ETV Bharat / state

ತವರು ಕ್ಷೇತ್ರದಲ್ಲಿ ಯಾವುದೇ ರಾಜಕೀಯ ವಿಚಾರದ ಬಗ್ಗೆ ಮಾತನಾಡದ ಸಿಎಂ

ಇಂದು ಶಿವಮೊಗ್ಗದ ಪ್ರವಾಸಿ ಮಂದಿರದ ಹೆಲಿಪ್ಯಾಡ್​ನಲ್ಲಿ ಬಂದಿಳಿದ ಸಿಎಂ ಯಡಿಯೂರಪ್ಪ, ಏರ್​ಪೋರ್ಟ್ ಕಾಮಗಾರಿ ಬಗ್ಗೆ ಮಾತನಾಡಿದರು.

author img

By

Published : Nov 29, 2020, 1:51 PM IST

Updated : Nov 29, 2020, 2:08 PM IST

CM Yeddyurappa
ಸಿಎಂ ಬಿ.ಎಸ್.ಯಡಿಯೂರಪ್ಪ

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಶಿವಮೊಗ್ಗ ಪ್ರವಾಸ ಕೈಗೊಂಡಿದ್ದು, ಯಾವುದೇ ರಾಜಕೀಯ ವಿಚಾರದ ಬಗ್ಗೆ ಮಾತನಾಡಲಿಲ್ಲ.

ಪ್ರವಾಸಿ ಮಂದಿರದ ಹೆಲಿಪ್ಯಾಡ್​ನಲ್ಲಿ ಬಂದಿಳಿದ ಸಿಎಂ, ಮೊದಲಿಗೆ ಏರ್​ಪೋರ್ಟ್ ಕಾಮಗಾರಿ ಬಗ್ಗೆ ಮಾತನಾಡಿದರು. ವಿಮಾನ ನಿಲ್ದಾಣದ ಎರಡನೇ ಹಂತದ ಕಾಮಗಾರಿ ಅನುಮೋದನೆಯಾಗಿದೆ. ಇದರಿಂದ ಕಾಮಗಾರಿ ಭರದಿಂದ ನಡೆಯುತ್ತಿದೆ. ಈಗಿನ ಕಾಮಗಾರಿಯಿಂದ ರಾತ್ರಿ ವೇಳೆಯೂ ಸಹ ವಿಮಾನ ನಿಲುಗಡೆಯಾಗಬಹುದಾಗಿದೆ. ಆದಷ್ಟು ಬೇಗ ಕಾಮಗಾರಿ ಮುಕ್ತಾಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗದ ಪ್ರವಾಸಿ ಮಂದಿರದ ಹೆಲಿಪ್ಯಾಡ್​ನಲ್ಲಿ ಬಂದಿಳಿದ ಸಿಎಂ ಯಡಿಯೂರಪ್ಪ.

'ಮನ್ ಕಿ ಬಾತ್': ಕೃಷಿ ಕಾನೂನುಗಳು ರೈತರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುತ್ತವೆ ಎಂದ ಪ್ರಧಾನಿ

ಇಂದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಮುಂದುವರೆದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದೇನೆ. ನಂತರ ಕಿಮ್ಮನೆ ಗಾಲ್ಫ ಕ್ಲಬ್ ಉದ್ಘಾಟನೆ ಮಾಡಲಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೇ ಆಗಲಿದೆ ಕಾದು ನೋಡಿ ಎಂದರು.

ಮಹಾದಾಯಿ ಬಗ್ಗೆ ಗೋವಾ ಕ್ಯಾತೆ ತೆಗೆದಿರುವ ಕುರಿತು ದೆಹಲಿಯಲ್ಲಿ ಗೋವಾ ಸಿಎಂ ಜೊತೆ ಮಾತನಾಡಲಿದ್ದೇನೆ ಎಂದು ಸಿಎಂ ಹೇಳಿದರು.

Last Updated : Nov 29, 2020, 2:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.