ಶಿವಮೊಗ್ಗ: ಆಗುಂಬೆ ಘಾಟಿ ಬಳಿಯ ಕೌರಿಹಕ್ಲು ಗ್ರಾಮದ ಭಟ್ಟರಹಳ್ಳದ ಸೇತುವೆಯ ಪ್ಯಾರಪಿಟ್ ಕುಸಿತವಾಗಿದೆ.

ಈ ಸೇತುವೆ ಬ್ರಿಟಿಷ್ ಕಾಲದ್ದಾಗಿದೆ. ಇದು ಮಲೆನಾಡು ಹಾಗೂ ಕರಾವಳಿಗೆ ಸಂಪರ್ಕ ಕಲ್ಪಿಸುವ ಘಾಟಿಯಾಗಿದೆ. ಸೇತುವೆ ಕುಸಿತವಾದ ಕಾರಣದಿಂದ ವಾಹನ ಚಾಲಕರಲ್ಲಿ ಭಯದ ವಾತಾವರಣ ಉಂಟಾಗಿದೆ.

ಇದು ರಾಷ್ಟ್ರೀಯ ಹೆದ್ದಾರಿ 169 ಸಿ ಆಗಿದೆ. ಕಾಮಗಾರಿ ನಡೆಸಬೇಕಾದ ಇಲಾಖೆಯವರು ಕೋವಿಡ್ ಕಥೆ ಹೇಳುತ್ತಿದ್ದಾರೆ. ಸೇತುವೆ ಕಾಮಗಾರಿ ನಡೆಸದೆ ಹೋದರೆ ಹೆದ್ದಾರಿ ಬಂದ್ ಆಗಲಿದೆ.