ಶಿವಮೊಗ್ಗ: ಕಡಜದ ಹುಳು ಕಚ್ಚಿ ಭದ್ರಾವತಿಯಲ್ಲಿ ಮತ್ತೊಂದು ಸಾವು ಸಂಭವಿಸಿದೆ. ಕಡಜದ ಹುಳ ದಾಳಿಯಿಂದ ರಾಜಮಾಣಿಕ್ಯ (50) ಸಾವನ್ನಪ್ಪಿದ್ದಾರೆ. ಇವರು ಭದ್ರಾವತಿ ತಾಲೂಕು ಉಕ್ಕುಂದ ಗ್ರಾಮದ ನಿವಾಸಿಯಾಗಿದ್ದಾರೆ.
ರಾಜಮಾಣಿಕ್ಯ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಭದ್ರಾವತಿ ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದ ರಂಗಪ್ಪ ಎಂಬುವರ ತೆಂಗಿನ ತೋಟದಲ್ಲಿ ತೆಂಗಿನ ಕಾಯಿ ಕೀಳಲು ಹೋದಾಗ ಏಕಾಏಕಿ ಕಡಜದ ಹುಳುಗಳು ದಾಳಿ ನಡೆಸಿವೆ. ರಾಜಮಾಣಿಕ್ಯ ತಕ್ಷಣ ಮರದಿಂದ ಕೆಳಗೆ ಇಳಿದಿದ್ದಾರೆ. ಬಳಿಕ ಅವರನ್ನು ಭದ್ರಾವತಿಯ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಎರಡು ವಾರದ ಹಿಂದೆ ಅಡಿಕೆ ಗೊನೆ ಕೀಳುವಾಗ ಕಡಜದ ಹುಳ ದಾಳಿ ನಡೆಸಿ, ಇಬ್ಬರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಕಡಜ ಹುಳುಗಳ ದಾಳಿಗೆ ಭದ್ರಾವತಿಯಲ್ಲಿ ಇಬ್ಬರು ಬಲಿ