ಶಿವಮೊಗ್ಗ: ಬಿಜೆಪಿ ಸುಸಂಸ್ಕೃತ ಜನರ ಪಕ್ಷವೋ, ರೌಡಿಗಳ ಪಕ್ಷವೊ ಅಂತ ಜನ ತೀರ್ಮಾನ ಮಾಡಿ ಬಿಟ್ಟಿದ್ದಾರೆ. ಬಿಜೆಪಿ ಸುಸಂಸ್ಕೃತ ಪಕ್ಷ ಅಂತ ತೀರ್ಮಾನ ಮಾಡಿ ಕೇಂದ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಧಿಕಾರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ರೌಡಿಗಳ ಪಕ್ಷ ಅಂತ ತಿರಸ್ಕಾರ ಮಾಡಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯದ ಕೆಪಿಸಿಸಿ ಅಧ್ಯಕ್ಷರು ಯಾರು, ಮೊನ್ನೆ ತನಕ ತಿಹಾರ್ ಜೈಲ್ ನಲ್ಲಿದ್ದು, ಹೊರಗೆ ಬಂದ್ರೂ. ಯಾವಾಗ ಮತ್ತೆ ಜೈಲಿಗೆ ಹೋಗ್ತಾರೆ ಅಂತ ಗೂತ್ತಿಲ್ಲ. ಇಂಥವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವೂ ಇದೆ. ಎರಡನೇಯದು ಯುವ ಕಾಂಗ್ರೆಸ್ ಅಧ್ಯಕ್ಷ ಬಾರ್ ನಲ್ಲಿ ಕುಡಿದು ಹೊಡೆದಾಡಿ. ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಂತಹ ನಲಪಾಡ್ ಕೈಯಲ್ಲಿ ಕಾಂಗ್ರೆಸ್ ಇದೆ. ಮುಂದಿನ ದಿನಗಳಲ್ಲಿ ಜನ ತೀರ್ಮಾನ ಮಾಡ್ತಾರೆ, ಯಾವುದು ರೌಡಿಗಳ ಪಕ್ಷ ಅಂತ ಹೀಗಾಗಿ ಬಿಜೆಪಿ ಸುಂಸ್ಕೃತ ಪಕ್ಷವಾಗಿದೆ ಅಂತ ನಾನು ಹೇಳುತ್ತೇನೆ ಎಂದರು.
ರಸ್ತೆಯಲ್ಲಿ ಹೋಗುವ ನಾಯಿ ಸಹ ಜೆಡಿಎಸ್ ಗೆ ಹೋಗಲ್ಲ: ಇಬ್ರಾಹಿಂಗೆ ಬೇರೆ ಕೆಲಸವಿಲ್ಲ. ರಸ್ತೆಯಲ್ಲಿ ಹೋಗುವ ನಾಯಿ ಸಹ ಜೆಡಿಎಸ್ ಗೆ ಹೋಗಲ್ಲ. ರಮೇಶ್ ಜಾರಕಿಹೊಳಿ ಅಂಥವರು ಸರ್ಕಾರ ತಂದವರು, ಅವರು ಯಾಕೆ ಜೆಡಿಎಸ್ ಗೆ ಹೋಗ್ತಾರೆ. ಬಿಜೆಪಿ ಬಿಟ್ಟು ಏನೂ ಇಲ್ಲದ ಜೆಡಿಎಸ್ಗೆ ಹೋಗ್ತಾರಾ?
ಇಬ್ರಾಹಿಂಗೆ ಏನಾಗಿದೆ, ಈಗ ಅಲ್ಲಿಗೆ ಹೋಗಿ ಆಗಿದೆ. ಹೋದ ಮೇಲೆ ಏನಾದರೂ ಮಾಡಬೇಕು ಎನ್ನುವ ಒಂದೇ ಕಾರಣಕ್ಕೆ ಅವರು ಬರ್ತಾರೆ, ಇವರು ಬರ್ತಾರೆ ಅಂತ ಹೇಳ್ತಾ ಇದ್ದಾರೆ. ಇಬ್ರಾಹಿಂ ಅರ್ಥ ಇಲ್ಲದ ಹೇಳಿಕೆ ನೀಡಿದ್ದಾರೆ. ಇದರಿಂದ ನಾನು ಅವರ ಈ ಹೇಳಿಕೆ ಖಂಡನೆ ಮಾಡ್ತಿನಿ ಎಂದು ತಿಳಿಸಿದರು.
ಒಂದಿಂಚೂ ಭೂಮಿ ಮಹಾರಾಷ್ಟ್ರಕ್ಕೆ ಹೋಗಲ್ಲ: ಮಹಾಜನ್ ವರದಿ ಪ್ರಕಾರ ರಾಜ್ಯದ ಮಹಾರಾಷ್ಟ್ರ ಸಿಎಂ ಬಂದರೂ, ಸಹ ಕರ್ನಾಟಕ ಒಂದು ಇಂಚು ಭೂಮಿ ಸಹ ಹೋಗುವ ಪ್ರಶ್ನೆಯೇ ಇಲ್ಲ. ಇದಕ್ಕಿದ್ದಂತೆ ಮಹಾರಾಷ್ಟ್ರದವರು ಸುಮ್ಮನೆ ಗಡಿಕ್ಯಾತೆ ತೆಗೆಯುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಎಲ್ಲ ಪಕ್ಷದವರು, ಆರೂವರೆ ಕೋಟಿ ಕನ್ನಡಿಗರು ಒಟ್ಟಾಗಿ ಇದ್ದೇವೆ. ಒಂದಿಂಚು ಭೂಮಿ ಸಹ ಎಲ್ಲಿಯೂ ಹೋಗಲು ಬಿಡುವುದಿಲ್ಲ ಎಂದರು.
