ಶಿವಮೊಗ್ಗ: ಸೊರಬ ಶಾಸಕರಾದ ಕುಮಾರ್ ಬಂಗಾರಪ್ಪನವರು ಬಿಳುವಾಣಿ ಗ್ರಾಮ ಪಂಚಾಯತಿಯ ಪ್ರಗತಿ ಪರಿಶೀಲನೆ ನಡೆಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ, ಗ್ರಾಮದ ಜನರಿಗೆ ಯೋಜನೆಗಳು ಸರ್ಮಪಕವಾಗಿ ತಲುಪುತ್ತಿದೆಯೇ ಎಂಬುದರ ಕುರಿತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ಮಾಹಿತಿ ಪಡೆದುಕೊಂಡರು.
ಗ್ರಾಮ ಪಂಚಾಯತ್ನಲ್ಲಿ ಪೆಂಡಿಂಗ್ ಇರುವ ಯೋಜನೆಯ ಮಾಹಿತಿ ಪಡೆಯುವಾಗ ಕೆಲ ಫಲಾನುಭವಿಗಳಿಗೆ ಸಲಕರಣೆಗಳು ತಲುಪದೆ ಇರುವ ಕುರಿತು ಕೇಳಿದ ಪ್ರಶ್ನೆಗೆ ಪಿಡಿಒ ಉತ್ತರಿಸಲು ತಡಬಡಾಯಿಸಿದಾಗ ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು.