ETV Bharat / state

ಬಿಜೆಪಿ ಶ್ರೀಮಂತರ ಪರ, ಬಡವರಿಗೆ ಯೋಜನೆ ತಂದ್ರೆ ಪ್ರಶ್ನಿಸ್ತಾರೆ: ಮಲ್ಲಿಕಾರ್ಜುನ ಖರ್ಗೆ - ನರೇಗಾ ಯೋಜನೆ

15 ಕೋಟಿ ಉದ್ಯೋಗ, 15 ಲಕ್ಷ ರೂ ಹಣ ಬಂತೇ?. ಗ್ಯಾಸ್ ಸಿಲಿಂಡರ್ 410 ರೂ ಇದ್ದದ್ದು ಈಗ 1,150 ರೂ ಆಗಿದೆ. ಡೀಸೆಲ್‌, ಪೆಟ್ರೋಲ್, ಜಿಎಸ್​​ಟಿ, ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

AICC President Mallikarjuna Kharge spoke at the press conference.
ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು.
author img

By

Published : Apr 30, 2023, 5:48 PM IST

Updated : Apr 30, 2023, 6:02 PM IST

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶಿವಮೊಗ್ಗ: ಶ್ರೀಮಂತರ ಪರವಿರುವ ಬಿಜೆಪಿ ಬಡವರ ಪರ ಕಾಂಗ್ರೆಸ್‌ ಏನಾದರೂ ಯೋಜನೆ ತಂದ್ರೆ ಪ್ರಶ್ನಿಸ್ತಾರೆ. ಕಾಂಗ್ರೆಸ್​​ಗೆ ಬಡವರ ಪರ ಕಾಳಜಿ ಇದೆ, ಬಿಜೆಪಿ ಯಾವಾಗಲೂ ಶ್ರೀಮಂತರ ಪರವಿರುವ ಪಕ್ಷ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೂರಿದರು.

ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಚಿತ ಯೋಜನೆಗಳ ಜಾರಿ ಸಾಧ್ಯವಿಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಕಾಂಗ್ರೆಸ್​ಗೆ ಅದು ಸಾಧ್ಯವಿದೆ. ಯಾವುದು ಜಾರಿ ಮಾಡಲು ಸಾಧ್ಯವೋ ಅದನ್ನು ಜಾರಿ ಮಾಡುತ್ತೇವೆ. ಈ ಹಿಂದೆ ನರೇಗಾ, ಆಹಾರ ಭದ್ರತೆ ಕಾಯ್ದೆ ಮಾಡಿದಾಗಲೂ ಹೀಗೆಯೇ ಹೇಳಿದ್ದರು ಎಂದರು.

ಉಚಿತ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ಮೊದಲ ಸಚಿವ ಸಂಪುಟದಲ್ಲಿಯೇ ಅನುಮೋದನೆ ಪಡೆದು ಜಾರಿ ಮಾಡುತ್ತೇವೆ. ನಮ್ಮ ಟ್ಯಾಕ್ಸ್‌ನಿಂದಲೇ ಅದಾ‌ನಿಗೆ ಕೋಟ್ಯಂತರ ರೂ ನೀಡಿದ್ರಲ್ಲ. ಸ್ಟೇಟ್ ಬ್ಯಾಂಕ್ ಠೇವಣಿ ಇಟ್ಟಿದ್ದನ್ನೂ ಸಾಲದ ರೂಪದಲ್ಲಿ ನೀಡಿದ್ರು. ಬಿಜೆಪಿಯವರು ಶ್ರೀಮಂತರ ಕಡೆ ನೋಡ್ತಾರೆ ಎಂದು ಟೀಕಿಸಿದರು.

ದೇವೇಗೌಡರ ಬಳಿ ಯಾವ ದೂತರು ಹೋಗಿದ್ದಾರೋ ಗೂತ್ತಿಲ್ಲ: ಚುನಾವಣೆಗೆ ಮೊದಲು ಮೈತ್ರಿ ಬಗ್ಗೆ ಮಾತನಾಡಲು ನಮ್ಮ ಬಳಿ ದೂತರು ಬಂದಿದ್ದರು ಎಂಬ ದೇವೇಗೌಡರ ಹೇಳಿಕೆಗೆ, ಅವರ ಬಳಿ ಯಾರು ಹೋಗಿದ್ದರು ಎಂದು ನನಗೆ ಗೂತ್ತಿಲ್ಲ ಎಂದರು.

