ಶಿವಮೊಗ್ಗ: ಕಾಡಾನೆಯೊಂದು ಭತ್ತದ ಗದ್ದೆಗೆ ನುಗ್ಗಿ ಬೆಳೆ ನಾಶ ಮಾಡಿರುವ ಘಟನೆ ತಾಲೂಕಿನ ಉಂಬ್ಳೆಬೈಲು ಸಮೀಪದ ಸಾರಿಗೆರೆ ಎಂಬ ಗ್ರಾಮದಲ್ಲಿ ನಡೆದಿದೆ.
ಸಾರಿಗೆರೆ ಗ್ರಾಮದ ರೈತ ಸಿದ್ದರಾಮ ಶಿವಕುಮಾರ ಎಂಬಾತನ ಜಮೀನಿಗೆ ತಡರಾತ್ರಿ ನುಗ್ಗಿದ ಕಾಡಾನೆ, ಗದ್ದೆಯಲ್ಲಿ ಓಡಾಟ ನಡೆಸಿ ಭತ್ತದ ಪೈರುಗಳನ್ನೆಲ್ಲಾ ಸಂಪೂರ್ಣವಾಗಿ ನಾಶಪಡಿಸಿದೆ. ಆಹಾರ ಅರಸಿ ಕಾಡಾನೆ ಊರಿಗೆ ಬಂದಿರಬಹುದು ಎನ್ನಲಾಗಿದೆ.
ಇನ್ನು ಈ ವಿಚಾರವನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿಲಾಗಿದ್ದು, ಇಲಾಖೆ ಅಧಿಕಾರಿಗಳಾದ ಅಬ್ದುಲ್ ಕರೀಂ ನೇತೃತ್ವದ ತಂಡ ಭೇಟಿ ನೀಡಿ ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದೆ.