ಶಿವಮೊಗ್ಗ: ಸಿಎಂ ತವರು ಜಿಲ್ಲೆಯಲ್ಲಿ ಇಂದು ಅಡಿಕೆ ಕಾರ್ಯಪಡೆ ಸಭೆ ನಡೆಯಿತು. ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಮಲೆನಾಡು ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಕಾರ್ಯಪಡೆಯ ಅಧ್ಯಕ್ಷ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಈ ಸಭೆಗೆ ಕಾರ್ಯಪಡೆಗೆ ನೇಮಕವಾಗಿರುವ ಎಲ್ಲ ಸದಸ್ಯರು ಆಗಮಿಸಿದ್ದರು. ಸುಮಾರು ಮೂರು ಗಂಟೆಗಳ ಕಾಲ ಚರ್ಚೆ ನಡೆಸಿ, ಇಂದಿನ ಸಭೆಯಲ್ಲಿ 8 ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
2) ಎಂ.ಎಸ್ ರಾಮಯ್ಯ ವಿವಿಯಲ್ಲಿ ಅಡಿಕೆ ಕುರಿತು ಸಂಶೋಧನೆ ನಡೆಸಲಾಗುತ್ತಿದೆ. ಈ ವರದಿ ಬರುವವರೆಗೂ ಸುಪ್ರೀಂಕೋರ್ಟ್ನಲ್ಲಿನ ವಿಚಾರಣೆಯನ್ನು ಮುಂದೂಡಿದೆ. ಈ ಕುರಿತು ಕೇಂದ್ರ ಸರ್ಕಾರದ ವಕೀಲರು ಕೋರ್ಟ್ಗೆ ಮನವರಿಕೆ ಮಾಡಬೇಕಿದೆ. ಈ ಕುರಿತು ಸರ್ಕಾರದ ಮೇಲೆ ಒತ್ತಾಡ ಹೇರುವುದು.
3) ಅಡಕೆಗೆ ಇರುವ ಕನಿಷ್ಠ ಬೆಂಬಲ ಬೆಲೆಯನ್ನು 250 ರಿಂದ 350 ರೂ.ಗೆ ನಿಗದಿ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹಾಕುವುದು. ಇದರಿಂದ ವಿದೇಶದಿಂದ ಬರುವ ಅಡಕೆ ಕಡಿಮೆಯಾಗುತ್ತದೆ.
4) ಒಂದು ಜಿಲ್ಲೆಗೆ ಒಂದು ಬೆಳೆ ಉತ್ಪನ್ನದಡಿ ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಆನಾನಸ್ ಹಣ್ಣು ನಿಗದಿ ಮಾಡಲಾಗಿದೆ. ಆದರೆ ಈ ಯೋಜನೆಯಡಿ ಜಿಲ್ಲೆಗೆ ಅಡಕೆ ಬೆಳೆಯನ್ನು ಪರಿಗಣಿಸುವಂತೆ ಶಿಫಾರಸು ಮಾಡಬೇಕೇಂಬ ಮನವಿ ಸಲ್ಲಿಸುವುದು.
5) ಅಡಕೆ ಬೆಳೆ ಕುರಿತು ತೋಟಗಾರಿಕಾ ವಿವಿ ಕೈಗೊಂಡಿರುವ ಸಂಶೋಧನೆಗೆ ಸಹಕಾರ ನೀಡುವುದು.
6) ಅಡಕೆಯನ್ನು ಉಪಯೋಗಿಸಿಕೊಂಡು ಪರ್ಯಾಯ ಪ್ರಯೋಗಗಳಿಗೆ ಟಾಸ್ಕ್ಫೋರ್ಸ್ನಿಂದ ಹೆಚ್ಚಿನ ಸಹಕಾರ ನೀಡುವುದು.
7) ಎಂ.ಎಸ್ ರಾಮಯ್ಯ ವಿವಿಯ ಚೌಡಪ್ಪ ರವರ ನೇತೃತ್ವದಲ್ಲಿ ಸಂಶೋಧನೆಗೆ ತಂತ್ರಜ್ಞರ ತಂಡ ರಚನೆ.
8) ಅಡಕೆ ಉತ್ಪಾದನಾ ವೆಚ್ಚ ಕುರಿತು ವರದಿ ನೀಡಲು ತೋಟಗಾರಿಕಾ ಇಲಾಖೆ ಜೊತೆ ಸೇರಿ ಮಾಹಿತಿ ಸಂಗ್ರಹಿಸಲು ಒಂದು ತಂಡ ರಚನೆ ಹಾಗೂ ಅದು 15 ದಿನದ ಒಳಗೆ ವರದಿ ಸಲ್ಲಿಸಲು ಸೂಚನೆ.
ಈ ನಿರ್ಣಯಗಳನ್ನು ಸಭೆಯ ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿದೆ ಎಂದು ಅಡಕೆ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ ತಿಳಿಸಿದರು. ಈ ವೇಳೆ ಸಾಗರ ಶಾಸಕ ಹರತಾಳು ಹಾಲಪ್ಪ, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಸೇರಿದಂತೆ ಇತರರಿದ್ದರು.
ಇದನ್ನೂ ಓದಿ: ಅಡಿಕೆ ನುಂಗಿ ಬಾಲಕ ಸಾವು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