ಚುನಾವಣೆ ಪ್ರಚಾರ ನಿಮಿತ್ತ ಅನೇಕ ಜಿಲ್ಲೆಗಳಿಗೆ ಹೋಗ್ತಿದ್ದೇನೆ. ಅನೇಕ ಕಡೆಗಳಲ್ಲಿ ಒಳ್ಳೆಯ ವಾತಾವರಣ ಇದೆ. ಜನ ಸ್ಪಂದಿಸುತ್ತಿದ್ದಾರೆ. ಇದು ಕರ್ನಾಟಕಕ್ಕೆ ಮಹತ್ವದ ಚುನಾವಣೆಯಾಗಿದೆ. ಈ ಹಿಂದೆ ಏನು ಕೆಲಸ ಮಾಡಿದ್ದೇವೆ. ಇಂದಿನ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ. ಅದು ದೇಶದ ರಾಜ್ಯದ ಜನತೆಗೆ ಗೂತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪಿಎಸ್ಐ, ಎಂಜಿನಿಯರ್‌ಗಳ ನೇಮಕಾತಿ ಸೇರಿದಂತೆ ನೇರ ಹಾಗೂ ಹೊರಗುತ್ತಿಗೆ ಸೇರಿದಂತೆ ಶಿಕ್ಷಕರ ನೇಮಕಾತಿಯಲ್ಲೂ ಸರ್ಕಾರ ಹಾಗೂ ಅಧಿಕಾರಿಗಳಿಗೆ ಲಂಚದ ಕಳಂಕ ಅಂಟಿಕೊಂಡಿದೆ. ಇದು ಜನರ ನಿದ್ದೆ ಕೆಡಿಸಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಇದು ಶೇ 40 ಕಮಿಷನ್ ಸರ್ಕಾರ. ಗುತ್ತಿಗೆದಾರರು ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಎಲ್ಲರಿಗೂ ದೂರು ನೀಡಿದರೂ ಪ್ರಯೋಜನವಿಲ್ಲ. ಮೋದಿ ಜಿ ಸ್ವಚ್ಛ ಆಡಳಿತ ನಡೆಸುತ್ತೇವೆ ಎನ್ನುತ್ತಿದ್ದಾರೆ. ನಾನು ತಿನ್ನೋದಿಲ್ಲ, ತಿನ್ನಲೂ ಬಿಡೋದಿಲ್ಲ ಅಂತಾರೆ. ಆದರೆ ತಮ್ಮ ಸಭೆಗಳಲ್ಲಿ ತಿನ್ನುವವರನ್ನು ಜತೆಗೇ ಕೂರಿಸಿಕೊಳ್ಳುತ್ತಾರೆ. ಇದು ಅವರಿಗೆ ಗೂತ್ತಿಲ್ವಾ ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್‌ನವರು ಬೈಯ್ದ ಬಗ್ಗೆ ನಾನು ದಾಖಲೆ ಕೂಡುತ್ತೇನೆ. ಬಿಜೆಪಿಯವರು ತಮ್ಮ ಮೇಲೆ ಅನುಕಂಪ ಬರುವ ಹಾಗೆ ಮಾತನಾಡುತ್ತಾರೆ. ಅಂಬೇಡ್ಕರ್ ಸಂವಿಧಾನ ರಚನೆಯ ಕರಡು ಸಮಿತಿಗೆ ನನ್ನನ್ನು ಯಾಕೆ ಆಯ್ಕೆ ಮಾಡಿದರು. ನನಗಿಂತ ಹೆಚ್ಚಿನ ಅರ್ಹತೆ ಇರುವವರನ್ನು ಬಿಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೇ ನನ್ನನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅಂದ್ರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದು 1949 ರಲ್ಲಿ ತಿಳಿಸಿದ್ದರು. ಇದು ಯಾಕೆ ಮೋದಿಗೆ ತಿಳಿದಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಇದನ್ನೂಓದಿ: ಪ್ರಗತಿ ಗ್ರೂಪ್ ಅಡಿಯಲ್ಲಿ ಅಶ್ವತ್ಥ ನಾರಾಯಣರಿಂದ ಅಕ್ರಮ ಭೂ ಮಾರಾಟ: ಗೌರವ್ ವಲ್ಲಭ್

Last Updated : Apr 30, 2023, 6:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.