ETV Bharat / state

ಕಾಂಗ್ರೆಸ್ ಅಧಿಕಾರಕ್ಕೆ ಆಸೆ ಪಡಲ್ಲ, ಸೇವಾ ಮನೋಭಾವ ಇರುವ ಪಕ್ಷ: ಧ್ರುವನಾರಾಯಣ್ - druvanarayana news

ಕಾಂಗ್ರೆಸ್ ಪಕ್ಷ ಯಾವತ್ತೂ ಅಧಿಕಾರಕ್ಕೆ ಆಸೆ ಪಟ್ಟ ಪಕ್ಷವಲ್ಲ, ಸೇವಾ ಮನೋಭಾವ ಇರುವ ಪಕ್ಷ ಎಂದು ಶಿವಮೊಗ್ಗದಲ್ಲಿ ಧ್ರುವನಾರಾಯಣ್​ ಹೇಳಿದ್ರು.

Congress do not wants power says druvanarayan
ಧ್ರುವನಾರಾಯಣ್ ಹೇಳಿಕೆ
author img

By

Published : Jul 11, 2021, 3:33 PM IST

ಶಿವಮೊಗ್ಗ: ಕಾಂಗ್ರೆಸ್ ಅಧಿಕಾರಕ್ಕೆ ಆಸೆ ಪಡಲ್ಲ, ಸೇವಾ ಮನೋಭಾವ ಇರುವ ಪಕ್ಷ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೇಳಿದ್ದಾರೆ. ಚುನಾವಣೆಗೆ ಇನ್ನೂ ಎರಡು ವರ್ಷ ಇರುವಾಗಲೇ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಚರ್ಚೆ ನಡೆಯುತ್ತಿದ್ದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಧ್ರುವನಾರಾಯಣ್ ಹೇಳಿಕೆ

ಯಾರೂ ಸಹ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದರ ಕುರಿತು ಮಾತನಾಡಬಾರದು, ಇದು ಸೂಕ್ತ ಸಮಯವಲ್ಲ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಸ್ಪಷ್ಟ ಸೂಚನೆ ನೀಡಿದ್ದಾರೆ. ಹಾಗಾಗಿ ನಾವೆಲ್ಲಾ ಒಟ್ಟಾಗಿದ್ದೇವೆ ಎಂದರು.

ಜನರ ಜೀವ ಕಾಪಾಡಬೇಕಾದ ಬಿಜೆಪಿ ಸರ್ಕಾರ ಅಧಿಕಾರದ ದಾಹಗೋಸ್ಕರ ಪರಸ್ಪರ ಕಚ್ಚಾಟದಲ್ಲಿ ತೊಡಗಿದೆ. ಇದನ್ನು ನಾವು ಹೇಳುತ್ತಿಲ್ಲ, ಅವರದೇ ಪಕ್ಷದ ಯತ್ನಾಳ್, ವಿಶ್ವನಾಥ್ ಹೇಳುತ್ತಿದ್ದಾರೆ. ಆದರೂ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ, ಯಾಕಂದ್ರೆ ಅವರ ಹಿಂದೆ ಅವರ ಪಕ್ಷದ ಹೈಕಮಾಂಡ್ ಇದೆ ಎಂದರು.

ಸಿದ್ದರಾಮಯ್ಯ ನೇತೃತ್ವದಲ್ಲಿ ಐದು ವರ್ಷಗಳ ಕಾಲ ಯಾವುದೇ ಆಪಾದನೆ ಇಲ್ಲದೇ, ಭ್ರಷ್ಟಾಚಾರ ಇಲ್ಲದೇ ಒಳ್ಳೆಯ ಕಾರ್ಯಕ್ರಮ ರೂಪಿಸುವ ಮೂಲಕ ಉತ್ತಮ ಆಡಳಿತ ನೀಡಿದ್ದೇವೆ. ಮುಂಬರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂದು ಧ್ರುವನಾರಾಯಣ್​ ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.