ಮಲ್ಲಿಕಾರ್ಜನ್ ಖರ್ಗೆಗೆ ತಲೆನೇ ಇಲ್ಲ: ಮಲ್ಲಿಕಾರ್ಜುನ್ ಖರ್ಗೆ ಅವರು ಹಿರಿಯರು, ನನಗ ದೊಡ್ಡಣ್ಣನ ಸಮಾನ. ಇಡೀ ಪ್ರಪಂಚ ಮೋದಿಯನ್ನು ಮೆಚ್ಷುತ್ತಿರುವಾಗ, ಮೋದಿಗೆ ನೂರು ತಲೆಯ ರಾವಣ ಎಂದಿದ್ದು ಸಮಂಜಸವಲ್ಲ. ನಾನು ಖರ್ಗೆ ಅವರಿಗೆ ಗೌರವ ಕೊಟ್ಟು ಹೇಳ್ತೇನೆ. ಖರ್ಗೆ ತಲೆ ಇಲ್ಲದೇ ಇಂಥ ಹೇಳಿಕೆ ನೀಡ್ತಾ ಇದ್ದಾರೆ. ಈ ಮಾತನ್ನು ಖರ್ಗೆ ಅವರು ಬಿಟ್ಟು ಬೇರೆರವರು ಹೇಳಿದ್ದರೆ, ನಾನು ಬೇರೆ ತರಹವೇ ಹೇಳ್ತಾ ಇದ್ದೆ. ಮೋದಿ ಎಲ್ಲ ಕಡೆ ಹೋಗ್ತಾ ಇದ್ದಾರೆ. ಅವರನ್ನು ಬಳಸಿಕೊಳ್ಳುತ್ತಿದ್ದೇವೆ. ಏಕೆಂದರೆ ಮೋದಿ ಆದರ್ಶ ರಾಜಕಾರಣಿ, ಮೋದಿ ಹೆಸರು ಹೇಳಿದ್ರೆ ಜನ ಓಟು ಕೊಡ್ತಾರೆ ಅಂತ ನಂಬಿಕೆ ನಮಗೂ ಇದೆ ಎಂದರು.
ಸಿದ್ದು ಹೇಳಿಕೆಗೆ ತೀರುಗೇಟು: ಮಾಜಿ ಸಿಎಂ ಸಿದ್ದರಾಮಯ್ಯ ತಿಹಾರ್ ಜೈಲಿಗೆ ಹೋಗಿ ಬಂದಿರುವ ಡಿ.ಕೆ.ಶಿವಕುಮಾರ್ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ನನ್ನ ಬಗ್ಗೆ ಹೇಳಿದ್ರೆ ನಾನು ಏನ್ ಹೇಳ್ಲಿ . ನಲಪಾಡ್, ಡಿ.ಕೆ.ಶಿವಕುಮಾರ್ ಯಾಕೆ ಜೈಲಿಗೆ ಹೋಗಿ ಬಂದ್ರು, ಮಾಧ್ಯಮಗಳಲ್ಲೇ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಎಷ್ಟು ಸಂಪತ್ತು ಸಿಕ್ತು ಅಂಥ ನೋಡಿದ್ದೇವೆ.
ಅದಕ್ಕೆ ಡಿ.ಕೆ.ಶಿವಕುಮಾರ್ ರನ್ನು ಒಳ ಒಳಗ ದ್ವೇಷ ಮಾಡಿ, ಮೇಲ್ನೂಟಕ್ಕೆ ತೃಪ್ತಿ ಪಡಿಸುವ ಕಾರ್ಯವನ್ನು ಸಿದ್ದರಾಮಯ್ಯ ಮಾಡ್ತಿದ್ದಾರೆ. ಅದೇ ರೀತಿ ಡಿ.ಕೆ.ಶಿವಕುಮಾರ್ ಸಹ ಒಳಗ ದ್ವೇಷ ಮಾಡಿ ಮೇಲೆ ಪ್ರೀತಿ ಮಾಡ್ತಾ ಇದ್ದಾರೆ. ಇಬ್ಬರು ಸಹ ಒಬ್ಬರಿಗೂಬ್ಬರು ಚಾಕು ಹಾಕುವ ಸ್ಥಿತಿಯಲ್ಲಿ ಇದ್ದಾರೆ. ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗಲ್ಲ.
ಅವರು ಕುರುಬರು ನನ್ನಜತೆ ಬನ್ನಿ ಸಿಎಂ ಆಗ್ತಿನಿ ಅಂತಾರೆ, ಅದೇ ರೀತಿ ಶಿವಕುಮಾರ್ ಒಕ್ಕಲಿಗರು ನನ್ಜ ಜತೆ ಬನ್ನಿ ನಾನು ಸಿಎಂ ಅಗ್ತಿನಿ ಅಂಥ ಅವರು ಹೇಳ್ತಾ ಇದ್ದಾರೆ. ಇಡಿ ಹಿಂದೂ ಸಮಾಜ ಬಿಜೆಪಿ ಜತೆಗೆ ಇದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಇಬ್ಬರನ್ನು ಸೋಲಿಸಿ, ಕಾಂಗ್ರೆಸ್ ಅನ್ನು ಸಂಪೂರ್ಣ ಸೋಲಿಸಿ, 150 ಕ್ಕೂ ಹೆಚ್ಚು ಸೀಟು ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ರೌಡಿ ಶೀಟರ್ ವಿವಾದಕ್ಕೆ ತತ್ತರಿಸಿದ ಬಿಜೆಪಿ ನಾಯಕರು: ಸಮರ್ಥನೆ, ಸ್ಪಷ್ಟೀಕರಣದಿಂದ ಕೇಸರಿ ಪಡೆಯಲ್ಲಿ ಗೊಂದಲ