ETV Bharat / state

ಶಿವಮೊಗ್ಗ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಡಳಿತ ಸಹಾಯಕ ಲೋಕಾಯುಕ್ತ ಬಲೆಗೆ.. - ಈಟಿವಿ ಭಾರತ ಕರ್ನಾಟಕ

ಕಾರ್ಖಾನೆಯ ಲೈಸನ್ಸ್ ರದ್ದುಪಡಿಸಿದ ಬಗ್ಗೆ ಪ್ರಮಾಣ ಪತ್ರ ನೀಡಲು 30 ಸಾವಿರ ಲಂಚಕ್ಕೆ ಬೇಡಿಕೆ - ಲೋಕಾಯುಕ್ತ ಬಲೆಗೆ ಬಿದ್ದ ಕಾರ್ಖಾನೆ ಮತ್ತು ಬಾಯ್ಲರ್​​​​ಗಳ ಇಲಾಖೆಯ ಆಡಳಿತ ಸಹಾಯಕ

arrest of the Administrative Assistant
ಶಿವಮೊಗ್ಗ:ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಡಳಿತ ಸಹಾಯಕ ಲೋಕಾಯುಕ್ತ ಬಲೆಗೆ..
author img

By

Published : Mar 3, 2023, 8:26 PM IST

ಶಿವಮೊಗ್ಗ: ಶಿವಮೊಗ್ಗ ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಕಾರ್ಯನಿರ್ವಾಹಕ ಹಾಗೂ ಆಡಳಿತ ಸಹಾಯಕರೊಬ್ಬರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಗರದ ವಿನೋಬನಗರ ನಿವಾಸಿ ರಾಕೇಶ್ ಪಟೇಲ್ ಎಂಬುವವರ ಪಟೇಲ್ ಟೆಕ್ ಇಂಜಿನಿಯರಿಂಗ್ ಪ್ರೈ.ಲಿ ಎಂಬ ಕಾರ್ಖಾನೆಯ ಲೈಸನ್ಸ್​​​ ರದ್ದುಪಡಿಸಲು ಲಂಚ ಪಡೆಯುತ್ತಿದ್ದ, ಶಿವಮೊಗ್ಗ ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ಕಾರ್ಯನಿರ್ವಾಹಕ ಹಾಗೂ ಆಡಳಿತ ಸಹಾಯಕ ವಿಠಲ್ ನಾಯ್ಕ್ ಎಂಬುವವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ರಾಕೇಶ್ ಪಟೇಲ್ ಕಚೇರಿಗೆ ಭೇಟಿ ನೀಡಿ ತಮ್ಮ ಕಾರ್ಖಾನೆಯ ಲೈಸನ್ಸ್ ರದ್ದುಪಡಿಸಿದ ಬಗ್ಗೆ ಪ್ರಮಾಣ ಪತ್ರ ನೀಡಲು ಕೋರಿದ ಸಮಯದಲ್ಲಿ ಕಚೇರಿಯ ಸೂಪರ್​​ವೈಸರ್​​ ಆದ ವಿಠಲನಾಯ್ಕ ಲಂಚಕ್ಕೆ ಬೇಡಿಕೆ ಇಟ್ಟಿದ್ದು, 15 ಸಾವಿರ ರೂ. ಗಳನ್ನು ಪಡೆದಿದ್ದರು. ಆದರೂ ಲೈಸೆನ್ಸ್ ರದ್ದತಿ ಪ್ರಮಾಣ ಪತ್ರ ನೀಡಿರಲಿಲ್ಲ. ದೂರವಾಣಿ ಮುಖಾಂತರ ಪ್ರಮಾಣ ಪತ್ರದ ಬಗ್ಗೆ ವಿಚಾರಿಸಿದಾಗ, ನಾವು ತಿಳಿಸಿದ ಹಣ ನೀಡಿದ ನಂತರ ಪ್ರಮಾಣ ಪತ್ರ ನೀಡುವುದಾಗಿ ಹೇಳಿದ್ದರು. ರಾಕೇಶ್ ಪಟೇಲ್‍ ಆರ್ಥಿಕವಾಗಿ ನಷ್ಟದಲ್ಲಿದ್ದರೂ ಪುನಃ 30 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು, ಆಗ ರಾಕೇಶ್ ದಿನಾಂಕ 03-03-2023 ರಂದು ಲೋಕಾಯುಕ್ತ ಕಚೇರಿಗೆ ಬಂದು ದೂರಿ ನೀಡಿ ಪ್ರಕರಣ ದಾಖಲಿಸಿದ್ದರು.

ಅದರಂತೆ ವಿಠಲ್ ನಾಯ್ಕ ಲಂಚದ ಹಣ 30 ಸಾವಿರ ರೂ ಪಡೆಯುತ್ತಿರುವ ಸಮಯದಲ್ಲಿ ದಾಳಿ ನಡೆಸಿದ ಚಿತ್ರದುರ್ಗ ಕರ್ನಾಟಕ ಲೋಕಾಯುಕ್ತ ಕಚೇರಿ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮ ಮತ್ತು ಉಮೇಶ ಈಶ್ವರ ನಾಯ್ಕ ಪೊಲೀಸ್​ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ರವರು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಹೆಚ್. ರಾಧಾಕೃಷ್ಣ ಪೊಲೀಸ್​ ನಿರೀಕ್ಷಕ, ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಇವರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಲೋಕಾ ದಾಳಿ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎ1 ಆರೋಪಿ: ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಹರಿಹರ ಬೆಸ್ಕಾಂ ಇಂಜಿನಿಯರ್: ದಾವಣಗೆರೆಯಲ್ಲಿ ಗುತ್ತಿಗೆದಾರನಿಗೆ ಕಾಮಗಾರಿ ಮಂಜೂರಾತಿ ನೀಡುವುದಕ್ಕೆ ಲಂಚ ಪಡೆಯುತ್ತಿದ್ದ ಹರಿಹರ ಬೆಸ್ಕಾಂ ಇಂಜಿನಿಯರ್, ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಜಿಲ್ಲೆಯ ಹರಿಹರ ತಾಲೂಕಿನ ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕರಿಬಸಯ್ಯ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು.

ಹರಿಹರದ ತುಂಗಭದ್ರಾ ನದಿ ರಸ್ತೆಯ ಬೆಸ್ಕಾಂ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಬಲೆಗೆ ಬೀಳಿಸಿದ್ದರು. ಒಂದು ಫೈಲ್​ಗೆ ಐದು ಸಾವಿರ ಅಂತಾ 15 ಸಾವಿರ ರೂ ಗಳಿಗೆ ಕರಿಬಸಯ್ಯನವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈಗಾಗಲೇ ಒಂಬತ್ತು ಸಾವಿರ ರೂಪಾಯಿ ಪಡೆದಿದ್ದ ಇಂಜಿನಿಯರ್ ಕರಿಬಸಯ್ಯ, ಇನ್ನುಳಿದ ಆರು ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.