ETV Bharat / state

ಸೇನಾ ಸಂಘರ್ಷ.. ಸುಡಾನ್​ನಲ್ಲಿ ಸಿಲುಕಿರುವ ಹಕ್ಕಿಪಿಕ್ಕಿ ಜನಾಂಗದ ಕನ್ನಡಿಗರು: ನೆರವಿಗಾಗಿ ಸರ್ಕಾರಕ್ಕೆ ಮನವಿ

author img

By

Published : Apr 17, 2023, 11:43 PM IST

ಸೇನಾ ಪಡೆಗಳ ನಡುವಿನ ಸಂಘರ್ಷ ಪೀಡಿತ ಸುಡಾನ್​ನಲ್ಲಿ ಕರ್ನಾಟಕ ರಾಜ್ಯದ 31 ಜನ ಸಿಲುಕಿಕೊಂಡಿದ್ದು, ನೆರವಿಗಾಗಿ ಭಾರತ ಮತ್ತು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸೇನಾ ಸಂಘರ್ಷ
ಸೇನಾ ಸಂಘರ್ಷ

ಶಿವಮೊಗ್ಗ: ಆಫ್ರಿಕಾದ ಸುಡಾನ್​​ ರಾಜ್ಯದಲ್ಲಿ ಸೇನಾ ಪಡೆಗಳ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಕರ್ನಾಟಕ ರಾಜ್ಯದವರು ಸಿಲುಕಿಕೊಂಡಿದ್ದಾರೆ. ಇವರೆಲ್ಲಾ ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ಅಲ್ಲಿ ತಮ್ಮ ವ್ಯಾಪಾರದ ಸಲುವಾಗಿ ಹೋಗಿದ್ದರು. ರಾಜ್ಯದ 31 ಜನ ಸಿಲುಕಿ‌ಕೊಂಡಿದ್ದು, ಇದರಲ್ಲಿ ಶಿವಮೊಗ್ಗದ 7, ಚನ್ನಗಿರಿ 5, ಮೈಸೂರು ಜಿಲ್ಲೆ ಹುಣಸೂರು 19 ಜನ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹೊರಗಡೆ ಬಾಂಬ್ ಸದ್ದು, ಇಲ್ಲಿರುವವರನ್ನು ಭಯ‌ಭೀತರನ್ನಾಗಿಸಿದೆ. ಹೊರಗಡೆ ಹೋಗದ ಸ್ಥಿತಿ ಇದ್ದು, ಸಿಕ್ಕ ಅವಕಾಶದಲ್ಲಿ ಹೋಗಿ ದಿನಸಿ, ನೀರು ತೆಗೆದುಕೊಂಡು ಬರುವಂತಾಗಿದೆ. ನಮ್ಮನ್ನು ಇಲ್ಲಿಂದ ಭಾರತಕ್ಕೆ ಕರೆಯಿಸಿಕೊಳ್ಳಿ ಎಂದು ಶಿವಮೊಗ್ಗ ಹಕ್ಕಿಪಿಕ್ಕಿ ಕ್ಯಾಂಪ್​​ನ ಪ್ರಭು ಭಾರತ ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.

ನಾವು ಸುಡಾನ್ ದೇಶದ ಅಲ್ಪಶೀರ್ ಸಿಟಿಯಲ್ಲಿ ಇದ್ದೇವೆ. ಸುಮಾರು‌ 10 ದಿನದಿಂದ ನಾವು ಇಲ್ಲಿ ವಾಸವಾಗಿದ್ದೇವೆ. ನಮ್ಮ ಮನೆಯಲ್ಲಿ ಸಣ್ಣ-ಸಣ್ಣ ಮಕ್ಕಳಿದ್ದಾರೆ.‌ ನಮ್ಮ ಪರಿಸ್ಥಿತಿ‌ ಕಂಡು ಕುಟುಂಬದವರು ಕಣ್ಣೀರು ಸುರಿಸುತ್ತಿದ್ದಾರೆ. ನಾವು ಇಲ್ಲಿಂದ ಹೊರಗಡೆ ಹೋಗಲು ಕಷ್ಟವಾಗಿದೆ. ಭಾರತ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸುಡಾನ್ ಸೇನಾ ಸಂಘರ್ಷ: ನೂರಕ್ಕೂ ಹೆಚ್ಚು ಸಾವು, 600 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.