ETV Bharat / state

ಬಿಜೆಪಿ ಹೈಕಮಾಂಡ್​​​ ನಿರ್ಧಾರಕ್ಕೆ ಬದ್ಧ ಎಂದ ಈಶ್ವರಪ್ಪ

ಬಿಜೆಪಿ ಹೈಕಮಾಂಡ್​ ನಿರ್ಧಾರಕ್ಕೆ​ ನಾವೆಲ್ಲ ತಲೆ ಬಾಗುತ್ತೇವೆ. ಯಾರೂ ಅದನ್ನು ಪ್ರಶ್ನಿಸುವುದಿಲ್ಲ. ಯಾವುದೇ ಖಾತೆ ನೀಡಿದರು. ನಿಭಾಯಿಸುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸಚಿವ ಕೆ.ಎಸ್.ಈಶ್ವರಪ್ಪ
author img

By

Published : Aug 25, 2019, 5:18 PM IST

ಶಿವಮೊಗ್ಗ: ಬಿಜೆಪಿ ಹೈಕಮಾಂಡ್​ ನಿರ್ಧಾರಕ್ಕೆ ನಾವೆಲ್ಲ ಬದ್ಧರಿದ್ದೇವೆ. ಯಾವುದೇ ಖಾತೆ ನೀಡಿದರು ನಿಭಾಯಿಸುತ್ತೇವೆ ಎಂದು ನೂತನ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದ ಇತಿಹಾಸ ಪ್ರಸಿದ್ಧ ಕೋಟೆ ಆಂಜನೇಯ ದೇವಾಲಯಕ್ಕೆ ಸಚಿವರಾದ ಮೇಲೆ ಮೊದಲ ಬಾರಿಗೆ ಭೇಟಿ ನೀಡಿ ದರ್ಶನ ಪಡೆದು ಅವರು ಮಾತನಾಡಿದರು.

ಸಚಿವ ಕೆ.ಎಸ್.ಈಶ್ವರಪ್ಪ

ನನಗೆ ಯಾವ ಖಾತೆ ಕೊಟ್ಟರೂ ಸಂತೋಷ ಎಂದು ಪ್ರಶ್ನೆಯೊಂದಕ್ಕೆ ಖಡಕ್​ ಉತ್ತರ ನೀಡಿದರು.

ಹಿಂದೆಂದು ಕಂಡರಿಯದ ನೆರೆ ಹಾವಳಿ ರಾಜ್ಯಕ್ಕೆ ಅಪ್ಪಳಿಸಿದೆ. ಅದಕ್ಕೆ ತುರ್ತಾಗಿ ಕೆಲವು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ದೃಷ್ಟಿಯಿಂದ ನಾಳೆ (ಆ. 26) ಸಿಎಂ ಸಚಿವ ಸಂಪುಟದ ವಿಶೇಷ ಸಭೆ ಕರೆದಿದ್ದಾರೆ. ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿರುವ ಸಚಿವರು, ಬಳಿಕ ವರದಿ ಸಲ್ಲಿಸಲಿದ್ದಾರೆ ಎಂದರು.

ಆಂಜನೇಯ ದೇವಾಲಯಕ್ಕೆ ಈಶ್ವರಪ್ಪ ಪತ್ನಿ ಜಯಲಕ್ಷ್ಮಿ, ಪುತ್ರ ಕಾಂತೇಶ್ ಆಗಮಿಸಿದ್ದರು. ದೇವಾಲಯ ಸಮಿತಿಯವರು ಈಶ್ವರಪ್ಪ ಕುಟುಂಬಕ್ಕೆ ಕುಂಭದ ಸ್ವಾಗತ ಕೋರಿದರು. ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಈಶ್ವರಪ್ಪನವರಿಗೆ ಸಂಸದ ಬಿ.ವೈ.ರಾಘವೇಂದ್ರ ಸಾಥ್ ನೀಡಿದರು.

