ಶಿವಮೊಗ್ಗ : ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಕಳ್ಳನೋರ್ವ ಕದ್ದೊಯ್ದಿರುವ ಘಟನೆ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದೆ. ಸಾಗರದ 24 ನೇ ವಾರ್ಡ್ ನ ಶ್ರೀನಗರ ನಿವಾಸಿ ಉಮೇಶ್ ಪಂಡಿತ್ ಎಂಬುವರಿಗೆ ಸೇರಿದ KA 25, N-0561 ಓಮ್ನಿ ಕಾರನ್ನು ಕಳ್ಳತನ ಮಾಡಲಾಗಿದೆ. ಕಳ್ಳ ಗುರುವಾರ ಬೆಳಗಿನ ಜಾವ ಸುಮಾರು 3 ರಿಂದ 3.30ರ ನಡುವೆ ಕಾರಿನೊಂದಿಗೆ ಪರಾರಿಯಾಗಿದ್ದಾನೆ.
ಕಳ್ಳನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ : ಕಳ್ಳ ಕಾರನ್ನು ಕದ್ದೊಯ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾನ್ಯನಂತೆ ನಡೆದುಕೊಂಡು ಬಂದು ಕಾರು ಕಳ್ಳತನ ಮಾಡಿ ಹೋಗಿದ್ದು, ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಓದಿ : 70ರ ವೃದ್ಧ ತಾಯಿ ಶೌಚಗೃಹದಲ್ಲಿ ಕೂಡಿ ಹಾಕಿದ್ದ ಮಗ - ಸೊಸೆ.. ಕೇಸ್ ದಾಖಲು