ಶಿವಮೊಗ್ಗ: ಸಾಗರ ತಾಲೂಕಿನ ದೊಂಬೆ ಗ್ರಾಮದ ಮನೆಯಲ್ಲಿ ದಾಸ್ತಾನು ಮಾಡಿದ್ದ 675 ಕೆಜಿ ತೂಕದ 12 ಚೀಲ ಅಡಿಕೆಯನ್ನು ಕದ್ದೊಯ್ದಿದ್ದ ಎಂಟು ಜನ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಯಶೋಧರ ಅಲಿಯಾಸ್ ಗುಂಡ(23), ಮಂಜುನಾಥ್(28), ಅರುಣ್(27), ಸಂದೇಶ್ ಅಲಿಯಾಸ್ ಸ್ಯಾಂಡಿ(22), ಶಂಶಾಕ್(21), ಕಾರ್ತಿಕ್(20), ಸಂದೀಪ್(24), ಶಾರೂಕ್ ಅಲಿ(24) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಠಾಣೆಯ ಏಳು ಪ್ರಕರಣಗಳಲ್ಲಿ ಅಂದಾಜು 5 ಲಕ್ಷ ಮೌಲ್ಯದ 805 ಕೆಜಿ ಸಿಪ್ಪೆ ಗೋಟು ಅಡಿಕೆ, 70 ಕೆಜಿ ಚಾಲಿ ಅಡಿಕೆ, 349 ಕೆಜಿ ಕೆಂಪು ಅಡಿಕೆ ಮತ್ತು 200 ಕೆಜಿ ಬಿಳಿ ಗೋಟು ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಓಮ್ನಿ ಕಾರು, ಎರಡು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಪಿಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ತಂಡಕ್ಕೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದಾರೆ.
ಓದಿ : ಆನ್ಲೈನ್ ರಮ್ಮಿ ಆಟದ ಗೀಳು.. ಎರಡು ಮಕ್ಕಳ ತಾಯಿ ನೇಣಿಗೆ ಶರಣು