ಶಿವಮೊಗ್ಗ : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಶಿವಮೊಗ್ಗ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ 'ನಮ್ಮೊಲುಮೆಯ ಭಾವಾಭಿನಂದನಾ' ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಗರದ ಹಳೆ ಜೈಲು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 100ನೇ ವರ್ಷದ ಜನ್ಮ ದಿನ ಆಚರಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ಯಡಿಯೂರಪ್ಪ ರೈತರನ್ನು ಸಂಘಟಿಸಿದ್ದೇ ರೋಚಕ. ನಾನು ಮತ್ತು ಅವರು ಒಂದು ಸ್ಕೂಟರ್ನಲ್ಲಿ ಇಡೀ ಶಿವಮೊಗ್ಗ ಸುತ್ತಿದ್ದೆವು. ರೈತರ ಸಂಘಟನೆಗೆ ಇಡೀ ಶಿವಮೊಗ್ಗ ಸುತ್ತಿ ಅಂದು ಒಂದು ಲಕ್ಷ ರೂ. ಒಟ್ಟು ಗೂಡಿಸಿದ್ದೆವು. 25 ಸಾವಿರ ರೈತರನ್ನು ಸೇರಿಸಿ ಶಿವಮೊಗ್ಗದಲ್ಲಿ ಸಮಾವೇಶ ಮಾಡಿದ್ದೆವು. ಬ
ಳಿಕ ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ರಾಜ್ಯ ಸುತ್ತಿದ್ದರ ಪರಿಣಾಮ ಇದೀಗ ರೈತರ ಪರ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಹಳೆಯ ನೆನಪುಗಳನ್ನು ಮೆಲಕು ಹಾಕಿದರು. ಇಳಿ ವಯಸ್ಸಿನಲ್ಲಿಯೂ ಸಿಎಂ ಬಿಎಸ್ವೈ ಅವರು ರೈತರ ಪರ ಹೋರಾಡುತ್ತಿದ್ದಾರೆ. ನಾವೆಲ್ಲರೂ ಸೇರಿ ರಾಷ್ಟ್ರೀಯ ವಿಚಾರ ಜಾಗೃತಗೊಳಿಸೋಣ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಔಷಧ ಭವನ ಉದ್ಘಾಟಿಸಿದ ಸಿಎಂ ಬಿಎಸ್ವೈ : ಶಿವಮೊಗ್ಗ ಜಿಲ್ಲೆಯ ಗೋಪಾಳ ನಗರದಲ್ಲಿ ನೂತನವಾಗಿ ನಿರ್ಮಿಸಿದ ಜಿಲ್ಲಾ ಔಷಧ ಭವನನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಉದ್ಘಾಟಿಸಿದರು. ಮುಖ್ಯಮಂತ್ರಿಗಳಿಗೆ ಸಚಿವ ಕೆ.ಎಸ್ ಈಶ್ವರಪ್ಪ ಸಾಥ್ ನೀಡಿದರು.
ಓದಿ: ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಗೆ ಆದ್ಯತೆ: ಸಚಿವ ಕೆ.ಎಸ್. ಈಶ್ವರಪ್ಪ