ETV Bharat / state

ಕಾಂಗ್ರೆಸ್​ಗೆ ಗುಡ್​ಬೈ ಹೇಳಿದ ಕೆಪಿಸಿಸಿ ವಕ್ತಾರ ಶಾಂತವೀರಪ್ಪ: ವೈಯಕ್ತಿಕ ಕಾರಣಕ್ಕಾಗಿ ರಾಜೀನಾಮೆ ನೀಡಿದ ಗೌಡ್ರು.. - ರಾಜೀನಾಮೆ

ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕೆಪಿಸಿಸಿ ವಕ್ತಾರ ಸ್ಥಾನಕ್ಕೆ ಕೆಪಿಸಿಸಿ ವಕ್ತಾರ ಶಾಂತವೀರಪ್ಪ ಗೌಡ ರಾಜೀನಾಮೆ ನೀಡಿದರು.

resign
ರಾಜೀನಾಮೆ
author img

By

Published : Apr 21, 2023, 2:21 PM IST

Updated : Apr 21, 2023, 3:42 PM IST

ಕೆಪಿಸಿಸಿ ವಕ್ತಾರ ಶಾಂತವೀರಪ್ಪ

ಶಿವಮೊಗ್ಗ: ಶಿಕಾರಿಪುರದ ಕಾಂಗ್ರೆಸ್‌ ಮುಖಂಡರೂ ಆದ ಕೆಪಿಸಿಸಿ ವಕ್ತಾರ ಶಾಂತವೀರಪ್ಪ ಗೌಡ ಇಂದು ತಾವಿದ್ದ ಕಾಂಗ್ರೆಸ್​ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕೆಪಿಸಿಸಿ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಕೆಪಿಸಿಸಿ ವಕ್ತಾರ ಶಾಂತವೀರಪ್ಪ ಗೌಡ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯನ್ನು ಗೆಲ್ಲಿಸುವ ಸಲುವಾಗಿ ನಾನು ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವ ಹಾಗೂ ಕೆಪಿಸಿಸಿ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದರು. ಶಿಕಾರಿಪುರದಲ್ಲಿ ಹೊಂದಾಣಿಕೆ ರಾಜಕೀಯ ಮಾಡಲಾಗುತ್ತಿದೆ, ವರುಣಾದಲ್ಲಿ ಸಿದ್ದರಾಮಯ್ಯ ಗೆಲ್ಲಲು ಶಿಕಾರಿಪುರದಲ್ಲಿ ವೀಕ್ ಅಭ್ಯರ್ಥಿ ಹಾಕಲಾಗಿದೆ ಹಾಗಾಗಿ ಯಡಿಯೂರಪ್ಪ ಅವರ ರಾಜಕೀಯ ಕುತಂತ್ರ ಬಗ್ಗು ಬಡಿಯಲು ಹಾಗೂ ವಿಜಯೇಂದ್ರ ಸೋಲಿಸಲು ನಾಗರಾಜ ಗೌಡನನ್ನು ಗೆಲ್ಲಿಸುವ ಸಲುವಾಗಿ ಶಿಕಾರಿಪುರದ ಜನ ಒಂದಾಗಿದ್ದಾರೆ ಎಂದರು.

ಇದನ್ನು ಓದಿ: ಕನಕಪುರದಿಂದ ಸ್ಪರ್ಧಿಸಿರುವ ಡಿ ಕೆ ಶಿವಕುಮಾರ್ ನಾಮಪತ್ರ ಅಂಗೀಕಾರ

ಇದನ್ನು ಓದಿ: ನನ್ನ ನಾಮಪತ್ರ ತಿರಸ್ಕರಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ: ಡಿಕೆ ಶಿವಕುಮಾರ್​

