img

By

Published : Jan 14, 2022, 7:41 PM IST

ಶಿವಮೊಗ್ಗ : ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಜಿಲ್ಲೆಯ ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯ ಮೂಲ ಸ್ಥಳದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಕೊರೊನಾ ಹಿನ್ನೆಲೆ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯದ ಕಾರಣ ಮೂಲ ಸ್ಥಳದಲ್ಲಿ ಪೂಜೆ ನಡೆಸಲಾಯಿತು.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ಹಿನ್ನೀರು ಪ್ರದೇಶದಲ್ಲಿರುವ ಸಿಗಂದೂರಿನ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಪ್ರತಿ ಸಂಕ್ರಾಂತಿಯಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ.

ಅದರಂತೆ ಶುಕ್ರವಾರವೂ ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ವಿವಿಧ ಪೂಜಾ ವಿಧಿ-ವಿಧಾನಗಳು ವಿಧ್ಯುಕ್ತವಾಗಿ ನೆರವೇರಿದವು.

ಎರಡು ದಿನಗಳ ಜಾತ್ರೆ ನಡೆಸುವುದಾಗಿ ಪೂರ್ವ ನಿರ್ಧಾರವಾಗಿತ್ತಾದರೂ, ಕೋವಿಡ್ ಮಾರ್ಗಸೂಚಿ ಹಾಗೂ ವಾರಾಂತ್ಯ ಕರ್ಫ್ಯೂ ನಿಮಿತ್ತ ಜಾತ್ರೆ ರದ್ದಾಗಿದೆ.

Special worship at original Chowdeshwari Temple
ಮೂಲ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ

ಈ ಬಾರಿ ಸಂಕ್ರಾಂತಿ ಜಾತ್ರೆ ಅಂಗವಾಗಿ ಸರಳ ಪೂಜೆ ಆಯೋಜಿಸಲಾಗಿತ್ತು. ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪೂರ್ವ ನಿರ್ಧರಿತ ಪ್ರವಾಸದಂತೆ ದೇಗುಲಕ್ಕೆ ಭೇಟಿ ನೀಡಿದರು.

ಶರಾವತಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಚೌಡೇಶ್ವರಿ ಮೂಲಸ್ಥಳ ಸೀಗೆಕಣಿವೆಯಲ್ಲಿ ಇಂದು ಶ್ರೀಗಳ ಸಮ್ಮುಖದಲ್ಲಿ ಧರ್ಮದರ್ಶಿ ರಾಮಪ್ಪ ದಂಪತಿ ಪೂಜೆ ನೆರವೇರಿಸಿದರು.

ಮಂಗಳೂರು ಕದ್ರಿಯಿಂದ ಬಂದಿದ್ದ ಪುರೋಹಿತರು ದೇವಿಗೆ ಪೂಜೆ ನೆರವೇರಿಸಿದರು. ಮೂಲಸ್ಥಳದಲ್ಲಿ ಪೂಜೆಯಾದ ಬಳಿಕ ಜ್ಯೋತಿಯನ್ನು ತಂದು ಸಿಗಂದೂರು ದೇವಸ್ಥಾನದಲ್ಲಿ ಇಡಲಾಯಿತು.

ಇದನ್ನೂ ಓದಿ: ವಿಜಯಪುರ : ಕೋವಿಡ್​ ಮಧ್ಯೆಯೂ ಅದ್ದೂರಿಯಾಗಿ ನಡೆದ ಶ್ರೀ ಸಿದ್ಧೇಶ್ವರ ಜಾತ್ರೆ

ದೇವಾಲಯದಲ್ಲಿ ಸಂಕ್ರಾಂತಿ ಅಂಗವಾಗಿ ಚಂಡಿಕಾ ಹೋಮ ನಡೆಸಲಾಯಿತು. ಮಧ್ಯಾಹ್ನ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರು ದೇವಸ್ಥಾನಕ್ಕೆ ಬಂದು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಪ್ರತಿವರ್ಷ ಸಿಗಂದೂರು ಸಂಕ್ರಾಂತಿ ಜಾತ್ರೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರವೇ ಹರಿದು ಬರುತಿತ್ತು.

ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಜಾತ್ರೆ ನಡೆಯುತ್ತಿಲ್ಲ. ಈ ಸಂದರ್ಭ ನಡೆಯುತ್ತಿದ್ದ ವಿವಿಧ ಪೂಜಾ ಸೇವೆ, ಮೆರವಣಿಗೆ, ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ.

ಜಾತ್ರೆಗೆ ನಿರ್ಬಂಧ ಇದ್ದ ಕಾರಣ ಸಿಗಂದೂರು ಹಾಗೂ ಸೀಗೆಕಣಿವೆಯಲ್ಲಿ ಸರಳ ಪೂಜೆ ನೆರವೇರಿಸಲಾಯಿತು. ಸರ್ಕಾರದ ಮಾರ್ಗಸೂಚಿ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ದೇಗುಲದೊಳಗೆ ಭಕ್ತರ ಪ್ರವೇಶಕ್ಕೆ ನಿರಾಕರಿಸಲಾಗಿತ್ತು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.