ಶಿವಮೊಗ್ಗ: ಕಾರಿನ ಮ್ಯಾಗ್ ವ್ಹೀಲ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ವಿನೋಬನಗರ ಪೊಲೀಸರು ಬಂಧಿಸಿದ್ದಾರೆ.
ವಿನೋಬನಗರ ಪೊಲೀಸ್ ಠಾಣೆಯ ಪಿಎಸ್ಐ ಇಲ್ಲಿನ ರೈಲ್ವೆ ಗೇಟ್ ಬಳಿ ವಾಹನ ತಪಾಸಣೆ ನಡೆಸುವಾಗ, ಸ್ವಿಪ್ಟ್ ಕಾರಿನಲ್ಲಿ ಬಂದ ಇಬ್ಬರು ಪೊಲೀಸರನ್ನು ನೋಡಿ ಕಾರನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿ ಪರಾರಿಯಾಗಲು ಯತ್ನಿಸಿದ್ದಾರೆ. ಆ ವೇಳೆ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ, ಕಾರಿನಲ್ಲಿ ನಾಲ್ಕು ಮ್ಯಾಗ್ ವ್ಹೀಲ್ಗಳು ಪತ್ತೆಯಾಗಿವೆ.
ಭದ್ರಾವತಿ ಹಳೆನಗರ ವಾಸವಿ ಕಾಲೋನಿಯ ನಿತೀನ್ ಶೆಟ್ಟಿ(35) ಹಾಗೂ ಧರ್ಮ(30) ಬಂಧಿತರು. ಇವರು ಮನೆ ಮುಂದೆ ನಿಲ್ಲಿಸುತ್ತಿದ್ದ ಕಾರಿನ ವ್ಹೀಲ್ಗಳನ್ನು ಕದ್ದು, ಮಾರಾಟ ಮಾಡ್ತಾ ಇದ್ದರು ಎನ್ನಲಾಗಿದೆ.