ETV Bharat / state

ಮಂಜುನಾಥ ಗೌಡರ ವಿರುದ್ಧ ಬಿಜೆಪಿ ದ್ವೇಷದ ರಾಜಕಾರಣ.. ಅಶೋಕ ಮಳಲಗದ್ದೆ ಆರೋಪ

ಡಿಸಿಸಿ ಬ್ಯಾಂಕ್ ಅಭಿವೃದ್ಧಿಯ ಹಿಂದೆ ಮಂಜುನಾಥ ಗೌಡರ ಶ್ರಮ ಸಾಕಷ್ಟಿದೆ. ರಾಜ್ಯದಲ್ಲಿಯೇ ಮಾದರಿ ಬ್ಯಾಂಕ್ ಆಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಾಲೂಕಿನ ಏಳು ಸಾವಿರ ರೈತರಿಗೆ ಸುಮಾರು 36 ಕೋಟಿ ರೂ. ಸಾಲ ಮತ್ತು 1900 ರೈತರಿಗೆ 17 ಕೋಟಿ ರೂ., ಹೊಸ ಸಾಲವನ್ನು ನೀಡುವ ಜೊತೆಗೆ ಹೆಚ್ಚುವರಿಯಾಗಿ 600 ಮಂದಿ ರೈತರಿಗೆ 5 ಕೋಟಿ ರೂ. ನೀಡಲಾಗಿದೆ..

Sorabha pressmeet
Sorabha pressmeet
author img

By

Published : Jul 22, 2020, 5:30 PM IST

ಶಿವಮೊಗ್ಗ : ಸಹಕಾರಿ ಧುರೀಣ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಅವರನ್ನು ಡಿಸಿಸಿ ಬ್ಯಾಂಕ್ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿರುವುದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಮಳಲಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಶೋಕ ಮಳಲಗದ್ದೆ ಆರೋಪಿಸಿದ್ದಾರೆ.

ಸೊರಬ ಪಟ್ಟಣದಲ್ಲಿ ಆರ್‌ಎಎಂ ಅಭಿಮಾನಿ ಬಳಗ ಮತ್ತು ಸಹಕಾರ ಧುರೀಣರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಾತೀತವಾಗಿ ರೈತರ ಹಿತ ಕಾಪಾಡಲು ಹಣಕಾಸು ನೆರವನ್ನು ನೀಡಿ ರಾಜ್ಯದಲ್ಲಿ ಮಾದರಿಯಾಗಿ ನಡೆದುಕೊಂಡು ಬಂದ ಮಂಜುನಾಥ ಗೌಡರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿರುವುದರ ಹಿಂದೆ ಬಿಜೆಪಿಯ ದ್ವೇಷದ ರಾಜಕೀಯ ಅಡಗಿದೆ. ಡಿಸಿಸಿ ಬ್ಯಾಂಕ್‍ನಲ್ಲಿ ಆರ್‌ಎಂಎಂ ಅವರು ಯಾವುದೇ ಪಕ್ಷ ಎನ್ನದೇ ತಾರತಮ್ಯ ಮಾಡದೆ ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಪಕ್ಷದವರಿಗೂ ಸಾಕಷ್ಟು ಪ್ರಾತಿನಿದ್ಯ ನೀಡಿರುವುದೇ ಉದಾಹರಣೆ ಎಂದರು.

ಡಿಸಿಸಿ ಬ್ಯಾಂಕ್ ಅಭಿವೃದ್ಧಿಯ ಹಿಂದೆ ಮಂಜುನಾಥ ಗೌಡರ ಶ್ರಮ ಸಾಕಷ್ಟಿದೆ. ರಾಜ್ಯದಲ್ಲಿಯೇ ಮಾದರಿ ಬ್ಯಾಂಕ್ ಆಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಾಲೂಕಿನ ಏಳು ಸಾವಿರ ರೈತರಿಗೆ ಸುಮಾರು 36 ಕೋಟಿ ರೂ. ಸಾಲ ಮತ್ತು 1900 ರೈತರಿಗೆ 17 ಕೋಟಿ ರೂ., ಹೊಸ ಸಾಲವನ್ನು ನೀಡುವ ಜೊತೆಗೆ ಹೆಚ್ಚುವರಿಯಾಗಿ 600 ಮಂದಿ ರೈತರಿಗೆ 5 ಕೋಟಿ ರೂ., ನೀಡಲಾಗಿದೆ. ಮಾತ್ರವಲ್ಲದೇ ಮಧ್ಯಾವಧಿ ಸಾಲ, ವಾಹನ ಸಾಲ, ಸ್ತ್ರೀಶಕ್ತಿ ಸಂಘ ಮತ್ತು ಸ್ವಸಹಾಯ ಸಂಘಗಳಿಗೆ ಸೇರಿ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ ಎಂದರು.

ಬಳಿಕ ಆರ್‌ಎಂಎಂ ಅಭಿಮಾನಿ ಬಳಗದ ಹೆಚ್ ಗಣಪತಿ ಹುಲ್ತಿಕೊಪ್ಪ ಮಾತನಾಡಿ, ಡಿಸಿಸಿ ಬ್ಯಾಂಕ್‍ನ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಿಒಡಿ ತನಿಖೆ ನಡೆದಿದ್ದು, ನ್ಯಾಯಾಲದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ರಾಜ್ಯ ಬಿಜೆಪಿ ಸರ್ಕಾರ ಪ್ರಕರಣಕ್ಕೆ ಮರುಜೀವ ನೀಡಿ ಸಹಕಾರಿ ಕಾಯ್ದೆ 29ಸಿ ಅಡಿಯಲ್ಲಿ ಕ್ರಮಕೈಗೊಂಡಿದೆ. ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಮಂಜುನಾಥ ಗೌಡ ಒಬ್ಬರನ್ನೇ ವಜಾ ಮಾಡಿ ನ್ಯಾಯಾಲಯದ ಆದೇಶ ಉಲ್ಲಂಘಿಸುವ ಜೊತೆಗೆ ಬಿಜೆಪಿ ಸೇಡಿನ ರಾಜಕೀಯ ನಡೆಸುತ್ತಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಹಕಾರಿ ಧುರೀಣರಾದ ಸುಬ್ಬರಾವ್ ಮುಟುಗುಪ್ಪೆ, ಭಾಸ್ಕರ್ ಬರಿಗೆ, ಪುಟ್ಟಪ್ಪ ಬರಿಗೆ, ಸತ್ಯನಾರಾಯಣ ಹೊರಭಟ್ಟಿ ಇತರರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.