ಒಬ್ಬ ಭ್ರಷ್ಟ ಮತ್ತು ಲಂಪಟನಾದ ಯಡಿಯೂರಪ್ಪನಿಂದಾಗಿ 2 ಬಾರಿ ನನಗೆ ಅನ್ಯಾಯವಾಗಿದೆ. ಸಿದ್ದರಾಮಯ್ಯ ಜೊತೆ ಯಡಿಯೂರಪ್ಪ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಮ್ಮ ತಂದೆ ಯಡಿಯೂರಪ್ಪ ಜೊತೆ ಬೆಂಬಲವಾಗಿ ನಿಂತಿದ್ದರು. ಲಿಂಗಾಯತ ಹಾಗೂ ಕುರುಬ ಸಮಾಜದ ಮುಖಂಡರು ಅವರಿಗೆ ಬೆಂಬಲ ನೀಡಿದ್ದರು. ನಮ್ಮ ಪ್ರಾಣದ ಹಂಗು ತೊರೆದು ಅವರನ್ನು ಕಾಪಾಡಿದ್ದೆವು. ಆದರೆ ಅವರು ಮಾಡಿದ್ದೇನು ಎಂಬುವುದು ಜಿಲ್ಲೆಯ ಜನರಿಗೆ ತಿಳಿದಿದೆ. ಈ ಭಾರಿ ಜನ ಅವರಿಗೆ ಬುದ್ದಿ ಕಲಿಸಲಿದ್ದಾರೆ ಎಂದರು.

ಇದನ್ನು ಓದಿ: ​ಈಶ್ವರಪ್ಪ ಪಕ್ಷ ನಿಷ್ಠೆಗೆ ಭಾರಿ ಮೆಚ್ಚುಗೆ: ಕರೆ ಮಾಡಿ ಅಭಯ ನೀಡಿದ ಮೋದಿ

ಇದನ್ನು ಓದಿ:ರಾಜಕೀಯ ಜೀವನ ಆರಂಭಿಸಿದ ಅಂಬಾಸಿಡರ್​ ಕಾರನ್ನ ಮತ್ತೊಮ್ಮೆ ಏರಿದ ಬಿಎಸ್​ವೈ.. ಏನಿದರ ವಿಶೇಷತೆ?

ಯಡಿಯೂರಪ್ಪ ಭ್ರಷ್ಟಾಚಾರದ ಗುರು - ಶಾಂತವೀರಪ್ಪ ಗೌಡ: ಯಡಿಯೂರಪ್ಪ ಭ್ರಷ್ಟಾಚಾರದ ಗುರು ಹೀಗಾಗಿ ಮಕ್ಕಳೂ ಅದೇ ರೀತಿ ಆಗಿದ್ದಾರೆ.
ಹಾಗಾಗಿ ಯಡಿಯೂರಪ್ಪ ಅವರನ್ನು ಮಂಡ್ಯಕ್ಕಲ್ಲ ಮಲೇಷಿಯಾ, ಮಾರಿಷಸ್ ಮೊದಲಾದ ಕಡೆ ಮಾಡಿರುವ ಆಸ್ತಿಯನ್ನು ನೋಡಿಕೊಳ್ಳಲು ಮಕ್ಕಳನ್ನು ಅಲ್ಲಿಗೆ ಕಳಿಸಲಿ ಎಂದು ವ್ಯಂಗವಾಡಿದರು.

ಇಂದು ಶಿಕಾರಿಪುರದ ಜನತೆ ಪಕ್ಷ, ಭೇದ ಮರೆತು ನಾಗರಾಜ್ ಗೌಡರನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ. ಯಡಿಯೂರಪ್ಪ ಅವರು ಶಿಕಾರಿಪುರದ ಜನತೆಯನ್ನು ಜೀತದಾಳುಗಳನ್ನಾಗಿ ಮಾಡಿಕೊಂಡು ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಕನಕಪುರದಿಂದ ಸ್ಪರ್ಧಿಸಿರುವ ಡಿ ಕೆ ಶಿವಕುಮಾರ್ ನಾಮಪತ್ರ ಅಂಗೀಕಾರ

ಇದನ್ನು ಓದಿ: ಪದ್ಮನಾಭ ನಗರದಿಂದ ನಾಮಪತ್ರ ಸಲ್ಲಿಸದ ಡಿ.ಕೆ.ಸುರೇಶ್: ರಘುನಾಥ್ ನಾಯ್ಡು ಅಧಿಕೃತ 'ಕೈ' ಅಭ್ಯರ್ಥಿ

ಇದನ್ನು ಓದಿ: ರಾಜ್ಯ ರಾಜಕೀಯಕ್ಕೆ ಘಟಾನುಘಟಿಗಳನ್ನು ನೀಡಿದ ಹಳೇ ಮೈಸೂರು ಭಾಗದ ಅವಲೋಕನ

Last Updated : Apr 21, 2023, 3:42 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.