ETV Bharat / state

ಶಿವಮೊಗ್ಗ: ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ ರಕ್ಷಿಸಿದ ಪೊಲೀಸರು

Shivamogga: ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯನ್ನು ಪೊಲೀಸ್ ಕಾನ್ಸ್​ಟೇಬಲ್​​ಗಳಾದ ರಾಘವೇಂದ್ರ ಹಾಗೂ ಚಾಲಕ ಚನ್ನಕೇಶವ ರಕ್ಷಿಸಿದ್ದಾರೆ. ಇವರ ಕಾರ್ಯಕ್ಕೆ ಎಸ್​ಪಿ ಅಭಿನಂದಿಸಿದ್ದಾರೆ.

Cops
ಪೊಲೀಸ್​ ಸಿಬ್ಬಂದಿ
author img

By ETV Bharat Karnataka Team

Published : Aug 29, 2023, 10:01 AM IST

ಶಿವಮೊಗ್ಗ: ಗಾಜಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯನ್ನು ಪೊಲೀಸರಿಬ್ಬರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿನೋಬ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫ್ರೀಡಂ ಪಾರ್ಕ್​ನಲ್ಲಿ 17 ವರ್ಷದ ಬಾಲಕಿಯೊಬ್ಬಳು, ಗಾಜಿನಿಂದ ತನ್ನ ಕೈಯಿಂದ ಕೊಯ್ದುಕೊಂಡು ಒದ್ದಾಡುತ್ತಿದ್ದಳು. ಈ ವೇಳೆ, ತುರ್ತು ಪಾರುಗಾಣಿಕಾ ವಾಹನ (ERV)ದಲ್ಲಿದ್ದ ಪೊಲೀಸ್ ಕಾನ್ಸ್​ಟೇಬಲ್​​ಗಳಾದ ರಾಘವೇಂದ್ರ ಹಾಗೂ ಚಾಲಕ ಚನ್ನಕೇಶವ ಅವರು ರಕ್ತದ ಮಡುವಿನಲ್ಲಿದ್ದ ಬಾಲಕಿಯನ್ನು ತಕ್ಷಣ ತಮ್ಮದೇ ವಾಹನದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಪೊಲೀಸ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬಾಲಕಿಯ ಜೀವ ಉಳಿದಿದೆ. ಈ ಇಬ್ಬರು ಪೊಲೀಸರು ಆ್ಯಂಬುಲೆನ್ಸ್​ಗೆ ಕಾಯದೇ ಇಆರ್​ವಿ ವಾಹನದಲ್ಲಿ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಸದ್ಯ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್​ ಸಿಬ್ಬಂದಿಯ ಈ ಮಾನವೀಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಪೊಲೀಸರ ಸಮಯ ಪ್ರಜ್ಞೆಯನ್ನು ಎಸ್​ಪಿ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಸಂಚರಿಸುತ್ತಿದ್ದ ರೈಲಿಗೆ ಹತ್ತಲು ಹೋದ ವೃದ್ಧನನ್ನು ರಕ್ಷಿಸಿದ ರೈಲ್ವೇ ಸಿಬ್ಬಂದಿ

ಹಿರಿಯ ನಾಗರಿಕರೊಬ್ಬರನ್ನು ರಕ್ಷಿಸಿದ ರೈಲ್ವೆ ಭದ್ರತಾ ಸಿಬ್ಬಂದಿ: ಸಂಚರಿಸುತ್ತಿದ್ದ ರೈಲು ಹತ್ತಲು ಹೋಗಿ ಆಯತಪ್ಪಿ ಬೀಳುತ್ತಿದ್ದ ಹಿರಿಯ ನಾಗರಿಕರೊಬ್ಬರನ್ನು ರೈಲ್ವೆ ಭದ್ರತಾ ಸಿಬ್ಬಂದಿ ರಕ್ಷಿಸಿರುವ ಘಟನೆ ಮಂಗಳೂರು ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ನಡೆದಿತ್ತು.

ಕಣ್ಣೂರಿನ ವಯಲ್‌ವೀಡು ಮೂಲದ ಶಂಕರ್ ಬಾಬು(70) ಅದೃಷ್ಟವಶಾತ್​ ಸಾವಿನ ದವಡೆಯಿಂದ ಪಾರಾದವರು. ಜು. 22ರ ಸಂಜೆ 6.15ರ ಸುಮಾರಿಗೆ ಶಂಕರಬಾಬು ಅವರು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಮಲಬಾರ್ ಎಕ್ಸ್‌ಪ್ರೆಸ್ ರೈಲು ಸಂಚಾರದಲ್ಲಿದ್ದಾಗಲೇ ಹತ್ತಲು ಯತ್ನಿಸಿದ್ದಾರೆ. ಈ ವೇಳೆ, ರೈಲು ವೇಗ ಪಡೆದ ಕಾರಣ ಅವರು ರೈಲಿನ ಎಸ್-6 ಕೋಚ್‌ಗೆ ಹತ್ತಲು ಸಾಧ್ಯವಾಗದೇ ಹ್ಯಾಂಡಲ್‌ನಲ್ಲಿ ನೇತಾಡುತ್ತಿದ್ದರು. ಇದನ್ನು ಗಮನಿಸಿದ ಆರ್‌ಪಿಎಫ್ ಸಿಬ್ಬಂದಿ ಪ್ರಕಾಶ್ ತಕ್ಷಣ ಧಾವಿಸಿ ಬಂದು ಶಂಕರ್ ಬಾಬು ಅವರನ್ನು ರಕ್ಷಣೆ ಮಾಡಿದ್ದರು.

ಮಹಿಳೆಯನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ ಕಾನ್ಸ್​​ಟೇಬಲ್​​​: ಕೆರೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ರಕ್ಷಿಸಿರುವ ಘಟನೆ ಅಶೋಕ ವೃತ್ತದ ಕೋಟೆ ಕೆರೆಯಲ್ಲಿ ಇತ್ತೀಚೆಗೆ ನಡೆದಿತ್ತು. ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಶಿವಲೀಲಾ ಪರ್ವತ ಗೌಡರ (42) ಕೆರೆಯಲ್ಲಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ‌ ಮಹಿಳೆ. ಜೀವನದಲ್ಲಿ ‌ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಈ ಮಹಿಳೆ ಯತ್ನಿಸಿದ್ದರು. ಕೆರೆಯಲ್ಲಿ ಮಹಿಳೆ ಮುಳುಗುತ್ತಿರುವ ಸುದ್ದಿ ತಿಳಿದ ತಕ್ಷಣವೇ ಅಲ್ಲಿಯೇ ಅಶೋಕ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉತ್ತರ ಸಂಚಾರಿ ಪೊಲೀಸ್ ಕಾನ್ಸ್​ಟೇಬಲ್​​​ ಕಾಶಿನಾಥ್ ಈರಗಾರ್ ಅವರು ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು ಮಹಿಳೆಯನ್ನು ರಕ್ಷಣೆ ಮಾಡಿದ್ದರು.

Watch.. ಕೆರೆಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ ಕಾನ್ಸ್​​ಟೇಬಲ್​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.