ETV Bharat / state

ಮೆಗ್ಗಾನ್ ಆಸ್ಪತ್ರೆಗೆ ಆಯನೂರು ಮಂಜುನಾಥ್, ಎಸ್ ರುದ್ರೇಗೌಡ ಭೇಟಿ, ಪರಿಶೀಲನೆ

ಮೆಗ್ಗಾನ್ ಆಸ್ಪತ್ರೆಗೆ ವಿಧಾನಪರಿಷತ್ ಸದಸ್ಯರಾದ ಎಸ್ ರುದ್ರೇಗೌಡ ಹಾಗೂ ಆಯನೂರು ಮಂಜುನಾಥ್ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಕೋವಿಡ್ ಸೋಂಕಿತರ ಕುರಿತು ಸಿಸಿಟಿವಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.

author img

By

Published : Apr 28, 2021, 2:59 PM IST

ಪರಿಶೀಲನೆ
ಪರಿಶೀಲನೆ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ಅದನ್ನು ತಕ್ಷಣವೇ ನಿವಾರಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ನಗರದ ಮೆಗ್ಗಾನ್ ಆಸ್ಪತ್ರೆಗೆ ವಿಧಾನಪರಿಷತ್ ಸದಸ್ಯರಾದ ಎಸ್ ರುದ್ರೇಗೌಡ ಹಾಗೂ ಆಯನೂರು ಮಂಜುನಾಥ್ ಮಂಗಳವಾರ ಭೇಟಿ ನೀಡಿ, ಕೋವಿಡ್ ಸೋಂಕಿತರ ಕುರಿತು ಸಿಸಿಟಿವಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಉತ್ತಮವಾಗಿದ್ದರೂ ಕೂಡ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಅದರಲ್ಲೂ ನರ್ಸ್ ಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಆಸ್ಪತ್ರೆಗೆ ದಾಖಲಾದಾಗ ರೋಗಿಗಳನ್ನು ನೋಡಿಕೊಳ್ಳಲು ಸಿಬ್ಬಂದಿ ಇರುವುದಿಲ್ಲ. ಹಾಗಾಗಿ ರೋಗಿಗಳ ಜೊತೆಗೆ ಅವರ ಮನೆಯವರು ಅಥವಾ ನಾನ್ ಕೋವಿಡ್ ವ್ಯಕ್ತಿಗಳು ಸೋಂಕಿತರಿಗೆ ಊಟ ಉಪಚಾರ ಮಾಡಿ ಮತ್ತೆ ಮನೆಗೆ ಹೋಗುತ್ತಿರುವುದರಿಂದ ಕೊರೊನಾ ಸೋಂಕು ಹೆಚ್ಚಾಗುತ್ತಿದೆ ಎಂದರು.

ಕೋವಿಡ್​ ಹೆಚ್ಚುತ್ತಿರುವ ಕಾರಣ ವೇತನ ಹೆಚ್ಚು ಕೊಟ್ಟರೂ ಚಿಂತೆ ಇಲ್ಲ, ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಮತ್ತು ಮೇಲ್ವಿಚಾರಕರು ಕೋವಿಡ್ ವಾರ್ಡ್ ಗಳಿಗೆ ಪಿಪಿಇ ಕಿಟ್ ಇಲ್ಲದೇ ಸಂಬಂಧಿಕರು ಹೋಗದಂತೆ ತಡೆಯಬೇಕು. ಅದರಲ್ಲೂ ಕೋವಿಡ್ ಇಲ್ಲದವರು ಕೂಡ ಹೋಗಿ ಬರುತ್ತಿದ್ದಾರೆ. ಹಾಗಾಗಿ ಅನಿವಾರ್ಯತೆ ಇದ್ದವರಿಗೆ ಪಿಪಿಇ ಕಿಟ್ ನೀಡಿ ಕಳಿಸಬೇಕು ಎಂದು ಸಲಹೆ ನೀಡಿದರು.

ನಂತರ ವಿಧಾನಪರಿಷತ್ ಸದಸ್ಯ ಎಸ್ ರುದ್ರೇಗೌಡ ಮಾತನಾಡಿ, ಮೆಗ್ಗಾನ್ ಆಸ್ಪತ್ರೆಯಲ್ಲಿ ಸೌಲಭ್ಯ ಚೆನ್ನಾಗಿದೆ. ರಾಜ್ಯದಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಡಿಮೆ ಇದೆ. ಹಾಗಂತ ಎಚ್ಚರ ತಪ್ಪುವಹಾಗಿಲ್ಲ. ಮೆಗ್ಗಾನ್ ಆಸ್ಪತ್ರೆಗೆ ಇನ್ನಷ್ಟು ಸೌಲಭ್ಯಗಳನ್ನು ನೀಡಬೇಕಾಗಿದೆ ಎಂದು ಹೇಳಿದರು.

ಕೋವಿಡ್ ಸೋಂಕಿತನಿಂದ ದೂರು: ಆಯನೂರು ಮಂಜುನಾಥ್ ಅವರಿಗೆ ಸೋಂಕಿತನೋರ್ವ ಹೋಂ ಕ್ವಾರಟೈಂನ್ ಇರುವವರಿಗೆ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯ ನೀಡುತ್ತಿಲ್ಲಾ. 14 ದಿನ ಮನೆಯಲ್ಲೇ ಇರಿ ಎಂದು ಹೇಳಿ ಕಳಿಸುತ್ತಿದ್ದಾರೆ. ನಂತರ ಯಾರೂ ಸಹ ನಮ್ಮ ಬಗ್ಗೆ ಕಾಲಜಿ ವಹಿಸುತ್ತಿಲ್ಲ. ಕೇವಲ ನಾಲ್ಕು ದಿನದ ಮಾತ್ರೆ ನೀಡಿ ಕಳಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ದೂರು ನೀಡಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.