ETV Bharat / state

ಸದ್ಯಕ್ಕೆ ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳ ಇಲ್ಲ.. ಆರಗ ಜ್ಞಾನೇಂದ್ರ - ವಯೋಮಿತಿ ಸಡಿಲಿಕೆ ಅಗತ್ಯ ಇಲ್ಲ

ಪಿಎಸ್​ಐ ಪ್ರಕರಣ ಕೋರ್ಟ್​ನಲ್ಲಿದೆ. ಇದೇ ನೋಟಿಫಿಕೇಶನ್​ ಒಳಗೆ ಆದರೆ ವಯೋಮಿತಿ ಸಡಿಲಿಕೆ ಅಗತ್ಯ ಇಲ್ಲ. ಹಾಗಾಗದೇ ರದ್ದಾಗಿ, ಹೊಸದಾಗಿ ಪರೀಕ್ಷೆ ಆಗಬೇಕು ಎಂದರೆ ಆಗ ವಯೋಮಿತಿ ನಿಗದಿ ಪಡಿಸುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟ ಪಡಿಸಿದ್ದಾರೆ.

Home Minister Araga Gyanendra
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Oct 10, 2022, 9:28 PM IST

ಶಿವಮೊಗ್ಗ: ಸದ್ಯಕ್ಕೆ ಪೊಲೀಸ್ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ವಯೋಮಿತಿ ಹೆಚ್ಚಳ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೊಲೀಸ್ ಮತ್ತು ಮಿಲಿಟರಿ ಬೇರೆ ಇಲಾಖೆ ಥರ ಅಲ್ಲ. ದೈಹಿಕವಾಗಿ ಪ್ರಬಲವಾಗಿರಬೇಕು. ಸಣ್ಣ ವಯಸ್ಸಿನಲ್ಲಿ ನೇಮಕ ಮಾಡಿಕೊಂಡರೆ ಅವರಿಂದ ತುಂಬಾ ಉಪಯೋಗ ಇದೆ. ಈ ದೃಷ್ಟಿಯಿಂದ ಎರಡು ವರ್ಷ ಹೆಚ್ಚು ಮಾಡಬೇಕು ಎಂಬ ಚರ್ಚೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಸದ್ಯಕ್ಕೆ ವಯೋಮಿತಿ ಹೆಚ್ಚಳದ ಬಗ್ಗೆ ಹೇಳಲ್ಲ ಎಂದರು.

ಪಿಎಸ್​ಐ ಪ್ರಕರಣ ಕೋರ್ಟ್​ನಲ್ಲಿದೆ. ಇದೇ ನೋಟಿಫಿಕೇಶನ್​ ಒಳಗೆ ಆದರೆ, ವಯೋಮಿತಿ ಸಡಿಲಿಕೆ ಅಗತ್ಯ ಇಲ್ಲ. ಹಾಗಾಗದೇ ರದ್ದಾಗಿ, ಹೊಸದಾಗಿ ಪರೀಕ್ಷೆ ಆಗಬೇಕೆಂದರೆ ಆಗ ವಯೋಮಿತಿ ನಿಗದಿ ಪಡಿಸುತ್ತೇವೆ ಎಂದು ತಿಳಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ

ಭೂತಾನ್ ಅಡಕೆ ಆಮದು ಬಗ್ಗೆ ಆತಂಕ ಬೇಡ: ಬೇರೆ ಬೇರೆ ದೃಷ್ಟಿಯಿಂದ ಭೂತಾನ್​ ನಮ್ಮ ದೇಶಕ್ಕೆ ಅಗತ್ಯವಿದೆ. ಈ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಒಪ್ಪಂದಗಳಾಗಿವೆ. ಸರ್ಕಾರ ಬದಲಾದ ಕೂಡಲೇ ಒಪ್ಪಂದವನ್ನು ಮುರಿಯಲು ಸಾಧ್ಯವಿಲ್ಲ. ನಮ್ಮಲ್ಲಿ ಬೆಳೆದಂತಹವುಗಳನ್ನು ಅಲ್ಲಿಗೆ, ಅಲ್ಲಿ ಬೆಳೆದಂತವುಗಳನ್ನು ಇಲ್ಲಿಗೆ ಆಮದು ರಪ್ತು ಮಾಡಿಕೊಳ್ಳಬಹುದು ಎನ್ನುವ ಪ್ರೀಟ್ರೇಡ್​ ಒಪ್ಪಂದ ಆಗಿದೆ.

