ETV Bharat / state

ಶಿವಮೊಗ್ಗದಲ್ಲಿ ಹೊರಗುತ್ತಿಗೆ ನೌಕರರಿಂದ ರಕ್ತ ಕ್ರಾಂತಿ ಪ್ರತಿಭಟನೆ: ಅಸ್ವಸ್ಥಗೊಂಡ ಕಾರ್ಮಿಕರು - ಸಿಮ್ಸ್​ ಆಸ್ಪತ್ರೆ ಆವರಣದಲ್ಲಿ ಹೊರಗುತ್ತಿಗೆ ನೌಕರರಿಂದ ರಕ್ತಕ್ರಾಂತಿ ಪ್ರತಿಭಟನೆ

ಶಿವಮೊಗ್ಗ ನಗರದ ಸಿಮ್ಸ್​ ಆಸ್ಪತ್ರೆ ಆವರಣದಲ್ಲಿ ಹೊರಗುತ್ತಿಗೆ ನೌಕರರು ರಕ್ತ ಕ್ರಾಂತಿ ಪ್ರತಿಭಟನೆಯಲ್ಲಿ ತೊಡಗಿದ್ದು, ಈ ವೇಳೆ ಕೆಲವರು ಅಸ್ವಸ್ಥರಾಗಿದ್ದಾರೆ.

Bloodshed Protest in Shimoga
ಹೊರಗುತ್ತಿಗೆಗಾರರಿಂದ ರಕ್ತಕ್ರಾಂತಿ ಪ್ರತಿಭಟನೆ
author img

By

Published : Sep 25, 2020, 12:35 PM IST

ಶಿವಮೊಗ್ಗ: ನಗರದ ಸಿಮ್ಸ್​​ ಆಸ್ಪತ್ರೆ ಮುಂಭಾಗದಲ್ಲಿ ಹೊರ ಗುತ್ತಿಗೆ ನೌಕರರು ಇಂದು ರಕ್ತ ಕ್ರಾಂತಿ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಹಲವು ಪ್ರತಿಭಟನಾಕಾರರು ಅಸ್ವಸ್ಥಗೊಂಡಿದ್ದಾರೆ.

ಹೊರಗುತ್ತಿಗೆ ನೌಕರರಿಂದ ರಕ್ತ ಕ್ರಾಂತಿ ಪ್ರತಿಭಟನೆ

ಕಳೆದ ನಾಲ್ಕು ದಿನಗಳಿಂದ ಹೊರಗುತ್ತಿಗೆ ರದ್ದುಪಡಿಸಿ ಒಳಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಳ್ಳುವಂತೆ ಸಿಮ್ಸ್​​ ಆಸ್ಪತ್ರೆ ಮುಂಭಾಗದಲ್ಲಿ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಇಂದು ಉಗ್ರ ಹೋರಾಟ ನಡೆಸುವ ಸಲುವಾಗಿ ರಕ್ತಕ್ರಾಂತಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಏರ್ಪಟ್ಟಿದ್ದು, ಇಬ್ಬರ ನಡುವಿನ ಮಾತಿನ ಚಕಮಕಿ ತೀವ್ರಗೊಳ್ಳುತ್ತಲೇ ಅನೇಕ ಪ್ರತಿಭಟನಾಕಾರರು ಅಸ್ವಸ್ಥರಾಗಿದ್ದಾರೆ.

ಹೊರಗೊತ್ತಿಗೆ ರದ್ದುಪಡಿಸಿ ನೌಕರಿಯನ್ನು ಖಾಯಂಗೊಳಿಸುವಂತೆ ಆಗ್ರಹಿಸುತ್ತಿರುವ ನೌಕರರು, ಪೊಲೀಸರು ಹಾಗೂ ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.