ETV Bharat / state

ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ವಿಶೇಷ ಸಭೆ ಪ್ರಾರಂಭ: ಸಂಘಟನೆಯ ಬಲವರ್ಧನೆಗೆ ಚರ್ಚೆ

author img

By

Published : Jan 3, 2021, 1:14 PM IST

Updated : Jan 3, 2021, 5:59 PM IST

ಬಿಜೆಪಿ ಮೊದಲಿನಿಂದಲೂ ಸಂಘಟನಾತ್ಮಕವಾಗಿ ಕಾರ್ಯ ಮಾಡುತ್ತಿದೆ. ಹಿರಿಯರ ಮಾರ್ಗದರ್ಶನದಲ್ಲಿ ಸದ್ವಿಚಾರಗಳನ್ನು ಇಟ್ಟುಕೊಂಡು ಬಿಜೆಪಿ ಮುನ್ನಡೆಯುತ್ತಿದೆ. ಬಿಜೆಪಿಯಲ್ಲಿ ವ್ಯಕ್ತಿಗಳಿಗಿಂತಲೂ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

BJP special meeting started in Shimoga
ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ವಿಶೇಷ ಸಭೆ ಪ್ರಾರಂಭ

ಶಿವಮೊಗ್ಗ: 25 ವರ್ಷಗಳ ನಂತರ ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿಯ ವಿಶೇಷ ಸಭೆ ನಡೆಯುತ್ತಿದೆ. ಶಿವಮೊಗ್ಗ ಹೊರ ವಲಯದ ಪ್ರೇರಣ ಎಜುಕೇಷನ್ ಟ್ರಸ್ಟ್​ನ ಪ್ರೇರಣ ಹಾಲ್​ನಲ್ಲಿ ವಿಶೇಷ ಸಭೆ ಪ್ರಾರಂಭವಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ ಕುಮಾರ ಕಟೀಲ್, ಸಿಎಂ ಯಡಿಯೂರಪ್ಪ, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರವರು ಸಿಂಗಾರವನ್ನು ಅರಳಿಸುವ ಮೂಲಕ ಸಭೆ ಉದ್ಘಾಟಿಸಿದರು. ಈ ವೇಳೆ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್ ರವರಿಗೆ ರಾಜ್ಯ ಬಿಜೆಪಿ ಘಟಕದಿಂದ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಹಿನ್ನೆಲೆ ಸನ್ಮಾನ ಮಾಡಲಾಯಿತು.

ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ವಿಶೇಷ ಸಭೆ ಪ್ರಾರಂಭ: ಸಂಘಟನೆಯ ಬಲವರ್ಧನೆಗೆ ಚರ್ಚೆ

ಕೇಂದ್ರ ಸಚಿವರುಗಳಾದ ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ‌ಸಂಸದರಾದ ಖೂಬಾ, ರಾಘವೇಂದ್ರ, ಡಿಸಿಎಂ ಗಳಾದ ಗೋವಿಂದ ಕಾರಜೋಳ, ಲಕ್ಷಣ ಸವದಿ, ಸಚಿವರಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಜಗದೀಶ್ ಶೆಟ್ಟರ್, ಅರವಿಂದ‌ ಲಿಂಬಾವಳಿ, ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ವೇದಿಕೆಯಲ್ಲಿದ್ದರು.

ಸಭೆಗೆ ರಾಜ್ಯದಿಂದ 250 ಜನ ಅಪೇಕ್ಷಿತರು ಆಗಮಿಸಿದ್ದಾರೆ. ಸಂಸದರು, ‌ಶಾಸಕರುಗಳು ಸೇರಿದಂತೆ ಅನೇಕ ಬಿಜೆಪಿ ಹಿರಿಯ ಮುಖಂಡರು ಹಾಜರಾಗಿದ್ದಾರೆ. ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಚಿವ ಈಶ್ವರಪ್ಪ, ಬಿಜೆಪಿ ಮೊದಲಿನಿಂದಲೂ ಸಂಘಟನಾತ್ಮಕವಾಗಿ ಕಾರ್ಯ ಮಾಡುತ್ತಿದೆ. ಹಿರಿಯರ ಮಾರ್ಗದರ್ಶನದಲ್ಲಿ ಸದ್ವಿಚಾರಗಳನ್ನು ಇಟ್ಟುಕೊಂಡು ಬಿಜೆಪಿ ಮುನ್ನಡೆಯುತ್ತಿದೆ. ಬಿಜೆಪಿಯಲ್ಲಿ ವ್ಯಕ್ತಿಗಿಂತಲೂ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಹಿಂದೆ ನಮ್ಮ ಪಕ್ಷ ದೇಶದಲ್ಲಿ ಕೇವಲ ಇಬ್ಬರು ಸಂಸದರು, ಇಬ್ಬರು ಶಾಸಕರನ್ನು ಹೊಂದಿತ್ತು. ಈಗ ದೇಶ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ.

ಆದರೆ ನಮಗೆ ಇನ್ನೂ ಪೂರ್ಣ ಬಹುಮತ ಬಂದಿಲ್ಲ. ಮುಂದೆ ಬರುವ ಚುನಾವಣೆಯಲ್ಲಿ ಕನಿಷ್ಠ 150 ಸೀಟು ಬರಲಿವೆ. ಈ‌ ನಿಟ್ಟಿನಲ್ಲಿ ಇಂದು ಇಲ್ಲಿಗೆ ಬಂದವರು ಇಲ್ಲಿಂದ ಹೋದ ಮೇಲೆ ಕೆಲಸ ಮಾಡಬೇಕಿದೆ. ಮುಂಬರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತದೆ. ಇದಕ್ಕೆ‌ ನಾನೇ ಉದಾಹರಣೆ ಎಂದರು.

Last Updated : Jan 3, 2021, 5:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.