ಈ ಹಿನ್ನೆಲೆಯಲ್ಲಿ ಭೂತಾನ್​ನವರು ನಮ್ಮ ಅಡಕೆಯನ್ನು ನೀವು ಆಮದು ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. 17 ಸಾವಿರ ಹಸಿ ಅಡಕೆ ಒಣ ಅಡಕೆ ಅಲ್ಲ, ಹಸಿ ಅಡಕೆಗೆ 12 ಶೇ ಒಣ ಅಡಿಕೆ ಬರುತ್ತದೆ. ಅದರಲ್ಲೂ ಆ ಅಡಕೆ ಸಮುದ್ರ ಮಾರ್ಗದಲ್ಲೇ ಬರಬೇಕು ಎನ್ನುವ ಷರತ್ತು ಇದೆ. ಇದೆಲ್ಲಾ ಆಗಿ ಅಡಕೆ ಭಾರತ ಸೇರಬೇಕಾದರೆ ಕನಿಷ್ಠ 15 ದಿನಗಳಾದರೂ ಬೇಕು. ಅಷ್ಟು ದಿನಗಳಲ್ಲಿ ಅಡಿಕೆ ಹಾಳಾಗುತ್ತದೆ. ಹಾಗಾಗಿ ಅಡಕೆ ಭಾರತಕ್ಕೆ ತಲುಪುವುದೇ ಅನುಮಾನ.

ಒಂದು ವೇಳೆ ಬಂದರೂ, ಅದಕ್ಕಿಂತ ಹೆಚ್ಚಾಗಿ ಅದರ ಮೂರು ಪಟ್ಟು ಒಣ ಅಡಕೆ ಮತ್ತು ಅಡಕೆ ಉತ್ಪನ್ನಗಳನ್ನು ಭೂತಾನ್​ಗೆ ರಫ್ತು ಮಾಡುತ್ತಿದ್ದೇವೆ. ಭೂತಾನ್​ ಭಾರತದ ಅಡಕೆಗೆ ಉತ್ತಮ ಗ್ರಾಹಕ ದೇಶ. ಹಾಗಾಗಿ ಭೂತಾನ್​ನಿಂದ ಬರುವ ಅಡಕೆ ಆಮದು ಬಗ್ಗೆ ಆತಂಕ ಬೇಡ. ಇದರಿಂದ ಏನು ತೊಂದರೆ ಆಗುವುದಿಲ್ಲ. ಬೇರೆ ದೇಶದ್ದಲ್ಲಾ, ನಮ್ಮ ದೇಶದಲ್ಲಿ ಬೆಳೆದಿರುವ ಅಡಕೆಯೇ ಮುಂದಿನ ದಿನಗಳಲ್ಲಿ ನಮ್ಮ ಕುತ್ತಿಗೆಗೆ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಎಲೆಚುಕ್ಕೆರೋಗಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಎಲೆಚುಕ್ಕೆ ಭಯಾನಕವಾದಂತಹ ರೋಗ, ಹಾಗಾಗಿ ಸರ್ಕಾರ ಎಂಟು ಕೋಟಿ ಹಣ ಮಂಜೂರು ಮಾಡಿದೆ. ಒಂದು ರೌಂಡ್​ ಔಷಧ ಸಿಂಪಡಣೆಗೆ ರೈತರಿಗೆ ನೀಡಲು ಈಗಾಗಲೇ ನಾಲ್ಕು ಕೋಟಿ ಹಣ ಬಿಡುಗಡೆಯಾಗಿದೆ ಎಂದರು.

ಎಫ್ಎಸ್ಎಲ್ ವಿವಿಗೆ ಮನವಿ: ಗುಜರಾತ್​ನಲ್ಲಿ ಎಫ್ಎಸ್ಎಲ್ ​ವಿಶ್ವವಿದ್ಯಾಲಯ ಇದೆ. ನಮ್ಮ ರಾಜ್ಯಕ್ಕೂ ಎಫ್ಎಸ್ಎಲ್​ ವಿವಿ ಬೇಕೆಂದು ಹಿಂದಿನ ಬಾರಿ ಕೇಂದ್ರ ಗೃಹ ಸಚಿವರು ಬಂದಾಗ ಮನವಿ ಮಾಡಿದ್ದೇನೆ. ಇದಕ್ಕೆ ಒಪ್ಪಿದ್ದಾರೆ. ಇತ್ತೀಚೆಗೆ ಒಂದು ಪತ್ರ ಬರೆದು ಸ್ಥಳವನ್ನು ಗುರುತಿಸಿ ನಮಗೆ ಹೇಳಿ ಎಂದು ತಿಳಿಸಿದ್ದಾರೆ. ಹಾಗಾಗಿ ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗದ ಹೆಸರು ಕಳಿಸಲಾಗುತ್ತಿದೆ ಎಂದರು.

ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್​ ಯಾದವ್​ ನಿಧನಕ್ಕೆ ಆರಗ ಜ್ಞಾನೇಂದ್ರ ಸಂತಾಪ ಸೂಚಿಸಿದರು.

ಇದನ್ನೂ ಓದಿ: ಸಿಎಂ ಭೇಟಿಯಾದ ಮಹಾರಾಷ್ಟ್ರ ಶಾಸಕ ರಾಜು ಶೆಟ್ಟಿ: ಆಲಮಟ್ಟಿ ಜಲಾಶಯ ಎತ್ತರಿಸದಂತೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.