ETV Bharat / state

ಶಾರಿಕ್ ಆರೋಗ್ಯ ಸುಧಾರಣೆಯ ನಂತರ ಹೆಚ್ಚಿನ ಮಾಹಿತಿ ಸಂಗ್ರಹ: ಸಚಿವ ಆರಗ ಜ್ಞಾನೇಂದ್ರ - ETV Bharath Karnataka

ಒಕ್ಕಗಲಿಗರಿಗೆ ಮೀಸಲಾತಿ ನೀಡುವ ಕುರಿತು ಸರ್ಕಾರ ಚಿಂತನೆ ಮಾಡುತ್ತಿದೆ. ಈ ವಿಷಯವಾಗಿ ಸಚಿವ ಆರ್ ಅಶೋಕ್ ಹಾಗೂ ಶಾಸಕರು ಚರ್ಚೆ ಮಾಡಿದ್ದಾರೆ, ಮುಂದೆ ನೋಡೋಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Etv Bharat
ಆರಗ ಜ್ಞಾನೇಂದ್ರ
author img

By

Published : Nov 28, 2022, 3:42 PM IST

ಶಿವಮೊಗ್ಗ: ಮಂಗಳೂರು ಕುಕ್ಕರ್ ಬ್ಲಾಸ್ಟ್ ರೂವಾರಿ ಶಾರಿಕ್ ಆರೋಗ್ಯ ಸುಧಾರಣೆಯಾದ ನಂತರ ಹೆಚ್ಚಿನ ಮಾಹಿತಿ ಸಂಗ್ರಹ ಮಾಡಲಾಗುವುದು. ಸ್ಫೋಟ ಪ್ರಕರಣದಲ್ಲಿ ಎನ್​ಐಎ ಕೂಲಂಕಷವಾಗಿ ತನಿಖೆ ಮಾಡುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬ್ಲಾಸ್ಟ್ ಪ್ರಕರಣದಲ್ಲಿ ಅನೇಕ ಮಾಹಿತಿ ದೊರಕಿದ್ದು, ಅದನ್ನು ಬಹಿರಂಗ ಪಡಿಸಲು ಆಗಲ್ಲ. ಪ್ರಕರಣ ಸಂಬಂಧ ಈವರೆಗೆ ಯಾರನ್ನೂ ಬಂಧಿಸಿಲ್ಲ. ಕೇವಲ ವಿಚಾರಣೆ ನಡೆಯುತ್ತಿದೆ. ಶಾರಿಕ್ ಆರೋಗ್ಯ ಸುಧಾರಿಸಿದ ಮೇಲೆ ತನಿಖೆ ಒಂದು ಹಂತಕ್ಕೆ ಬರಲಿದೆ. ಶಾರಿಕ್ ಎಲ್ಲೆಲ್ಲಿ ಓಡಾಡಿದ್ದಾನೆ ಎಂಬುದರ ಬಗ್ಗೆ ವಿಶೇಷ ತಂಡ ರಚನೆ ಮಾಡಿ ತನಿಖೆ ನಡೆಸಲಾಗುತ್ತಿದೆ ಎಂದರು.

ಒಕ್ಕಲಿಗರಿಗೆ ಮೀಸಲಾತಿ ಬಗ್ಗೆ ಚರ್ಚೆ : ಒಕ್ಕಗಲಿಗರಿಗೆ ಮೀಸಲಾತಿ ನೀಡುವ ಕುರಿತು ಸರ್ಕಾರ ಚಿಂತನೆ ಮಾಡುತ್ತಿದೆ. ಈ ವಿಷಯವಾಗಿ ಸಚಿವ ಅಶೋಕ್ ಹಾಗೂ ಶಾಸಕರು ಚರ್ಚೆ ಮಾಡಿದ್ದಾರೆ, ಮುಂದೆ ನೋಡೋಣ ಎಂದು ತಿಳಿಸಿದರು.

