ETV Bharat / state

ಸಿಎಂ ತಮ್ಮ ಪುತ್ರನನ್ನು ಗೆಲ್ಲಿಸಲು ಕಣ್ಣೀರು ಹಾಕ್ತಾ ಇದ್ದಾರೆ: ಬಿ.ಎಲ್.ಸಂತೋಷ್​​

ಸಿಎಂ ತಮ್ಮ ಪುತ್ರನನ್ನು ಗೆಲ್ಲಿಸಲು ಕಣ್ಣೀರು ಹಾಕ್ತಾ ಇದ್ದಾರೆ. ಆದ್ರೆ, ಮೋದಿ ಒಂದು ದಿನವಾದ್ರೂ ಕಣ್ಣೀರು ಹಾಕಿದ್ರಾ ಎಂದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರಶ್ನೆ ಮಾಡಿದರು.

ಬಿ.ಎಲ್.ಸಂತೋಷ್
author img

By

Published : Apr 17, 2019, 1:19 PM IST

ಶಿವಮೊಗ್ಗ: ರಾಜ್ಯದ ಜನರ ಕಣ್ಣೀರು ಒರೆಸಲಿ ಎಂದು ಹೆಚ್.ಡಿ.ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ರೆ ಅವರು ನನ್ನ ಆರೋಗ್ಯ ಸರಿ ಇಲ್ಲ ಎಂದು ಕಣ್ಣೀರು ಹಾಕ್ತಾರೆ ಎಂದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವ್ಯಂಗ್ಯವಾಡಿದ್ದಾರೆ.

ಸಿಎಂ ತಮ್ಮ ಪುತ್ರನನ್ನು ಗೆಲ್ಲಿಸಲು ಕಣ್ಣೀರು ಹಾಕ್ತಾ ಇದ್ದಾರೆ. ಆದ್ರೆ, ಮೋದಿ ಒಂದು ದಿನವಾದ್ರೂ ಕಣ್ಣೀರು ಹಾಕಿದ್ರಾ ಎಂದು ಪ್ರಶ್ನೆ ಮಾಡಿದರು. ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದಲ್ಲಿ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆಯಲ್ಲಿ ಮಾತ್ರ ಕುಮಾರಸ್ವಾಮಿಗೆ ಆರೋಗ್ಯ ಸರಿ ಇರೋದಿಲ್ಲ. ಚುನಾವಣೆ ನಂತ್ರ ಅವರಿಗೆ ಆರೋಗ್ಯ ಚೆನ್ನಾಗಿ ಆಗಿ ಬಿಡುತ್ತೆ ಎಂದರು.

ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್

ದೇಶ ಭ್ರಷ್ಟಾಚಾರ ಇಲ್ಲದ ಆಡಳಿತ ನೋಡಿದೆ. ಇದು ಮುಂದುವರೆಯಬೇಕು ಅಂದ್ರೆ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ರಾಜಕೀಯ ಹಾಗೂ ರಾಜಕಾರಣಿಗಳು ಅಂದ್ರೆ ವಾಕರಿಕೆ ಬರುತ್ತಿತ್ತು. ಸಭೆಗೆ ಜನರನ್ನು ಕರೆತರಲು ಹಣ ನೀಡಬೇಕಿತ್ತು. ಮೋದಿ ಬಂದ ಮೇಲೆ ವಾತಾವರಣ ಬದಲಾಗಿದೆ. ಮೋದಿರವರನ್ನು ಪ್ರಧಾನಿ ಮಾಡಲು ನಮ್ಮೂರಿನ ರಾಘವೇಂದ್ರನಿಗೆ ಗೆಲ್ಲಿಸಬೇಕಿದೆ ಎಂದರು.

