ಶಿವಮೊಗ್ಗ : ನಾಳೆ ನಡೆಯಲಿರುವ ಬಿಜೆಪಿ ಬಹೃತ್ ಸಮಾವೇಶ ಕ್ಕೆ ಎನ್ ಇ ಎಸ್ ಮೈದಾನದಲ್ಲಿ ವೇದಿಕೆ ಸಜ್ಜಾಗಿದೆ. ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೆರುತ್ತಿದ್ದು ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳ ಸೇಣಸಾಟದಲ್ಲಿ ಜಿಲ್ಲೆಯ ಚುನಾವಣಾ ಕಣ ಕೇಂದ್ರಬಿಂದುವಾಗಿದೆ.
ನಾಳೆ ಬಿ.ಎಸ್ ಯಡಿಯೂರಪ್ಪ ಪುತ್ರ ಸಂಸದ ಬಿ.ವೈ ರಾಘವೇಂದ್ರ ನಾಮಪತ್ರ ಸಲ್ಲಿಸಲ್ಲಿದ್ದಾರೆ. ನಾಳೆ ಬೆಳಗ್ಗೆ 10 ಘಂಟೆಗೆ ರಾಮಣ್ಣ ಶೆಟ್ಟಿ ಪಾರ್ಕನಿಂದ ಮೆರವಣಿಗೆ ಮೂಲಕ ರೋಡ್ ಶೋ ನಡೆಸಿ ನಂತರದಲ್ಲಿ ಎನ್ ಇ ಎಸ್ ಮೈದಾನದಲ್ಲಿ ಬಿಜೆಪಿ ಬಹೃತ್ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನ ಕ್ಕೆ ಮುಂದಾಗಿದೆ. ಸಮಾವೇಶ ದ ನಂತರ ಮಧ್ಯಾಹ್ನ 1 ಘಂಟೆಯಿಂದ 1-30ರ ಮುಹೂರ್ತದಲ್ಲಿ ಬಿ.ವೈ ರಾಘವೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ.
ನಾಳೆ ರಾಜ್ಯದ ಬಿಜೆಪಿ ಪ್ರಮುಖ ಮುಂಖಡರುಗಳಾದ ಎಸ್ ಎಂ ಕೃಷ್ಣಾ, ಶ್ರೀರಾಮಲು, ಕೊಡಚಿ ಶಾಸಕ ಪಿ.ರಾಜೀವ್, ಬಸವರಾಜ್ ಬೊಮ್ಮಯಿ, ರೇಣುಕಾ ಚಾರ್ಯ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಸಹ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ . ಈ ಮೂಲಕ ಯಡಿಯೂರಪ್ಪ ನವರಿಗೆ ಪ್ರತಿಷ್ಠಿತ ಕಣವಾಗಿರುವ ಶಿವಮೊಗ್ಗದಲ್ಲಿ ನಾಳೆ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.ಹಾಗಾಗಿ ಇಂದು ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಳ್ಳಲಾಗುತ್ತಿದೆ .
ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿ ಕಾರ್ಯಕ್ರಮ ಸ್ಥಳ ವೀಕ್ಷಿಸಿದ ನಂತರ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷರಾದ ಎಸ್ ರುದ್ರೆಗೌಡ ಅವರು ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ರಾಜ್ಯದ ಅನೇಕ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. ಹಾಗಾಗಿ ಸಮಾವೇಶ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ. ಸುಮಾರು ಐವತ್ತು ಸಾವಿರ ಜನ ಸೇರುವ ನೀರಿಕ್ಷೆ ಇದೆ ಇದರಿಂದ ಎಲ್ಲಾ ರೀತಿಯ ವ್ಯವಸ್ಥೆಗಳನ್ನ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಮತದಾರರು ಬಹೃತ್ ಪ್ರಮಾಣದಲ್ಲಿ ಬಂದು ಅಭ್ಯರ್ಥಿಯನ್ನ ಆಶಿರ್ವಾದ ಮಾಡಬೇಕು ಎಂದು ವಿನಂತಿಸುತ್ತೆನೆ ಎಂದರು.