ಶಿವಮೊಗ್ಗ: ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಕ್ಯಾನ್ಸರ್ ರೀತಿಯಲ್ಲಿ ಆಡಳಿತ ನಡೆಸಿವೆ ಎಂದು ಸಂಸದ ಬಿ ವೈ ರಾಘವೇಂದ್ರ ವಾಗ್ದಾಳಿ ನಡೆಸಿದರು.
ನಗರದದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಕ್ಯಾನ್ಸರ್ ರೀತಿಯಲ್ಲಿ ಆಡಳಿತ ನಡೆಸಿ ದೇಶಕ್ಕೆ ತುಂಬಾ ದೊಡ್ಡ ಗಾಯ ಮಾಡಿವೆ. ಆ ಗಾಯವನ್ನು ತೆಗೆಯುವ ಕೆಲಸ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು. ಅಷ್ಟು ವರ್ಷಗಳು ಆಗದೇ ಇರುವ ಆರ್ಟಿಕಲ್ 370, ಮತಾಂತರ ನಿಷೇಧ ಕಾಯ್ದೆ, ಹಿಜಾಬ್, ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸವನ್ನು ನಮ್ಮ ಪ್ರಧಾನಿ ಅವರು ಈಗ ಮಾಡುತ್ತಿದ್ದಾರೆ ಎಂದರು.
ಕೆಲವೇ ತಿಂಗಳುಗಳಲ್ಲಿ ಚುನಾವಣೆ ಬರುತ್ತಿದೆ ಪಕ್ಷದ ಕಾರ್ಯಕರ್ತರು ಸಂಘಟನೆ ಹಾಗೂ ಪಕ್ಷವನ್ನು ಬಲಪಡಿಸುವ ಮೂಲಕ ಸಂಘಟನೆ ಗಟ್ಟಿಗೊಳಿಸಬೇಕಿದೆ. ಹಾಗಾಗಿ ಎಲ್ಲರೂ ಕಾರ್ಯಪ್ರವೃತರಾಗಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಕುಮಾರ್ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್ ಅರುಣ್, ಎಸ್ ರುದ್ರೆಗೌಡ, ಶಾಂತರಾಮ್ ಸಿದ್ದಿ, ಭಾರತಿ ಶೆಟ್ಟಿ, ಹಾಗೂ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಸಂಪುಟ ವಿಸ್ತರಣೆ ವಿಚಾರ : ಶೀಘ್ರದಲ್ಲೇ ದೆಹಲಿಗೆ ಹೋಗಿ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಎಂದ ಸಿಎಂ