Intro:
ರಾಜ್ಯದ ಜನರ ಕಣ್ಣಿರು ಒರೆಸಲಿ ಎಂದು ಹೆಚ್. ಡಿ. ಕುಮಾರಸ್ವಾಮಿರವರನ್ನು ಸಿಎಂ ಮಾಡಿದ್ರೆ ಕುಮಾರಸ್ವಾಮಿ ರವರು ನನ್ನ ಆರೋಗ್ಯ ಸರಿ ಇಲ್ಲ ಎಂದು ಕಣ್ಣಿರು ಹಾಕ್ತಾರೆ.
ಎಂದು ಬಿಜೆಪಿ ರಾಜ್ಯ ಸಂಘಟನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಿಎಂ ವಿರುದ್ದ ಕಿಡಿಕಾರಿದ್ದಾರೆ.‌ಸಿಎಂ ತಮ್ಮ ಪುತ್ರನನ್ನು ಗೆಲ್ಲಿಸಲು ಕಣ್ಣಿರು ಹಾಕ್ತಾ ಇದ್ದಾರೆ. ಆದ್ರೆ, ಮೋದಿ ಒಂದು ದಿನವಾದ್ರೂ ಕಣ್ಣಿರು ಹಾಕಿದ್ರಾ ಎಂದು ಪ್ರಶ್ನೆ ಮಾಡಿದರು. ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದಲ್ಲಿ ಮಹಾ ಶಕ್ತಿ ಕೇಂದ್ರದ ಸಭೆಯನ್ನು ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಚುನಾವಣೆ ವೇಳೆಯಲ್ಲಿ ಮಾತ್ರ ಕುಮಾರಸ್ವಾಮಿಗೆ ಆರೋಗ್ಯ ಸರಿ ಇರೋದಿಲ್ಲ .Body:ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದಲ್ಲಿ ಮಹಾ ಶಕ್ತಿ ಕೇಂದ್ರದ ಸಭೆಯನ್ನು ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಚುನಾವಣೆ ವೇಳೆಯಲ್ಲಿ ಮಾತ್ರ ಕುಮಾರಸ್ವಾಮಿಗೆ ಆರೋಗ್ಯ ಸರಿ ಇರೋದಿಲ್ಲ . ಚುನಾವಣೆ ನಂತ್ರ ಅವರಿಗೆ ಆರೋಗ್ಯ ಚೆನ್ನಾಗಿ ಆಗಿ ಬಿಡುತ್ತೆ ಎಂದರು. ದೇವೆಗೌಡ ಹಾಗೂ ಸಿದ್ದರಾಮಯ್ಯನವರ ಮನೆಯಿಂದ ಈ ಬಾರಿ ಬಿಜೆಪಿಗೆ ಮತ ಬರುತ್ತೆ ಎಂದರು. ರೋಹಿಗ್ಯಾ ಮುಸ್ಲಿಂರು ಅವರ ದೇಶಕ್ಕೆ ಕಳುಹಿಸಿದ್ರೆ ಕುಮಾರಸ್ವಾಮಿ ರವರು‌ ಕಣ್ಣಿರು ಹಾಕ್ತಾರೆ. ರೋಹಿಗ್ಯ ರವರು ಬರ್ಮಾದಲ್ಲಿ ಜಗಳವಾಡಿ ಕೊಂಡು ನಮ್ಮ ದೇಶಕ್ಕೆ ಬರುವುದಕ್ಕೆ ಬೇಡ ಅಂತ ನಾವು ಹೇಳಿದ್ರೆ ಕಾಂಗ್ರೆಸ್ ಜೆಡಿಎಸ್ ನವರಿಗೆ ಕಣ್ಣಿರು ಬರುತ್ತದೆ. ಅಯ್ಯೋ ನಮಗೆ ಎರಡು ಮತ ಕಡಿಮೆ ಆಯ್ತು ಕಣ್ಣಿರು ಹಾಕ್ತಾರೆ ಎಂದು ವ್ಯಂಗ್ಯ ಮಾಡಿದರು. ದೇಶ ಭ್ರಷ್ಟಚಾರ ಇಲ್ಲದ ಆಡಳಿತ ನೋಡಿದೆ.Conclusion: ಇದು ಮುಂದುವರೆಯಬೇಕು ಅಂದ್ರೆ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಮೋದಿ ಇನ್ನು‌ ಐದು ವರ್ಷ ಇದ್ದರೆ ವಕ್ರವಾಗಿರುವುದನ್ನು ಸರಿ ಮಾಡುತ್ತಾರೆ. ರಾಜಕೀಯ ಹಾಗೂ ರಾಜಕಾರಣಿಗಳು ಅಂದ್ರೆ ವಾಕರಿಕೆ ಬರುತ್ತಿತ್ತು. ಸಭೆಗೆ ಜನರನ್ನು ಕರೆತರಲು ಹಣ ನೀಡಬೇಕಿತ್ತು. ಮೋದಿ ಬಂದ ಮೇಲೆ ವಾತಾವರಣ ಬದಲಾಗಿದೆ. ಮೋದಿರವರನ್ನು ಪ್ರದಾನಿ ಮಾಡಲು ನಮ್ಮೂರಿನ ರಾಘವೇಂದ್ರನಿಗೆ ಗೆಲ್ಲಿಸಬೇಕಿದೆ. ನಿಮ್ಮ ಮನೆಯಲ್ಲಿ ಯಾರು ಮತ ಹಾಕಿದ್ರೆ ಮಾತ್ರ ತಿಂಡಿ ಕೊಡಿ.ಇಲ್ಲ ಕೊಡಬೇಡಿ..ಅಂಬೇಡ್ಕರ್ ಕೊಟ್ಟಿರುವ ಹಕ್ಕನ್ನು ನಾವು ಬಳಸಿಕೊಳ್ಳೊಣ. ಗಾಜನೂರು ಮಹಾಶಕ್ತಿ ಕೇಂದ್ರದಲ್ಲಿ ಕಳೆದ ಚುಮಾವಣೆಯಲ್ಲಿ 3.500 ಲೀಡ್ ಬಂದಿತ್ತು. ಈಗ 7 ಸಾವಿರ ಮತ ಬರುವ ಹಾಗೆ ಮಾಡಿ ಎಂದು ವಿನಂತಿ ಮಾಡಿ ಕೊಂಡರು. ಈ ವೇಳೆ ತೀರ್ಥಹಳ್ಳಿ‌ ಶಾಸಕ ಆರಗ ಜ್ಞಾನೇಂದ್ರ, ಮುಖಂಡರುಗಳಾದ ಡಿ.ಎಸ್.ಅರುಣ್, ಚನ್ನಬಸಪ್ಪ ಸೇರಿ ಇತರರು ಹಾಜರಿದ್ದರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.