ಶಿವಮೊಗ್ಗ: ಪರವಾನಗಿ ಮುಗಿದ ಮರಳನ್ನು ಮಾರಾಟ ಮಾಡಲು ಯತ್ನಿಸಿತ್ತಿದ್ದಕ್ಕೆ 15 ಕ್ಕೂ ಹೆಚ್ಚು ಲಾರಿಗಳನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಇನ್ನು ವಶಕ್ಕೆ ಪಡೆದಿರುವ ಲಾರಿಗಳನ್ನು ಶಿವಮೊಗ್ಗದ ಮಂಡ್ಲಿ ಬಳಿಯ ಡಿಎಆರ್ ಮೈದಾನಕ್ಕೆ ತಂದು ನಿಲ್ಲಿಸಲಾಗಿದೆ. ಇವುಗಳ್ನು ಗಣಿಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಅವಧಿ ಮುಗಿದ ಕಾರಣ ಲಾರಿ ವಶಕ್ಕೆ ಪಡೆದ ಪೊಲೀಸರು:
ಸೀಜ್ ಆಗಿರುವ ಎಲ್ಲಾ ಲಾರಿಯಲ್ಲೂ ಉಕ್ಕಡಗಾತ್ರಿಯಿಂದ ತಂದ ಮರಳಿದೆ. ಅಲ್ಲಿಂದ ನಗರಕ್ಕೆ ಮರಳು ತಂದಿರುವ ಲಾರಿಗಳು ತಮಗೆ ನೀಡಿರುವ ಅವಧಿಯ ಒಳಗೆ ಮರಳನ್ನು ಮಾರಾಟ ಮಾಡಬೇಕು. ಆದ್ರೆ, ಈಗ ಇರುವ ಲಾರಿಗಳ ಮರಳಿನ ಅವಧಿ ಮುಗಿದು ನಾಲ್ಕೈದು ದಿನಗಳಾಗಿದ್ದು, ಆದ ಕಾರಣ ಲಾರಿ ಸೀಜ್ ಮಾಡಲಾಗಿದೆ. ಲಾರಿಗಳನ್ನು ಕೋರ್ಟ್ಗೆ ಒಪ್ಪಿಸಿದ ಬಳಿಕ ಮಾಲೀಕರು ಲಾರಿಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ.
ಕೆಡಿಪಿ ಸಭೆ ಎಫೆಕ್ಟ್:
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮರಳಿನ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ಮರಳಿನ ಕ್ವಾರಿಗಳೆ ತೆರೆಯದೆ ಇದ್ರು ಸಹ ಜಿಲ್ಲೆಯಲ್ಲಿ ಮರಳಿನ ಲಾರಿಗಳು ಹೇಗೆ ಓಡಾಡುತ್ತಿವೆ. ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕಬೇಕು ಎಂಬ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ.
ಮರಳು ತಂದ 24 ಗಂಟೆಗಳಲ್ಲಿ ಮರಳನ್ನು ಮಾರಾಟ ಮಾಡಬೇಕು ಎನ್ನುತ್ತಾರೆ. ಆದ್ರೆ ಶಿವಮೊಗ್ಗ ಜಿಲ್ಲೆಯ ಮರಳಿಗೆ ಇರುವಷ್ಟು ಬೇಡಿಕೆ ಬೇರೆ ಜಿಲ್ಲೆಯ ಮರಳಿಗೆ ಇಲ್ಲ. ಇದರಿಂದ ಬೇರೆ ಜಿಲ್ಲೆಯ ಮರಳು ಅಂದ್ರೆ ತೆಗೆದು ಕೊಳ್ಳಲು ಬೇಗ ಮುಂದೆ ಬರುವುದಿಲ್ಲ. ಇದರಿಂದ ಮರಳು ಮಾರಾಟಕ್ಕೆ ತಡವಾಗಿದೆ. ದಯಮಾಡಿ ನಮಗೆ ನಮ್ಮ ಲಾರಿಗಳನ್ನು ಕೊಡಿಸಿದ್ರೆ ನಾವು ಜೀವನ ಮಾಡಿಕೊಂಡು ಹೋಗ್ತೆವೆ ಎನ್ನುತ್ತಾರೆ ಲಾರಿ ಮಾಲೀಕರು.