ETV Bharat / state

ತಮ್ಮ ಅವಧಿಯ ಯೋಜನೆಗಳನ್ನ ಮುಂದುವರಿಸಿದ ಶಾಸಕರ ವಿರುದ್ಧ ಕಾಂಗ್ರೆಸ್​​​ ಪ್ರತಿಭಟನೆ

ಕಾಂಗ್ರೆಸ್​​ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾದ ಯೋಜನೆಗಳನ್ನು ಈಗಿನ ಶಾಸಕರಾದ ಹರತಾಳು ಹಾಲಪ್ಪ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬ್ಲಾಕ್​ ಕಾಂಗ್ರೆಸ್​​ ವತಿಯಿಂದ ಸಾಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಶಾಸಕ ಹಾಲಪ್ಪ ವಿರುದ್ಧ ಹರಿಹಾಯ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ
author img

By

Published : Nov 21, 2019, 9:38 PM IST

ಶಿವಮೊಗ್ಗ: ಸಾಗರ ಪಟ್ಟಣ ಸೇರಿದಂತೆ ಸಾಗರ ವಿಧಾನಸಭ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವಲ್ಲಿ ಶಾಸಕ ಹರತಾಳು ಹಾಲಪ್ಪ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸಾಗರದ ಕಾಂಗ್ರೆಸ್ ಭವನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ, ಉಪವಿಭಾಗೀಯ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾದ ಯಾವ ಯೋಜನೆಗಳನ್ನು ಶಾಸಕ ಹರತಾಳು ಹಾಲಪ್ಪ ಟೇಕ್ ಆಫ್ ಆಗಲು ಬಿಡುತ್ತಿಲ್ಲ. ಇಂದಿರಾ ಕ್ಯಾಂಟೀನ್ ಪ್ರಾರಂಭಕ್ಕೆ ಸಿದ್ದವಿದ್ದರೂ ಅದನ್ನು ಉದ್ಘಾಟನೆ ಮಾಡುತ್ತಿಲ್ಲ. ನೂತನ ತಾಲೂಕು ಕಚೇರಿಯನ್ನು ಜನರ ಸೇವೆಗೆ ಒದಗಿಸುತ್ತಿಲ್ಲ. ಆಟೋ ಕಾಂಪ್ಲೆಕ್ಸ್ ನಲ್ಲಿನ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಬಗರ್ ಹುಕುಂ ಹಕ್ಕುಪತ್ರ ನೀಡಲು ಶಾಸಕರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶಾಸಕ ಹಾಲಪ್ಪ ವಿರುದ್ಧ ಹರಿಹಾಯ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ಪ್ರತಿಭಟನೆಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಅರ್.ಜಯಂತ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತರ್ಶಿಪ್ ಇಬ್ರಾಹಿಂ, ಜೈ ಜನ್ಮ ಭೂಮಿ ರಕ್ಷಣಾ ಪಡೆಯ ತಾ. ಅಧ್ಯಕ್ಷ ಕಾಬೀರ್ ಚಿಪ್ಪಳಿ, ಮ್ಯಾಖಲ್, ಸುಧಾಕರ್ ಕುಗ್ವೆ, ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹರ್ಕೆ , ಮಾಹಬಲೇಶ್, ಅಬ್ದುಲ್ ತನ್ವೀರ್, ಹಾಗೂ ಚುನಾಯಿತ ನಗರಸಭೆ ಕಾಂಗ್ರೆಸ್ ಸದ್ಯಸರು ಹಾಜರಿದ್ದರು.

Intro:ಕಾಂಗ್ರೆಸ್ ಅವಧಿಯ ಯೋಜನೆಗಳನ್ನು ಮುಂದುವರೆಸದ ಶಾಸಕ ಹಾಲಪ್ಪ ವಿರುದ್ದ ಸಾಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ.

ಶಿವಮೊಗ್ಗ : ಸಾಗರ ಪಟ್ಟಣ ಸೇರಿದಂತೆ ಸಾಗರ ವಿಧಾನಸಭ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವಲ್ಲಿ ಶಾಸಕ ಹರತಾಳು ಹಾಲಪ್ಪ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾಗರ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಸಾಗರದ ಕಾಂಗ್ರೆಸ್ ಭವನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ, ಉಪವಿಭಾಗೀಯ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾದ ಯಾವ ಯೋಜನೆಗಳನ್ನು ಶಾಸಕ ಹರತಾಳು ಹಾಲಪ್ಪ ಟೇಕ್ ಆಫ್ ಆಗಲು ಬಿಡುತ್ತಿಲ್ಲ. ಇಂದಿರಾ ಕ್ಯಾಂಟೀನ್ ಪ್ರಾರಂಭಕ್ಕೆ ರೆಡಿ ಇದ್ದರು ಸಹ ಅದನ್ನು ಉದ್ಘಾಟನೆ ಮಾಡುತ್ತಿಲ್ಲ. ನಗರೋತ್ಥಾನಕ್ಕೆ 22 ಕೋಟಿ ರೂ ಹಣ ಬಂದಿದ್ದರು ಸಹ ಅದನ್ನು ಮುಟ್ಟಿಲ್ಲ.Body:ನೂತನ ತಾಲೂಕು ಕಚೇರಿಯನ್ನು ಜನರ ಸೇವೆಗೆ ಒದಗಿಸುತ್ತಿಲ್ಲ. ಆಟೋ ಕಾಂಪ್ಲಕ್ಸ್ ನಲ್ಲಿನ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಬಗರ್ ಹುಕುಂ ಹಕ್ಕುಪತ್ರ ನೀಡಲು ಶಾಸಕರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ ನಾನ ಅವಧಿಯಲ್ಲಿ ವೇಗವಾಗಿ ನಡೆಯುತ್ತಿದ್ದ ಅಭಿವೃದ್ಧಿ ಕಾರ್ಯಗಳು ನಿಂತಿವೆ ನಾನು ಚಾಲನೆ ನೀಡಿ ನಿರ್ಮಾಣ ಆಗುತ್ತಿದ್ದು ಕೆಲಸಗಳನ್ನು ಕೂಡಲೇ ಮುಗಿಸಬೇಕು ಎಂದು ಆಗ್ರಹಿಸಿದರುConclusion:ಪ್ರತಿಭಟನೆಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಅರ್.ಜಯಾಂತ್,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತರ್ಶಿಪ್ ಇಬ್ರಾಹಿಂ, ಜೈ ಜನ್ಮ ಭೂಮಿ ರಕ್ಷಣಾ ಪಡೆಯ ತಾ - ಅಧ್ಯಕ್ಷ ಕಾಬೀರ್ ಚೀಪಳಿ, ಮ್ಯಾಖಲ್, ಸುಧಾಕರ್ ಕುಗ್ವೆ, ತಾ.ಪಂ. ಅಧ್ಯಕ್ಷ ಮಾಲೀಖಾರ್ಜು ಹರ್ಕೆ , ಮಾಹಬಲೇಶ್, ಅಬ್ದುಲ್ ತನ್ವೀರ್, ಹಾಗೂ ಚುನಾಯಿತ ನಗರಸಭೆ ಕಾಂಗ್ರೆಸ್ ಸದ್ಯಸರು ಹಾಜರಿದ್ದರು.

ಬೈಟ್: ಕಾಗೋಡು ತಿಮ್ಮಪ್ಪ.ಮಾಜಿ ಸಚಿವರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.