ETV Bharat / state

ಕೊರೊನಾ ಬರದಂತೆ ಸಿಪಾಯಿ ರೀತಿ ಕಾಯುತ್ತಂತೆ ಪಪ್ಪಾಯಿ... ಬೆಳೆಗಾರರ ಲಕ್​ ಬದಲಿಸಿದ ಪರಂಗಿ ಹಣ್ಣು

author img

By

Published : Jul 3, 2020, 5:15 PM IST

Updated : Jul 3, 2020, 5:25 PM IST

ಕೊರೊನಾದಿಂದ ವ್ಯಾಪಾರ ವಹಿವಾಟಿಲ್ಲದೆ ಪಪ್ಪಾಯಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಅದೇ ಕೊರೊನಾದಿಂದ ಪಪ್ಪಾಯಿಗೆ ಭಾರೀ ಬೇಡಿಕೆ ಶುರುವಾಗಿದೆ.

bumper demand for papaya fruit in Shimoga
ಕೊರೊನಾದಿಂದ ಪಪ್ಪಾಯಿ ಹಣ್ಣಿಗೆ ಬಂತು ಫುಲ್ ಡಿಮ್ಯಾಂಡ್​

ಶಿವಮೊಗ್ಗ: ಕೊರೊನಾ ವೈರಸ್ ಹಾವಳಿಯಿಂದ ಅನೇಕ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಆಗದೇ ಸಂಕಷ್ಟಕ್ಕೆ ಸಿಲುಕಿದ್ದರು. ಅದರಂತೆ ಪಪ್ಪಾಯಿ ಹಣ್ಣು ಸಹ ಕೊರೊನಾ ಸಂದರ್ಭದಲ್ಲಿ ತನ್ನ ಮೌಲ್ಯ ಕಳೆದುಕೊಂಡು, ಕೊಳ್ಳುವವರಿಲ್ಲದೆ ಬೀದಿಗೆ ಬಿಸಾಡುವ ಪರಿಸ್ಥಿತಿ ಎದುರಾಗಿತ್ತು. ಆದರೆ ಈಗ ಅದೇ ಕೊರೊನಾದಿಂದಾಗಿ ಮತ್ತೆ ಪಪ್ಪಾಯಿ ಹಣ್ಣಿಗೆ ಬಂಪರ್ ಡಿಮ್ಯಾಂಡ್ ಬಂದಿದೆ.

ಪಪ್ಪಾಯಿ ಹಣ್ಣು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಆರೋಗ್ಯಕ್ಕೂ ಒಳ್ಳೆಯದು ಎಂದು ಗ್ರಾಹಕರು ಪಪ್ಪಾಯಿ ಹಣ್ಣು ಖರೀದಿಗೆ ಮುಗಿಬಿದ್ದಿದ್ದಾರೆ.

ಕೊರೊನಾ ಸೋಂಕಿತರಿಗೆ ನೀಡುವ ಆಹಾರ ಮೆನುವಿನಲ್ಲಿ ಪಪ್ಪಾಯಿ ಹಣ್ಣು ಸಹ ಇದೆ. ಹಾಗಾಗಿ ಹಣ್ಣಿನ ಮಾರಾಟ ಹೆಚ್ಚಿದೆ ಎನ್ನುತ್ತಾರೆ ಮಾರಾಟಗಾರರು. ನಗರದ ಎಲ್ಲಾ ಪ್ರಮುಖ ರಸ್ತೆಗಳ ಪಕ್ಕದಲ್ಲಿ ಪಪ್ಪಾಯಿ ಹಣ್ಣಿನ ಮಾರಾಟ ಜೋರಾಗಿ ನಡೆಯುತ್ತಿದ್ದು ಗ್ರಾಹಕರು ಮುಗಿಬಿದ್ದು ಪಪ್ಪಾಯಿ ಖರೀದಿ ಮಾಡುತ್ತಿದ್ದಾರೆ.

Last Updated : Jul 3, 2020, 5:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.