Intro:ನನಗೆ ಡಿಸಿಎಂ ಸ್ಥಾನ ನೀಡುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ, ನಮ್ಮ ಪಕ್ಷದ ಹಿರಿಯರು ಯಾವ ಜವಾಬ್ದಾರಿ ನೀಡುತ್ತಾರೂ ಅದನ್ನು ನಾನು ನಿಭಾಯಿಸುತ್ತೆನೆ ಎಂದು ಸಚಿವ ಕೆ.ಎಸ್.ಈಶ್ಚರಪ್ಪ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವರಾದ ಮೇಲೆ ಪ್ರಥಮ ಭಾರಿ ಶಿವಮೊಗ್ಗಕ್ಕೆ ಆಗಮಿಸಿದ್ದ ಈಶ್ವರಪ್ಪ ನವರು ನಗರದ ಇತಿಹಾಸ ಪ್ರಸಿದ್ದ ಕೋಟೆ ಅಂಜನೇಯ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನನಗೆ ಈಗ ಮಂತ್ರಿ‌ ಸ್ಥಾನ ನೀಡಿದ್ದಾರೆ. ಯಾವ ಖಾತೆ ಬೇಕು ಅಂತ ನಾನು ಎಂದೂ ಕೇಳಿಲ್ಲ. ಕೊಟ್ಟರೆ ನಿಭಾಯಿಸುತ್ತೆನೆ. ಒಂದೂಂದು ಮಾಧ್ಯಮದವರು ಒಂದೂಂದು ಖಾತೆ ಕೊಡಿಸಿದ್ರಿ ಎಂದು ಟಾಂಗ್ ನೀಡಿದರು.
ಸಂಪುಟ ವಿಸ್ತರಣೆಯ ಬಗ್ಗೆ ಸಿಎಂ ಯಡಿಯೂರಪ್ಪನವರು ಹೇಳಿದ್ದಾರೆ. ಅದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಖಾತೆ ಹಂಚಿಕೆ ಇಂದು ಅಥವ ನಾಳೆ ನಡೆಯಲಿದೆ. ಬಿಜೆಪಿ ಒಂದು ಕುಟುಂಬ, ಕುಟುಂಬದಲ್ಲಿ ವಿಶೇಷ ಘಟನೆ ನಡೆದಾಗ ಗೂಂದಲ ಇರುತ್ತದೆ. ಕುಟುಂಬದ ಹಿರಿಯರು ಕುಳಿತು ಕೊಂಡು ಗೂಂದಲವನ್ನು ಬಗೆಹರಿಸುತ್ತಾರೆ. ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಜಲ ಪ್ರಳಯ ಕಂಡಿದೆ. ಇದನ್ನು ನಿಭಾಯಿಸುವ ದೃಷ್ಡಿಯಿಂದ ಕೇಂದ್ರ ಸರ್ಕಾರ, ರಾಜ್ಯದ ಜನ, ಸಂಘ- ಸಂಸ್ಥೆಗಳ ಎಲ್ಲಾರ ಬೆಂಬಲ ಪಡೆದು ಸಹಜ ಸ್ಥಿತಿ ತರುವ ದೃಷ್ಟಿಯಿಂದ ಎಲ್ಲಾ ಪ್ರಯತ್ನ ಮಾಡುತ್ತೆವೆ. ಪ್ರವಾಹದ ಸ್ಥಿತಿಯ ಕುರಿತು

Body:ಸಿಎಂ ಯಡಿಯೂರಪ್ಪನವರು ಸಚಿವ ಸಂಪುಟದ ವಿಶೇಷ ಸಭೆ ಯನ್ನು ನಾಳೆ ಕರೆದಿದ್ದಾರೆ. ನಾಳೆ‌ 17 ಜನ ಮಂತ್ರಿಗಳು ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆವೆ. ನಾಳೆಯ ಸಭೆಯಲ್ಲಿ ಚರ್ಚೆ ನಡೆಸಿ, ಇನ್ನಷ್ಟು ಅಭಿವೃದ್ದಿ ನಡೆಸುವ ಕುರಿತು ಚರ್ಚೆ ನಡೆಸಲಿದ್ದೆವೆ ಎಂದರು. ಲಕ್ಷ್ಮಣ ಸವದಿರವರಿಗೆ ಮಂತ್ರಿ‌ ಸ್ಥಾನ ನೀಡಿರುವ ಕುರಿತು ಉಮೇಶ್ ಕತ್ತಿ ಆಕ್ರೋಶ ವ್ಯಕ್ತಪಡಿಸಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ , ಸವದಿರವರನ್ನು ಸಚಿವ ಸ್ಥಾನಕ್ಕೆ ತೆಗೆದು ಕೊಂಡಿದ್ದು ನಮ್ಮ ಪಕ್ಷದ ನಾಯಕರ ತೀರ್ಮಾನವಾಗಿದೆ. ನಮ್ಮ ಪಕ್ಷದ ಹಿರಿಯ ನಾಯಕರು ತೆಗೆದು ಕೊಂಡ ತೀರ್ಮಾನ ಪ್ರಶ್ನೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಪರೋಕ್ಷವಾಗಿ ಉಮೇಶ್ ಕತ್ತಿಗೆ ಖಾರವಾಗಿ ಉತ್ತರಿಸಿದರು.

Conclusion:ಆಂಜನೇಯ ದೇವಾಲಯಕ್ಕೆ ಈಶ್ವರಪ್ಪ ಪತ್ನಿ ಜಯಲಕ್ಷ್ಮಿ, ಪುತ್ರ ಕಾಂತೇಶ್ ರವರು ಆಗಮಿಸಿದ್ದರು. ದೇವಾಲಯ ಸಮಿತಿರವರು ಈಶ್ವರಪ್ಪ ಕುಟುಂಬಕ್ಕೆ ಕುಂಭದ ಸ್ವಾಗತ ಕೋರಿದರು. ದೇವಾಲಯದಲ್ಲಿ ವಿಶೇಷ ಪೊಜೆ ನಡೆಸಲಾಯಿತು. ಈಶ್ವರಪ್ಪನವರಿಗೆ ಸಂಸದ ಬಿ.ವೈ.ರಾಘವೇಂದ್ರ ಸಾಥ್ ನೀಡಿದರು.

ಬೈಟ್: ಕೆ.ಎಸ್.ಈಶ್ವರಪ್ಪ. ಸಚಿವರು.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.