ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿಯ ವೇಳೆ ನಾಗರ ಹಾವನ್ನು ಕೊಂದು ಹಾಕಲಾಗಿದೆ ಎಂದು ಆರೋಪಿಸಿ ಸ್ಮಾರ್ಟ್ ಸಿಟಿ ಇಂಜಿನಿಯರ್ ವಿರುದ್ಧ ದೂರು ನೀಡಲಾಗಿದೆ. ಡಿಸೆಂಬರ್ 4ರಂದು ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಎಪಿಎಂಸಿ ಮುಂಭಾಗದ ಆಂಜನೇಯ ಗುಡಿಯನ್ನು ಜೆಸಿಬಿಯಿಂದ ಕೆಡವಲಾಗಿತ್ತು.
ಆಂಜನೇಯ ಗುಡಿಯ ತೆರವಿನ ವೇಳೆ ಹಾವೊಂದು ಪ್ರತ್ಯಕ್ಷವಾಗಿತ್ತು. ಈ ವೇಳೆ ಹಾವು ಜೆಸಿಬಿಯ ಬಕೆಟ್ ಅನ್ನು ಕಚ್ಚಲು ಯತ್ನಿಸಿದೆ. ನಂತರ ಜೆಸಿಬಿ ಬಕೆಟ್ನಿಂದ ಮಣ್ಣನ್ನು ತುಂಬುವಾಗ ಹಾವನ್ನು ತೆಗೆದುಕೊಂಡು ಹೋಗಲಾಗಿದೆ. ಈ ವೇಳೆ ಹಾವು ಸಾವನ್ನಪ್ಪಿದೆ ಎಂದು ದೂರಲಾಗಿದೆ. ಗುಡಿ ಕೆಡವಿದ ಬಳಿಕ ಅಂದೇ ಭಜರಂಗದಳದವರು ಪ್ರತಿಭಟನೆ ನಡೆಸಿದ್ದರು.
![complaint](https://etvbharatimages.akamaized.net/etvbharat/prod-images/kn-smg-06-01-snake-fir-7204213_08122021215612_0812f_1638980772_351.jpg)
ಪಾಲಿಕೆ ಸದಸ್ಯರಿಂದ ಅರಣ್ಯ ಇಲಾಖೆಗೆ ದೂರು:
ಹಾವನ್ನು ಸ್ಮಾರ್ಟ್ ಸಿಟಿ ಯೋಜನೆಯವರು ಕೊಂದಿದ್ದಾರೆ ಎಂದು ಪಾಲಿಕೆಯ ಸದಸ್ಯ ರಾಹುಲ್ ಬಿದರೆ ಅವರು ಆಲ್ಕೊಳದ ಶಂಕರ ವಲಯದ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಸ್ಮಾರ್ಟ್ ಸಿಟಿ ಇಂಜಿನಿಯರ್ ವಿಜಯ ಕುಮಾರ್ ವಿರುದ್ಧ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ: ಸೇನಾ ದುರಂತಗಳು ಇದೇ ಮೊದಲಲ್ಲ..1993, 1997ರಲ್ಲಿ ನಡೆದಿದ್ದವು ಇಂಥದ್ದೇ ಅವಘಡಗಳು!