ಶಾರೀಕ್ ಆರೋಗ್ಯ ಸುಧಾರಣೆಯ ನಂತರ ಹೆಚ್ಚಿನ ಮಾಹಿತಿ ಸಂಗ್ರಹ

ಮಂಗಳೂರು ಭಾಗದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ಯಾಟಲೈಟ್ ಫೋನ್ ಹಡಗುಗಳಲ್ಲಿ ಹೆಚ್ಚು ಬಳಕೆ ಆಗುತ್ತದೆ. ಆಗ ಅದು ನಿಗದಿತ ಸ್ಥಳದಿಂದ ಆಚೆ ಈಚೆ ತೋರುತ್ತದೆ. ಈ ಕುರಿತು ಸಹ ಪರಿಶೀಲನೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಮತೀನ್ ಪತ್ತೆಗೆ ಮಾಡುತ್ತೇವೆ : ಶಂಕಿತ ಉಗ್ರ ಮತೀನ್ ನಾಪತ್ತೆಯಾಗಿ ಹಲವು ದಿನಗಳೇ ಕಳೆದಿವೆ. ಆತನನ್ನು ಕೆಲವು ಸಂಘಟನೆಗಳು ಬೇರೊಂದು ಕಡೆ ಇಡುವ ಪ್ರಯತ್ನ ನಡೆಸಿವೆ. ಆತ ಭೂಮಿ ಮೇಲೆ ಎಲ್ಲೆಯೇ ಇದ್ದರೂ ನಮ್ಮ ಪೊಲೀಸರು ಬಿಡಲ್ಲ ಗೃಹ ಸಚಿವರು ಖಡಕ್​ ಎಚ್ಚರಿಕೆ ರವಾನಿಸಿದರು.

ಮಹಾರಾಷ್ಟ್ರ ಗಡಿ ವಿಚಾರ: ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಘಟನೆ ನಡೆಯುತ್ತಿದ್ದು, ಈ ಕುರಿತು ಎರಡೂ ಸರ್ಕಾರಗಳ ಮಧ್ಯೆ ಮಾತುಕತೆ ನಡೆಯುತ್ತಿದೆ. ಎರಡು ಕಡೆಯ ಎಡಿಜಿಪಿ ಮಟ್ಟದಲ್ಲಿ ಸಭೆ ನಡೆಸಿದ್ದಾರೆ. ಯಾರೇ ಕಾನೂನು ಕೈಗೆತ್ತಿಕೊಂಡರೂ ಸಹ ಅವರನ್ನು ಬಿಡಲ್ಲ. ಈ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಲಾಗುವುದು ಎಂದರು.

ಜನರ ಕಣ್ಣೊರೆಸುವ ತಂತ್ರದ ಪಾದಯಾತ್ರೆ : ಶರಾವತಿ ಸಂಸ್ತ್ರಸ್ತರಿಗಾಗಿ ಈಗ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವುದು ಕೇವಲ ವೋಟಿನ ರಾಜಕೀಯಕ್ಕಾಗಿ ಅಷ್ಟೇ, 1962 ರಿಂದಲೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇದರಿಂದ ಕಾಂಗ್ರೆಸ್ ಇತ್ತೋ ಸತ್ತಿತ್ತೋ ಎಂದು ಕೇಳಬೇಕಿದೆ. ಅಂದಿನಿಂದ ಇಂದಿನವರೆಗೂ ಸಮಸ್ಯೆಯನ್ನು ಪರಿಹರಿಸಿಲ್ಲ. ತಾಂತ್ರಿಕ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರದೇ ಡಿನೋಟಿಫಿಕೇಷನ್ ಮಾಡಿದ್ದರು. ಈಗ ಒಟ್ಟಿಗೆ ಸರ್ವೇ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಡಿ ವಿವಾದ ಮುಗಿದು ಹೋದ ಅಧ್ಯಾಯ: ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.