ಶಿವಮೊಗ್ಗ: ಜಿಲ್ಲೆಯ ಹೊರ ವಲಯದ ಕೇಂದ್ರ ಕಾರಾಗೃಹ ಸೆಲ್ನಲ್ಲಿ ಸಜಾ ಬಂಧಿ ಕೈದಿಗಳ ಜೊತೆ ಬೀಡಿ, ಹುಕ್ಕಾ ಹಾಗೂ ಲೈಟರ್ಗಳನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ.
ನಿನ್ನೆ ಶಿವಮೊಗ್ಗ ಜಿಲ್ಲಾ ಎಸ್ಪಿ ಮಿಥುನ್ ನೇತೃತ್ವದಲ್ಲಿ ಕೇಂದ್ರ ಕಾರಾಗೃಹದ ಮೇಲೆ ಏಕಾಏಕಿ ದಾಳಿ ನಡೆಸಲಾಗಿತ್ತು. ಈ ವೇಳೆ, ಪೊಲೀಸರು ಪ್ರತಿ ಸೆಲ್ ತಪಾಸಣೆ ನಡೆಸಿದರು. ಸೆಲ್ನಲ್ಲಿ ತಂಬಾಕು ಉತ್ಪನ್ನಗಳಾದ ಬೀಡಿ ಮತ್ತು ಸಿಗರೇಟ್, ಬೆಂಕಿ ಪೊಟ್ಟಣ, ಲೈಟರ್ ಹಾಗೂ ಪ್ಲಾಸ್ಟಿಕ್ ಬಾಟಲ್ನಿಂದ ಮಾರ್ಪಡಿಸಿ ತಯಾರಿಸಿದ ತಂಬಾಕು ಸೇದುವ ಚಿಲುಮೆ (ಹುಕ್ಕಾ) ಗಳು ದೊರೆತಿವೆ. ಇಷ್ಟೊಂದು ವಸ್ತುಗಳು ಜೈಲಿನ ಒಳಗೆ ಹೇಗೆ ಹೋದವು? ಎಂಬ ಪ್ರಶ್ನೆ ಮೂಡಿದ್ದು, ಅನುಮಾನ ಹುಟ್ಟುಹಾಕಿದೆ.
ಇದನ್ನೂ ಓದಿ: ಇದು ಬರೀ ಜೈಲಲ್ಲೋ ಅಣ್ಣ .. ಕೃಷಿ ಜೊತೆ ಮನಪರಿವರ್ತನಾ ಕೇಂದ್ರ
ಹಾಲಿ ಜೈಲಿನ ಸೆಕ್ಯೂರಿಟಿಯನ್ನು ರಾಜ್ಯ ಕೈಗಾರಿಕಾ ಭದ್ರತಾ ಪಡೆಗಳು ನೋಡಿಕೊಳ್ಳುತ್ತಿವೆ. ಆದರೂ ಇಷ್ಟೊಂದು ವಸ್ತುಗಳು ಸೆಲ್ ತನಕ ತಲುಪಿರುವುದರ ಹಿಂದೆ ಯಾರಿದ್ದಾರೆ ಎಂಬ ಅಂಶವನ್ನು ಪೊಲೀಸ್ ಇಲಾಖೆ ಹಾಗೂ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯವರು ಪತ್ತೆ ಹಚ್ಚಬೇಕಿದೆ. ದಾಳಿಯಲ್ಲಿ ಎಸ್ಪಿ ಮಿಥುನ್, ಹೆಚ್ಚುವರಿ ಎಸ್ಪಿ ವಿಕ್ರಮ ಅಮಟೆ, ಡಿವೈಎಸ್ಪಿಗಳು ಹಾಗೂ ಪೊಲೀಸ್ ಅಧಿಕ್ಷಕರು ಭಾಗಿಯಾಗಿದ್ದರು.
ಇದನ್ನೂ ಓದಿ: ಖೈದಿಗಳ ಮನ ಪರಿವರ್ತನೆಗೆ ವಿಜಯಪುರ ಕಾರಾಗೃಹದಿಂದ ಹೊಸ ಪ್ರಯತ್ನ