ಶಿವಮೊಗ್ಗ: ಬಾಲಕನೋರ್ವ ಪಕ್ಕದ ಮನೆಯ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪ ಪ್ರಕರಣ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದೆ. ಈ ಕುರಿತು ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಸಾಗರ ಪಟ್ಟಣದ ದಂಪತಿ ( ಬಾಲಕಿಯ ಪೋಷಕರು) ಕೂಲಿ ಕೆಲಸಕ್ಕೆ ಹೋದ ವೇಳೆ ಅವರ ಪುತ್ರಿ ಮೇಲೆ ಪಕ್ಕದ ಮನೆಯ ಬಾಲಕ ಅತ್ಯಾಚಾರ ಎಸಗಿದ್ದಾನೆಂದು ಆರೋಪ ಕೇಳಿಬಂದಿದೆ. ತನ್ನ ಪೋಷಕರು ಮನೆಗೆ ಬಂದ ವೇಳೆ ಪಕ್ಕದ ಮನೆಯ ಬಾಲಕ ನಡೆಸಿದ ಕೃತ್ಯದ ಬಗ್ಗೆ ಬಾಲಕಿ ತಿಳಿಸಿದ್ದಾಳೆ. ಸದ್ಯ ಈ ಕುರಿತು ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಕ್ಷನ್ 376 AB, 376/2/N ಪೊಕ್ಸೊ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: ಬಾವಿಗೆ ಬಿದ್ದ ಮದುವೆ ಮೆರವಣಿಗೆ ವಾಹನ : 6 ಮಂದಿ ದುರ್ಮರಣ
ಸದ್ಯ ಬಾಲಕನನ್ನು ಬಾಲ ಮಂದಿರದಲ್ಲಿ ಇರಿಸಲಾಗಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.