ಶಿವಮೊಗ್ಗ: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ಲಾಕ್ಡೌನ್ ಮಾಡಿರುವ ಕಾರಣ ಜಿಲ್ಲೆಯ ಗಡಿಭಾಗಗಳಲ್ಲಿ ಜಿಲ್ಲಾಡಳಿತ ಚೆಕ್ಪೋಸ್ಟ್ ರಚನೆ ಮಾಡಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಶಿವಮೊಗ್ಗ ಜಿಲ್ಲೆಯ ಜನ ವಾಪಸ್ ಬರಬಹುದು ಎಂಬ ಮಾಹಿತಿಯ ಮೇರೆಗೆ ಜಿಲ್ಲೆಯ ಭದ್ರಾವತಿಯ ಬಳಿ ಬಿ.ಹೆಚ್. ರಸ್ತೆಯ ಕೆರಹಳ್ಳಿಯ ಬಳಿ ಒಂದು ಚೆಕ್ಪೋಸ್ಟ್ ಹಾಗೂ ಭದ್ರಾವತಿ ತಾಲೂಕು ಹಂಚಿನ ಸಿದ್ದಾಪುರ ಗ್ರಾಮದ ಭದ್ರಾ ಕಾಲುವೆಯ ಬಳಿ ಮತ್ತೊಂದು ಚೆಕ್ಪೋಸ್ಟ್ ರಚನೆ ಮಾಡಲಾಗಿದೆ.
![ಶಿವಮೊಗ್ಗ ಗಡಿಯಲ್ಲಿ ಚೆಕ್ಪೋಸ್ಟ್](https://etvbharatimages.akamaized.net/etvbharat/prod-images/kn-smg-04-police-chekpost-7204213_13072020154007_1307f_1594635007_1065.jpg)
ಕೆರೆಹಳ್ಳಿ ಚೆಕ್ಪೋಸ್ಟ್ ಬಳಿ ಬೆಂಗಳೂರಿನಿಂದ ಬರುವ ಪ್ರಯಾಣಿಕರು ಹಾಗೂ ಹಂಚಿನ ಸಿದ್ದಾಪುರ ಗ್ರಾಮದ ಬಳಿ ಚಿತ್ರದುರ್ಗ ಕಡೆಯಿಂದ ಬರುವವರ ತಪಾಸಣೆಗಾಗಿ ಚೆಕ್ಪೋಸ್ಟ್ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.