ಶಿವಮೊಗ್ಗ: ಮನುಷ್ಯ ಸಂಘ ಜೀವಿ. ತಾನು ವಾಸಿಸುವ ಪ್ರದೇಶದಲ್ಲಿ ನೆರೆಹೊರೆಯವರ ಜೊತೆ ಉತ್ತಮ ಸಂಬಂಧವನ್ನು ಹೊಂದಬೇಕಾಗುತ್ತೆ. ತಮ್ಮ ಹಾಗೂ ತಮ್ಮ ಸುತ್ತ ಮುತ್ತಲಿನವರ ಕಷ್ಟಗಳನ್ನು ಪರಿಹರಿಸಲು ಒಂದು ಸಂಘದ ಅವಶ್ಯಕತೆ ಇರುತ್ತದೆ. ಹಾಗಾಗಿ ನಗರದ ವಿವಿಧ ಕಾಲೋನಿಗಳಲ್ಲಿ ಸಂಘಗಳನ್ನು ಸ್ಥಾಪಿಸಿಕೊಳ್ಳುತ್ತಾರೆ. ಅದರಂತೆ ಶಿವಮೊಗ್ಗ ಜಿಲ್ಲೆಯಾದ್ಯಂತ ಅನೇಕ ನಿವಾಸಿಗಳ ಸಂಘಗಳು ಕಾರ್ಯಾಚರಿಸುತ್ತಿವೆ.
ಗ್ರಾಮಗಳಲ್ಲಾದ್ರೆ ಅಲ್ಲಿ ತಮ್ಮದೇ ಆದ ಪಂಚಾಯಿತಿ, ದೇವಾಲಯಗಳ ಸಮಿತಿ ಇರುತ್ತವೆ. ಆದರೆ, ನಗರ ದೊಡ್ಡ ಪ್ರಮಾಣದಲ್ಲಿರುವ ಕಾರಣ ಇಲ್ಲಿ ಬಡಾವಣೆ ನಿವಾಸಿಗಳ ಸಂಘ ಅನಿವಾರ್ಯವಾಗಿರುತ್ತದೆ.
ನಗರದಲ್ಲಿ ಹತ್ತಾರು ಬಡಾವಣೆಗಳು ಇರುತ್ತವೆ. ಈ ಬಡಾವಣೆಗಳು ದೊಡ್ಡದಾಗಿರುತ್ತವೆ. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾದ್ರೆ, ಗುಂಪಿನ ಅವಶ್ಯಕತೆ ಇರುತ್ತದೆ. ಇದರಿಂದ ಬಡಾವಣೆ ನಿವಾಸಿಗಳ ಸಂಘಗಳು ರಚನೆಯಾಗಿರುತ್ತವೆ. ಬಡಾವಣೆಯಲ್ಲಿ ಯಾವುದೇ ಸಮಸ್ಯೆ ಬಂದ್ರು ಸಹ ಅದನ್ನು ಪರಿಹರಿಸಲು ಇವುಗಳ ಸದಸ್ಯರು ಮುಂದಾಗುತ್ತಾರೆ.
ಸಂಘಗಳು ಬಡಾವಣೆಯ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡುತ್ತದೆ. ಇದರಲ್ಲಿ ನೀರು, ವಿದ್ಯುತ್, ರಸ್ತೆ, ಸೇರಿದಂತೆ ಕಿಡಿಗೇಡಿಗಳ ಹಾವಳಿ ತಡೆಯಲು ಪ್ರಯತ್ನ ಮಾಡುತ್ತವೆ. ನಿವಾಸಿಗಳ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುತ್ತವೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘ ಸಂಸ್ಥೆಗಳಿಗೆ ಪ್ರಾಮುಖ್ಯತೆ ಇರುತ್ತದೆ. ಸಂಘ ಸಂಸ್ಥೆಗಳು ತಮ್ಮ ಬಡಾವಣೆಯ ಮೂಲಭೂತ ಸೌಕರ್ಯ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿವೆ.
ಇದನ್ನೂ ಓದಿ: ಮೈಸೂರು: ಸಿಸಿಟಿವಿ ಕ್ಯಾಮರಾಗಳ ನಿರ್ವಹಣೆ ಸರಿಯಾಗಿಲ್ಲ!
ಶಿವಮೊಗ್ಗ ಜಿಲ್ಲೆಯಾದ್ಯಂತ ಅನೇಕ ಬಡಾವಣೆ ನಿವಾಸಿಗಳ ಸಂಘಗಳಿವೆ. ಇದರಲ್ಲಿ ಹಲವು ಸಂಘಗಳು ಸ್ಥಾಪನೆಯಾಗಿ 30 ರಿಂದ 40 ವರ್ಷಗಳಾಗಿವೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆ, ಜಯದೇವ ಬಡಾವಣೆ, ದುರ್ಗಿಗುಡಿ, ತಿಲಕ್ ನಗರ, ರಾಜೇಂದ್ರ ನಗರ, ಹೊಸಮನೆ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ.
ಗೋಪಾಲಗೌಡ ಬಡಾವಣೆಯ ನಿವಾಸಿಗಳು ಚಂದನವನ ಎಂಬ ಹೆಸರಿನ ಪಾರ್ಕ್ ಮಾಡಿಕೊಂಡಿದ್ದು, ಇಲ್ಲಿ ಹಲವು ಚಟುವಟಿಕೆಗಳನ್ನು ನಡೆಸುತ್ತಾರೆ. ಜಯದೇವ ಬಡಾವಣೆಯಲ್ಲಿ ನಿವಾಸಿಗಳ ಸಂಘದಿಂದ ಬಡಾವಣೆಯ ಸುತ್ತ ಸಿ.ಸಿ. ಕ್ಯಾಮರವನ್ನು ಅಳವಡಿಸಿ ಸುರಕ್ಷತೆ ಕಾಪಾಡಿಕೊಂಡಿದ್ದಾರೆ. ನಿವಾಸಿಗಳ ಸಂಘಗಳಿಗೆ ಎಲ್ಲಾ ರಾಜಕೀಯ ಪಕ್ಷಗಳು ಸಹ ಮನ್ನಣೆ ನೀಡುತ್ತಿವೆ. ಇದರಿಂದ ನಗರ ಪ್ರದೇಶದಲ್ಲಿ ನಿವಾಸಿಗಳ ಸಂಘಕ್ಕೆ ಬೇಡಿಕೆ ಹಾಗೂ ಮನ್ನಣೆ ಇದೆ.