ETV Bharat / state

ಹೊಳೆಹೊನ್ನೂರಿನ ಭ್ರಮರಾಂಭ ಸಾಂಸ್ಕೃತಿಕ ಕಲಾ ಯುವತಿ ಮಂಡಳಿಗೆ ಕಪ್ಪುಪಟ್ಟಿ..

author img

By

Published : Jun 25, 2020, 11:21 PM IST

ಹೊಳೆಹೊನ್ನೂರಿನ ಭ್ರಮರಾಂಭ ಸಾಂಸ್ಕೃತಿಕ ಕಲಾ ಯುವತಿ ಮಂಡಳಿ ಶಿವಮೊಗ್ಗದ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯ ಅಂಗ ಸಂಸ್ಥೆಯಾಗಿದೆ. ಆದರೆ ಶಿವಮೊಗ್ಗದ ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆ ಕಾರಣ ಇಲ್ಲದೆ ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಿದೆ ಎಂದು ಕಲಾ ಮಂಡಳಿ ಗೌರವಾಧ್ಯಕ್ಷ ಎಂ. ಈಶ್ವರಪ್ಪ ನವಲೆ ದೂರಿದ್ದಾರೆ.

shimoga

ಶಿವಮೊಗ್ಗ: ಕಲಾವಿದರನ್ನು ಹಾಗೂ ಕಲಾ ತಂಡಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾ ತಂಡಗಳಿಗೆ ಪ್ರೋತ್ಸಾಹ ನೀಡುವ ಬದಲು ಕಲಾ ತಂಡಗಳಿಗ ಕಿರುಕುಳ ನೀಡುತ್ತಿದೆ.

ಕಲಾ ಮಂಡಳಿ ಗೌರವಾಧ್ಯಕ್ಷ ಎಂ. ಈಶ್ವರಪ್ಪ ನವಲೆ

ಹೌದು, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರಿನ ಭ್ರಮರಾಂಭ ಸಾಂಸ್ಕೃತಿಕ ಕಲಾ ಯುವತಿ ಮಂಡಳಿಯನ್ನು ಶಿವಮೊಗ್ಗದ ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆಯು ಕಾರಣ ಇಲ್ಲದೆ ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಿದೆ. ಇದರ ವಿರುದ್ದ ಈಗ ಕಲಾ ಮಂಡಳಿಯು ಹೈಕೋರ್ಟ್ ಮೆಟ್ಟಿಲೇರಲು ಸಿದ್ದತೆ ನಡೆಸಿದೆ.ಹೊಳೆಹೊನ್ನೂರಿನ ಭ್ರಮರಾಂಭ ಸಾಂಸ್ಕೃತಿಕ ಕಲಾ ಯುವತಿ ಮಂಡಳಿಯು ಕಳೆದ 20 ವರ್ಷಗಳಿಂದ ವಿವಿಧ‌‌ ಕಲಾ‌ ಪ್ರದರ್ಶನದ‌ ಮೂಲಕ ಹೆಸರುವಾಸಿಯಾಗಿದೆ. ಇದು ಶಿವಮೊಗ್ಗದ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯ ಅಂಗ ಸಂಸ್ಥೆಯಾಗಿದೆ. ಭ್ರಮರಾಂಭ ಸಾಂಸ್ಕೃತಿಕ ಕಲಾ ಯುವತಿ ಮಂಡಳಿಯು ಕನ್ನಡ ನಾಡು ನುಡಿ ರಕ್ಷಣೆ, ಕನ್ನಡ ಕಲಾವಂತಿಕೆಯ ರಕ್ಷಣೆ ಸೇರಿದಂತೆ ಕಲೆಯನ್ನು ಉಳಿಸಿ, ಬೆಳೆಸುವ ಯತ್ನವನ್ನು ತಮ್ಮ ಕಲಾ ಪ್ರದರ್ಶನದ‌ ಮೂಲಕ ಮಾಡುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯ ಪ್ರಯೋಜಕತ್ವದಲ್ಲಿ ಅನೇಕ‌ ಕಾರ್ಯಕ್ರಮಗಳನ್ನು ನೀಡಿದೆ.‌

