ETV Bharat / state

ಶಿವಮೊಗ್ಗದಲ್ಲಿ ಜಾನುವಾರು ಸಂತೆ-ಜಾತ್ರೆ-ಸಾಗಾಣಿಕೆ ನಿಷೇಧ - Cattle fair ban

ಜಾನುವಾರಗಳಲ್ಲಿ ಚರ್ಮ ಗಂಟು ರೋಗ. ಮುಂಜಾಗೃತಾ ಕ್ರಮವಾಗಿ ಶಿವಮೊಗ್ಗದಲ್ಲಿ ಜಾನುವಾರು ಸಂತೆ, ಜಾತ್ರೆ ಹಾಗೂ ಸಾಗಾಣಿಕೆ ನಿಷೇಧಿಸಿ ಡಿಸಿ ಆದೇಶ.

Cattle fair ban in Shivamogga
ಸಾಂದರ್ಭಿಕ ಚಿತ್ರ
author img

By

Published : Nov 16, 2022, 1:21 PM IST

ಶಿವಮೊಗ್ಗ: ಜಾನುವಾರಗಳಲ್ಲಿ ಚರ್ಮ ಗಂಟು ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಜಾನುವಾರ ಸಂತೆ, ಜಾತ್ರೆ ಮತ್ತು ಸಾಗಾಣಿಕೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಆದೇಶ ನೀಡಿದ್ದಾರೆ.

ನ. 15ರಿಂದ ನ.30ರವರೆಗೆ ಕರ್ನಾಟಕ ಅನಿಮಲ್ ಡಿಸೀಸ್(ಕಂಟ್ರೋಲ್)ಆಕ್ಟ್ 1961 ಮತ್ತು ಸಿಆರ್​​‍ಪಿಸಿ ಕಲಂ 144ರ ಮೇರೆಗೆ ಜಿಲ್ಲೆಯಾದ್ಯಂತ ಸಂತೆ-ಜಾತ್ರೆ-ಸಾಗಾಣಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಈ ಆದೇಶವು ಸಾಮೂಹಿಕವಾಗಿ ಜಾನುವಾರುಗಳು ಸೇರುವಂತಹ ಜಾನುವಾರು ಸಂತೆ, ಜಾತ್ರೆ ಮತ್ತು ಜಾನುವಾರು ಸಾಗಾಣಿಕೆಗೆ ಮಾತ್ರ ಅನ್ವಯವಾಗುತ್ತದೆ.

ಇದನ್ನು ಹೊರತುಪಡಿಸಿ ಬೇರೆ ಯಾವ ಉದ್ದೇಶಕ್ಕೂ ಅನ್ವಯಿಸುವುದಿಲ್ಲ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ರಾಸುಗಳಲ್ಲಿ ಚರ್ಮಗಂಟು ರೋಗ: ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.