ಶಿವಮೊಗ್ಗ: ಶುಂಠಿ ಬೆಳೆಯೊಂದಿಗೆ ಗಾಂಜಾ ಬೆಳೆದಿದ್ದ ಇಬ್ಬರು ಆರೋಪಿಗಳನ್ನ ಕುಂಸಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ತಾಲೂಕು ಕುಂಸಿ ಬಳಿಯ ದೊಡ್ಡಮಟ್ಟಿ ಗ್ರಾಮದ ಪಾಂಡುರಂಗ(35) ಹಾಗೂ ಹನುಮಂತ(22) ಎಂಬುವರು ತಮ್ಮ ಶುಂಠಿ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದರು.
ಇದು ಸುಮಾರು 13 ಕೆಜಿಯಷ್ಟು ಹಸಿ ಗಾಂಜಾವಾಗಿದ್ದು, 26 ಸಾವಿರ ರೂ. ಮೌಲ್ಯದ್ದಾಗಿದೆ. ಕುಂಸಿ ಪಿಎಸ್ಐ ನವೀನ್ ಕುಮಾರ್ ಮಠಪತಿ ತಮ್ಮ ಸಿಬ್ಬಂದಿ ಜೊತೆ ದಾಳಿ ಮಾಡಿ, ಗಾಂಜಾ ಹಾಗೂ ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.