ಆದರೆ 2017 ರಲ್ಲಿ ಬಂದ ಶಿವಮೊಗ್ಗ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಮಂಗಳ ನಾಯಕ್ ಅವರು ಈ ಕಲಾ ಮಂಡಳಿಯು ಕಾರ್ಯಕ್ರಮವನ್ನು ನೀಡದೆ ಹಣ ಪಡೆಯಲು ಬಂದಿದ್ದಾರೆ. ಹಾಗಾಗಿ ಈ ಕಲಾ ಮಂಡಳಿಯನ್ನು ಕಪ್ಪು ಪಟ್ಟಿಗೆ ಸೇರಿಸಿರುವುದಾಗಿ ತಿಳಿಸಿದ್ದಾರೆ. ಆದರೆ ನೈಜವಾಗಿ ಈ ತಂಡ ಹೊಳೆಹೊನ್ನೂರಿನಲ್ಲಿಯೇ ಕಾರ್ಯಕ್ರಮ ನೀಡಿತ್ತು. ಸುಳ್ಳು ಹೇಳಿ ನಮ್ಮನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಈ ಕುರಿತು ದಾಖಲೆ ಕೇಳಿದರೂ ಸಹ ಸಾಕಷ್ಟು ಅಲೆದಾಡಿಸಲಾಗಿದೆ ಎಂದು ಕಲಾ ಮಂಡಳಿಯ ಸಿಇಓ ಶೋಭಾ ದೇವರಾಜ್ ಅವರು ಆರೋಪಿಸಿದ್ದಾರೆ.

ಕಲಾ ಮಂಡಳಿ ಗೌರವಾಧ್ಯಕ್ಷ ಎಂ. ಈಶ್ವರಪ್ಪ ನವಲೆ ಮಾತನಾಡಿ, ತಮ್ಮ ಕಲಾ ಮಂಡಳಿಗೆ ಅನ್ಯಾಯವಾಗಿದೆ ಎಂದು ತಂಡದವರು, ಜಿಲ್ಲಾಧಿಕಾರಿಗಳನ್ನು, ಜಿಲ್ಲಾ ಪಂಚಾಯತ್ ಸೇರಿದಂತೆ‌ ಇಲಾಖೆಯ ಗಮನಕ್ಕೂ‌ ತಂದರು‌ ಪ್ರಯೋಜನವಾಗಲಿಲ್ಲ. ನಂತರ ಜಿಲ್ಲಾ‌ ಪಂಚಾಯತ್ ವತಿಯಿಂದ ತನಿಖಾ ಸಮಿತಿ ರಚನೆ ಮಾಡಿತು. ಈ ಸಮಿತಿಯು ಕಲಾ ಮಂಡಳಿಯು ಕಾರ್ಯಕ್ರಮ ನೀಡಿದೆ. ಇದರಿಂದ ಕಪ್ಪು ಪಟ್ಟಿಯಿಂದ ತೆಗೆಯಬೇಕು. ಕಾರ್ಯಕ್ರಮದ ಹಣ ನೀಡಬೇಕು ಎಂದು ವರದಿ ನೀಡಿದರೂ ಸಹ ನಿರ್ದೇಶಕರು ಪ್ರತಿಕ್ರಿಯಿಸಲಿಲ್ಲ.

ಕಳೆದ ಮೂರು ವರ್ಷಗಳಿಂದ ಕಪ್ಪು ಪಟ್ಟಿಗೆ‌ ಸೇರಿರುವ ಕುರಿತು‌ ಮಾಹಿತಿಯನ್ನು ನೀಡಿಲ್ಲ. ಅಲ್ಲದೆ ಕಾರ್ಯಕ್ರಮದ ಹಿಂದಿನ ಹಣವನ್ನು ನೀಡದೆ, ಕಳೆದ 3 ವರ್ಷಗಳಿಂದ ಯಾವುದೇ ಕಾರ್ಯಕ್ರಮವನ್ನು ಸಹ ನೀಡಿಲ್ಲ. ಈ ಕುರಿತು ಎಲ್ಲಾ ರಾಜಕೀಯ ನಾಯಕರುಗಳಿಂದ ಪತ್ರ ನೀಡಿದರು ಸಹ ನಿರ್ದೇಶಕರು ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಭ್ರಮರಂಭ ಸಾಂಸ್ಕೃತಿಕ ಕಲಾ ಯುವತಿ ಮಂಡಳಿರವರು ಈಗ ಹೈ ಕೋರ್ಟ್ ಮೇಟ್ಟಿಲೇರಲು ತಯಾರಿ ನಡೆಸಿದ್ದಾರೆ ಎಂದರು.

For All Latest Updates

TAGGED:

shimoga
ETV Bharat Logo

Copyright © 2024 Ushodaya Enterprises Pvt. Ltd., All Rights Reserved.