ಶಿವಮೊಗ್ಗ: ಬ್ಯಾಂಕ್ ಹಾಗೂ ಸ್ವ-ಸಹಾಯ ಸಂಘದವರು ಸಾಲ ವಸೂಲಾತಿಗಾಗಿ ಕಾಟ ನೀಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಆಟೋ ಚಾಲಕರು ಹಾಗೂ ಮಾಲೀಕರ ಸಂಘ ಸದಸ್ಯರು ಪ್ರತಿಭಟನೆ ನಡೆಸಿದರು.
ಲಾಕ್ಡೌನ್ನ ಮೂರು ತಿಂಗಳು ಸಾಲ ವಸೂಲಾತಿ ಮಾಡಬಾರದು ಎಂದು ಸರ್ಕಾರ ಆದೇಶಿಸಿದೆ. ಆದರೆ, ಬ್ಯಾಂಕ್ ಹಾಗೂ ಸ್ವ-ಸಹಾಯ ಸಂಘದವರು ಸಾಲದ ಕಂತಿನ ಜೊತೆ ಮೂರು ತಿಂಗಳ ಬಡ್ಡಿಯನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈಗ ಯಾರು ಕಂತನ್ನು ಕಟ್ಟುವುದಿಲ್ಲವೋ ಅವರ ಆಟೋವನ್ನು ಸೀಜ್ ಮಾಡಲಾಗುತ್ತಿದೆ. ಇದರಿಂದ ಆಟೋ ಮಾಲೀಕರ ಜೀವನ ನಿರ್ವಹಣೆಗೆ ದಾರಿ ಕಾಣದಂತಾಗಿದೆ. ತಕ್ಷಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಮ್ಮ ನೆರವಿಗೆ ಧಾವಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.