ಶಿವಮೊಗ್ಗ: ತಾಲೂಕಿನ ನಿದಿಗೆಯ ನಾಡ ಕಚೇರಿಯಲ್ಲಿ ಆದಾಯ ಪ್ರಮಾಣ ಪತ್ರ ನೀಡಲು 8 ಸಾವಿರ ರೂ. ಲಂಚ ಸ್ವೀಕರಿಸುವಾಗ ಉಪ ತಹಶೀಲ್ದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸಾವಿತ್ರಿ ಎಂಬ ಮಹಿಳೆ ವೃದ್ಧಾಪ್ಯ ವೇತನಕ್ಕಾಗಿ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರಮಾಣ ಪತ್ರ ಬೇಕಾದರೆ 15 ಸಾವಿರ ರೂ. ಲಂಚ ಕೊಡಬೇಕೆಂದು ಉಪ ತಹಶೀಲ್ದಾರ್ ಪ್ರದೀಪ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಕುರಿತು ಸಾವಿತ್ರಿ ಎಸಿಬಿಗೆ ದೂರು ನೀಡಿದ್ದಾರೆ.ಈ ಸಂಬಂಧ ಎಸಿಬಿ ಡಿವೈಎಸ್ಪಿ ವೇಣುಗೋಪಾಲ್ ತಂಡ ಯೋಜನೆ ರೂಪಿಸಿ ಉಪ ತಹಶೀಲ್ದರ್ ಪ್ರದೀಪ್ ಅವರನ್ನು ಬಂಧಿಸಿದೆ.